ಕ್ರೀಡೆ ಸುದ್ದಿ

ವಿಶ್ವಕಪ್ ನಲ್ಲಿ ಪುರುಷರ ತಂಡದಷ್ಟೇ ಮಹಿಳಾ ತಂಡಕ್ಕೂ ಸಮಾನ ಬಹುಮಾನ:ಐಸಿಸಿ ಐತಿಹಾಸಿಕ ನಿರ್ಧಾರ

Share It

ಐಸಿಸಿಯು ಪುರುಷ ಮತ್ತು ಮಹಿಳಾ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಪುರುಷರಿಗೆ ನೀಡುವಷ್ಟು ಬಹುಮಾನವನ್ನು ಮಹಿಳೆಯರಿಗೂ ನೀಡಲು ನಿರ್ಧರಿಸಿದೆ.

ಮಹಿಳೆಯರ ಟಿ20 ವಿಶ್ವ ಕಪ್ ಮುಂದಿನ ತಿಂಗಳಲ್ಲಿ ನಡೆಯಲಿದ್ದು ವಿಶ್ವಕಪ್ ನಿಂದಲೇ ಸಮಾನ ಬಹುಮಾನವನ್ನು ನೀಡಲು ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ನಿರ್ಧರಿಸಲಾಗಿದೆ.

ಯುಎಇಯಲ್ಲಿ ಮುಂದಿನ ಅಕ್ಟೋಬರ್ 3ರಿಂದ ಮಹಿಳಾ ವಿಶ್ವಕಪ್ ಪಡೆಯಲಿದ್ದು ಮಹಿಳಾ ವಿಜೇತ ತಂಡಕ್ಕೆ 19.59 ಕೋಟಿ ರೂ ಬಹುಮಾನ ಮತ್ತು ವಿಶ್ವ ಕಪ್ ನ ರನ್ನರ ತಂಡಕ್ಕೆ 9.79 ಕೋಟಿ ರೂ ಹಾಗೂ ಸೆಮಿ ಫೈನಲ್ ನಲ್ಲಿ ಸೋತ ಎರಡು ತಂಡಗಳಿಗೂ ತಲ 5.6 5 ಕೋಟಿ ನೀಡಲು ಐಸಿಸಿ ನಿರ್ಧರಿಸಿದೆ.

2023ರ t20 ಮಹಿಳಾ ವಿಶ್ವಕಪ್ ವಿಜಯದ ತಂಡ ಆಸ್ಟ್ರೇಲಿಯಾವು 11.22 ಕೋಟಿ ಬಹುಮಾನವನ್ನು ಪಡೆದಿತ್ತು ಆದರೆ ಈ ಬಾರಿ ವಿಶ್ವಕಪ್ ನಲ್ಲಿ ಅದಕ್ಕಿಂತ 8.37 ಕೋಟಿ ರೂ ಅಧಿಕವಾಗಿದೆ. ಕಳೆದ ಬಾರಿ ವಿಶ್ವ ಕಪ್ ನಲ್ಲಿ ಸೋತು ತಂಡಕ್ಕೆ 4.18 ಕೋಟಿ ರೂ ನೀಡಲಾಗಿತ್ತು ಈ ಬಾರಿ 9.79 ಕೋಟಿ ರೂ ನೀಡಲಾಗುತ್ತದೆ.

ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಕ್ರಿಕೆಟ್ ಇತಿಹಾಸದಲ್ಲಿ ಮಹಿಳೆಯರಿಗೂ ಮತ್ತು ಪುರುಷರಿಗೂ ಲಿಂಗಸಮಾನತೆ ತರುವ ಉದ್ದೇಶದಿಂದ ಪುರುಷರಿಗೆ t20 ವಿಶ್ವಕಪ್ ನಲ್ಲಿ 20.52 ಕೋಟಿ ಬಹುಮಾನ ನೀಡಿತ್ತು, ಈ ಮೊತ್ತಕ್ಕೆ ಸರಿಯಾಗಿ ಮಹಿಳೆಯರಿಗೂ ನೀಡಲು 2023ರ ಜುಲೈನಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಗಿತ್ತು ಎಂದು ಐಸಿಸಿ ತಿಳಿಸಿದೆ.


Share It

You cannot copy content of this page