ಬೆಲ್ತಂಗಡಿ: ಟ್ರೆಕ್ಕಿಂಗ್ ತೆರಳಿದ್ದ ಚಾರಣಿಗರು ದಾರಿ ತಪ್ಪಿ ಇಡೀ ದಿನ ಕಾಡಿನಲ್ಲಿ ಪರದಾಟ ನಡೆಸಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಬಲ್ಲಾಳಯರಾಯನ ದುರ್ಗದಲ್ಲಿ ನಡೆದಿದೆ.
ಘಟನೆಯಲ್ಲಿ ಹತ್ತು ಮಂದಿ ಚಾರಣಿಗರು ಕಾಡಿನಲ್ಲಿ ಅಇಲುಕಿಕೊಂಡಿದ್ದು, ರಾತ್ರಿಯಿಡೀ ಪರದಾಟ ನಡೆಸಿದರು. ಅವರನ್ನು ಕೊನೆಗೂ ರಕ್ಷಣೆ ಮಾಡಿದ ಸ್ಥಳೀಯರು, ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿದ್ದಾರೆ.
ಚಿತ್ರದುರ್ಗ ಮೂಲದ ಹತ್ತು ಜನರ ತಂಡ ಬೆಳ್ತಂಗಡಿ ಮೂಲಕ ಚಾರಣ ಆರಂಭಿಸಿತ್ತು. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಲ್ಲಾಳರಾಯ ದುರ್ಗದ ದುರ್ಗಮ ಕಾಡಿನಲ್ಲಿ ಇವರೆಲ್ಲರೂ ಸಿಲುಕಿದ್ದರು. ರಕ್ಷಣೆಗಾಗಿ ಕೂಗಿಕೊಂಡು ಇಡೀ ದಿನ ಕಾಡಿನಲ್ಲಿ ಅಲೆದಾಟ ನಡೆಸಿದ್ದರು ಎನ್ನಲಾಗಿದೆ.