ಬಿಬಿಎಂಪಿ ಘನ ತ್ಯಾಜ್ಯ ನಿರ್ವಹಣೆಯ ಟೆಂಡರ್ ಗೆ ಹೈಕೋರ್ಟ್ ತಡೆ
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಘನ ತ್ಯಾಜ್ಯ ನಿರ್ವಹಣೆಯ ಹೊಸ ಟೆಂಡರ್ಗೆ ಕರ್ನಾಟಕ ಹೈಕೋರ್ಟ್ ತಡೆ ನೀಡಿದೆ.
ಬೆಂಗಳೂರು ಮಹಾನಗರ ಗುತ್ತಿಗೆದಾರರ ಸಂಘ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಎರಡು ಕಾರಣಗಳಿಂದ 4,791 ಕೋಟಿ ರೂಪಾಯಿ ಮೊತ್ತದ ಘನ ತ್ಯಾಜ್ಯ ನಿರ್ವಹಣೆಯ ಹೊಸ ಟೆಂಡರ್ಗೆ ತಡೆ ನೀಡಿದೆ. ಈ ಮೂಲಕ ಸರ್ಕಾರಕ್ಕೆ ಹಿನ್ನೆಡೆಯಾಗಿದೆ.
ಎರಡು ಕಾರಣಗಳೇನು?: ನೀಡಿದ್ದ ಭರವಸೆ ಉಲ್ಲಂಘಿಸಿದ ರಾಜ್ಯಸರ್ಕಾರ ಹೈಕೋರ್ಟ್ಗೆ 4 ಪ್ಯಾಕೇಜ್ಗಳ ಕಸದ ಟೆಂಡರ್ ಮುಂದುವರಿಸುವುದಾಗಿ ಹೇಳಿತ್ತು. ಆದರೆ, ಸರ್ಕಾರ 33 ಪ್ಯಾಕೇಜುಗಳ ಕಸದ ಟೆಂಡರ್ಗಳಿಗೆ 7 ವರ್ಷಗಳ ಅವಧಿಗೆ ಟೆಂಡರ್ ನೀಡಿತ್ತು. ಈ ಒಂದು ಕಾರಣದಿಂದಲೂ ಹೈಕೋರ್ಟ್ ಘನ ತ್ಯಾಜ್ಯ ನಿರ್ವಹಣೆಯ ಹೊಸ ಟೆಂಡರ್ಗೆ ತಡೆ ನೀಡಿದೆ.
ಸಚಿವರ ಅನುಮೋದನೆ: ಸರ್ಕಾರ ತನ್ನ ಆದೇಶ ಪತ್ರದಲ್ಲಿ ಗುತ್ತಿಗೆದಾರರು ಸಕ್ಷಮ ಪ್ರಾಧಿಕಾರಗಳಿಂದ ಅಗತ್ಯ ಅನುಮೋದನೆಗಳನ್ನು ಪಡೆದು, ಇಲಾಖಾ ಸಚಿವರ ಅನುಮೋದನೆಯನ್ನು ತುರ್ತಾಗಿ ಅನುಷ್ಠಾನಗೊಳಿಸಲು ಆದೇಶಿಸಿದೆ ಮತ್ತು ಕ್ರಿಯಾ ಯೋಜನೆಯಲ್ಲಿ ಅನುಷ್ಠಾನಗೊಳಿಸಬೇಕಿರುವ ಕಾಮಗಾರಿಗಳನ್ನು ಅನಿವಾರ್ಯ ಮತ್ತು ಅನಿಯಂತ್ರಿತ ಕಾರಣಗಳಿಂದಾಗಿ ಬದಲಿಸಿ ಅನುಷ್ಠಾನಗೊಳಿಸಬೇಕಾದಲ್ಲಿ ಮುಖ್ಯ ಆಯಕ್ತರ ಸ್ಪಷ್ಟ ಶಿಫಾರಸ್ಸಿನ ಮೇರೆಗೆ ಇಲಾಖಾ ಸಚಿವರ ಅನುಮೋದನೆ ಪಡೆದುಕೊಂಡು ಅನುಷ್ಠಾನಗೊಳಿಸಬೇಕು ಎಂದು ಹೇಳಿತ್ತು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬೆಂಗಳೂರು ಗುತ್ತಿಗೆದಾರರ ಸಂಘ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದೆ. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಘನ ತ್ಯಾಜ್ಯ ನಿರ್ವಹಣೆಯ ಹೊಸ ಟೆಂಡರ್ಗೆ ಮಧ್ಯಂತರ ತಡೆ ನೀಡಿದೆ.
ಕಸಕ್ಕೂ ಕಟ್ಟಬೇಕು ಟ್ಯಾಕ್ಸ್: ಮನೆ, ಅಂಗಡಿ ಮುಂಗಟ್ಟಿನ ಕಸಕ್ಕೂ ತೆರಿಗೆ ಪಾವತಿ ಮಾಡಬೇಕು ಎಂದು ಬಿಬಿಎಂಪಿ ಸೂಚಿಸಿತ್ತು. ಈ ವಿಚಾರವಾಗಿ ಬಿಬಿಎಂಪಿ ಬಜೆಟ್ನಲ್ಲೂ ಘೋಷಣೆ ಮಾಡಲಾಗಿತ್ತು. ಈ ಮೂಲಕ 600 ಕೋಟಿ ರೂಪಾಯಿ ಆದಾಯ ಸಂಗ್ರಹಕ್ಕೆ ಬಿಬಿಎಂಪಿ ಗುರಿ ಹಾಕಿಕೊಂಡಿತ್ತು.
ಎಷ್ಟಿರಲಿದೆ ಬಿಬಿಎಂಪಿ ಕಸ ತೆರಿಗೆ?: ಅಂಗಡಿ ಮುಂಗಟ್ಟುಗಳಲ್ಲಿ ಪ್ರತಿ ಕೆಜಿ ಕಸಕ್ಕೆ 12 ರೂಪಾಯಿ ತೆರಿಗೆ ವಸೂಲಿಗೆ ಪಾಲಿಕೆ ಸಜ್ಜಾಗಿದೆ. ಪ್ರತಿ ತಿಂಗಳು ಕಸ ಸಂಗ್ರಹ ಹಾಗೂ ವಿಲೇವಾರಿ ವೆಚ್ಚ ಹೆಚ್ಚಾಗುತ್ತಿದ್ದು, ಈ ಕಾರಣದಿಂದ ತೆರಿಗೆ ವಿಧಿಸಲಾಗುತ್ತಿದೆ ಎಂದು ಬಿಬಿಎಂಪಿ ಹೇಳಿತ್ತು. ಕಟ್ಟಡದ ವಿಸ್ತೀರ್ಣದ ಆಧಾರತದ ಮೇಲೆ ಕಸದ ಶುಲ್ಕ ನಿಗದಿಪಡಿಸಲಾಗುತ್ತದೆ. ಆಸ್ತಿ ತೆರಿಗೆ ಜೊತೆಯೇ ಕಸ ತೆರಿಗೆಯನ್ನೂ ಪಾಲಿಕೆ ಸಂಗ್ರಹ ಮಾಡಲಿದೆ.


