ಅಮೆರಿಕಾ ದಾಳಿ ಹಿನ್ನೆಲೆ: ರಕ್ಷಣೆಗೆ ರಷ್ಯಾ ಸಹಾಯ ಯಾಚಿಸಿದ ಇರಾನ್

Share It

ನವದೆಹಲಿ: ಇರಾನ್ ಮೇಲೆ ಮೇಲೆ ಅಮೆರಿಕವು ನಡೆಸಿದ ದಾಳಿ ಬಳಿಕ ಉಭಯ ದೇಶಗಳ ನಡುವೆ ಉದ್ವಿಗ್ನತೆ ಹೆಚ್ಚಿದೆ. ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ರಷ್ಯಾ ಅಧ್ಯಕ್ಷ ಪುಟಿನ್ ಅವರ ಭೇಟಿಗೆ ತೆರಳಿದ್ದಾರೆ.

ಕಳೆದ ಕೆಲವು ವರ್ಷಗಳಲ್ಲಿ ರಷ್ಯಾದೊಂದಿಗಿನ ಇರಾನ್‌ನ ಮಿಲಿಟರಿ ಮತ್ತು ಕಾರ್ಯತಂತ್ರದ ಸಹಕಾರವು ಗಮನಾರ್ಹವಾಗಿ ಹೆಚ್ಚಾಗಿದೆ. ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಇರಾನ್ ರಷ್ಯಾವನ್ನು ಸಂಪರ್ಕಿಸುವುದು ಇದೇ ಮೊದಲಲ್ಲ.

ಪುಟಿನ್ ಮತ್ತು ಅಬ್ಬಾಸ್ ಅರಘ್ಚಿ ನಡುವಿನ ಸಭೆಯಲ್ಲಿ ಅಮೆರಿಕದ ಮಿಲಿಟರಿ ಕ್ರಮಗಳು, ಪಶ್ಚಿಮ ಏಷ್ಯಾದ ಪರಿಸ್ಥಿತಿ ಮತ್ತು ಉಕ್ರೇನ್ ಯುದ್ಧಕ್ಕೆ ಸಂಬಂಧಿಸಿದ ಅಂಶಗಳ ಬಗ್ಗೆಯೂ ಚರ್ಚಿಸಬಹುದು ಎಂದು ಹೇಳಲಾಗುತ್ತಿದೆ.

ಇರಾನ್‌ನ ಪರಮಾಣು ತಾಣಗಳ ಮೇಲೆ ದಾಳಿ ಬಳಿಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆ ಮಾತನಾಡುವ ಯಾವುದೇ ಯೋಜನೆ ರಷ್ಯಾ
ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಸದ್ಯಕ್ಕೆ ಇಲ್ಲ ಎಂದು ಕ್ರೆಮ್ಲಿನ್ ಸ್ಪಷ್ಟಪಡಿಸಿದ್ದಾರೆ.

ಇರಾನ್‌ನ 3 ಪರಮಾಣು ತಾಣಗಳ ಮೇಲೆ ಅಮೆರಿಕ ದಾಳಿ ನಡೆಸಿದ ನಂತರ ಟ್ರಂಪ್ ಮತ್ತು ಪುಟಿನ್ ನಡುವೆ ದೂರವಾಣಿ ಕರೆಯ ಸಾಧ್ಯತೆಯ ಬಗ್ಗೆ ಕೇಳಿದ ಪ್ರಶ್ನೆಗೆ ಡಿಮಿಟ್ರಿ ಈ ಉತ್ತರ ನೀಡಿದ್ದಾರೆ.

ಇರಾನ್‌ನ ಪರಮಾಣು ಯೋಜನೆಯನ್ನು ನಾಶಮಾಡುವ ಗುರಿಯೊಂದಿಗೆ ಅಮೆರಿಕ ಇರಾನ್‌ನ ಫೋರ್ಡೊ, ಇಸ್ಫಹಾನ್ ಮತ್ತು ನಟಾಂಜ್ ಪರಮಾಣು ತಾಣಗಳ ಮೇಲೆ ದಾಳಿ ಮಾಡಿತ್ತು.

ಇರಾನ್ ಪ್ರತೀಕಾರ ತೀರಿಸಿಕೊಳ್ಳಲು ಮುಂದಾದರೆ ಮತ್ತಷ್ಟು ದಾಳಿ ನಡೆಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.

ಇರಾನ್ ಪರಮಾಣು ಕೇಂದ್ರಗಳನ್ನು ಮೇಲೆ ಅಮೆರಿಕ ನಡೆಸಿದ ವೈಮಾನಿಕ ದಾಳಿಯ ನಂತರ, ಹಲವಾರು ದೇಶಗಳು ಇರಾನ್‌ಗೆ ಪರಮಾಣು ಸಿಡಿತಲೆಗಳನ್ನು ಪೂರೈಸಲು ಸಿದ್ಧವಾಗಿವೆ ಎಂದು ರಷ್ಯಾದ ಮಾಜಿ ಅಧ್ಯಕ್ಷ ಡಿಮಿಟ್ರಿ ಮೆಡ್ವೆಡೆವ್ ಹೇಳಿದ್ದಾರೆ.

ಎಕ್ಸ್ ನಲ್ಲಿ ಸರಣಿ ಪೋಸ್ಟ್‌ ಮಾಡಿರುವ ಮೆಡ್ವೆಡೆವ್, ಇಸ್ಫಹಾನ್, ನಟಾಂಜ್ ಮತ್ತು ಫೋರ್ಡೋವ್‌ನಲ್ಲಿರುವ ಯುಎಸ್ ಕಾರ್ಯಾಚರಣೆಯ ಗುರಿ ತಾಣಗಳು ಅದರ ಉದ್ದೇಶವನ್ನು ಸಾಧಿಸುವಲ್ಲಿ ವಿಫಲವಾಗಿವೆ ಮಾತ್ರವಲ್ಲದೆ, ವಾಸ್ತವವಾಗಿ, ವಿರುದ್ಧ ಫಲಿತಾಂಶವನ್ನು ನೀಡಿವೆ ಎಂದು ಹೇಳಿದ್ದಾರೆ.

ಇರಾನ್-ಇಸ್ರೇಲ್ ಸಂಘರ್ಷದಲ್ಲಿ ಅಮೆರಿಕ ಮೊದಲ ನೇರ ಮಿಲಿಟರಿ ಕಾರ್ಯಾಚರಣೆ ನಡೆಸಿರುವುದನ್ನು ಟ್ರಂಪ್ ದೃಢಪಡಿಸಿದ್ದು ಅಮೆರಿಕದ ಪಡೆಗಳು 6 ಬಿ-2 ಬಾಂಬರ್‌ಗಳನ್ನು ಬಳಸಿಕೊಂಡು ಸಂಘಟಿತ ಕಾರ್ಯಾಚರಣೆಯಲ್ಲಿ ಇರಾನ್‌ನ ಪರಮಾಣು ಸೌಲಭ್ಯಗಳನ್ನು ಗುರಿಯಾಗಿಸಿಕೊಂಡಿದ್ದು, 12 ನಿಖರ ನಿರ್ದೇಶಿತ ಬಾಂಬ್‌ಗಳನ್ನು ಬೀಳಿಸಿವೆ ಎಂದು ಹೇಳಿದ್ದಾರೆ.

ಇಸ್ರೇಲ್ ಮತ್ತು ಇರಾನ್‌ ನಡುವಿನ ಯುದ್ಧದಲ್ಲಿ ಅಮೆರಿಕದ ಸಶಸ್ತ್ರ ನೇರ ಹಸ್ತಕ್ಷೇಪವು ಜಾಗತಿಕ ಪ್ರಕ್ಷುಬ್ಧತೆಯನ್ನು ಹೆಚ್ಚಿಸುತ್ತದೆ. ಅಲ್ಲದೆ, ಹಲವು ದೇಶಗಳು ಪರಮಾಣು ಶಸ್ತ್ರಾಸ್ತ್ರಗಳು ಮತ್ತು ಹೈಪರ್‌ಸಾನಿಕ್ ಕ್ಷಿಪಣಿಗಳನ್ನು ಉತ್ಪಾದಿಸಲು ಯೋಚಿಸುತ್ತವೆ ಎಂದು ರಷ್ಯಾದ ಹಿರಿಯ ಸಂಸದರೊಬ್ಬರು ಹೇಳಿದ್ದಾರೆ.

ಇರಾನ್ ಮೇಲೆ ಅಮೆರಿಕ ದಾಳಿಯಿಂದ ಜಾಗತಿಕವಾಗಿ ಸಂಘರ್ಷದ ಉಲ್ಬಣದತ್ತ ಮತ್ತೊಂದು ಮೆಟ್ಟಿಲು ಏರಿದಂತಾಗಿದೆ. ಅಮೆರಿಕದ ಈ ಹಸ್ತಕ್ಷೇಪವು ಬಹಿರಂಗವಾಗಿ ಗುಂಪುಗಳ ಸೃಷ್ಟಿಗೆ ಕಾರಣವಾಗುತ್ತದೆ ಎಂದು ರಷ್ಯಾದ ಫೆಡರೇಶನ್ ಕೌನ್ಸಿಲ್‌ನ ಅಂತಾರಾಷ್ಟ್ರೀಯ ವ್ಯವಹಾರಗಳ ಸಮಿತಿಯ ಉಪಾಧ್ಯಕ್ಷ ಆ್ಯಂಡ್ರೆ ಕ್ಲಿಮೋವ್ ಹೇಳಿದ್ದಾರೆ.


Share It

You May Have Missed

You cannot copy content of this page