ಬೆಂಗಳೂರು: ಬಿಟಿಎಂ ಲೇಔಟ್ ಕ್ಷೇತ್ರದ ಶಾಸಕರು ಹಾಗೂ ಸಚಿವರಾದ ರಾಮಲಿಂಗಾ ರೆಡ್ಡಿ ಅವರ ಕೋರಮಂಗಲದ ಕಚೇರಿಯಲ್ಲಿ ಇ – ಖಾತಾ ಅಭಿಯಾನ ನಡೆಸುತ್ತಿದ್ದು, ಕ್ಷೇತ್ರದ ನೂರಾರು ಜನ ಭಾಗವಹಿಸಿ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ.
ಜು.14 ರಿಂದ ಅಭಿಯಾನ ಆರಂಭವಾಗಿದ್ದು, ಜು. 26 ರವರೆಗೆ ಬಿಬಿಎಂಪಿ ಸಿಬ್ಬಂದಿ ಹಾಗೂ ಸಚಿವರ ಗೃಹ ಕಚೇರಿಯ ಸಿಬ್ಬಂದಿ ಇ-ಖಾತಾ ಸೌಲಭ್ಯಗಳನ್ನು ಸಾರ್ವಜನಿಕರಿಗೆ ನೀಡಲಿದ್ದಾರೆ. ಅಗತ್ಯ ದಾಖಲಾತಿಗಳೊಂದಿಗೆ ಆಗಮಿಸಿದ ಸಾರ್ವಜನಿಕರು ಇ-ಖಾತಾ ಸೌಲಭ್ಯಪಡೆದುಕೊಳ್ಳುತ್ತಿದ್ದಾರೆ.

ಬೆಳಗ್ಗೆ 9.30 ರಿಂದ ಸಂಜೆ 4.30 ರವರೆಗೆ ಈ ಸೌಲಭ್ಯ ದೊರೆಯಲಿದ್ದು, ಕೋರಮಂಗಲದ ಬಿಬಿಎಂಪಿ ಕಚೇರಿಯಲ್ಲಿನ ಶಾಸಕರ ಭವನದ ಆವರಣದಲ್ಲಿ ಅಭಿಯಾನ ಆಯೋಜನೆ ಮಾಡಲಾಗಿದೆ. ಖಾತೆದಾರರು ಅಗತ್ಯ ದಾಖಲೆಗಳಾದ ಅಗತ್ಯ ದಾಖಲೆಗಳಾದ ಸೇಲ್ ಡೀಡ್ ಪ್ರತಿ, ಖಾತಾ ಪ್ರತಿ, ಇತ್ತೀಚಿನ ವಿದ್ಯುತ್ ಬಿಲ್, ಇತ್ತೀಚಿನ ಬಿಬಿಎಂಪಿ ಟ್ಯಾಕ್ಸ್ ರಸೀದಿ, ಪಾಸ್ ಪೋರ್ಟ್ ಅಳತೆಯ ಭಾವಚಿತ್ರ ಹಾಗೂ GPS ಲೋಕೇಷನ್ ಸಹಿತ ಕಟ್ಟಡದ ಭಾವಚಿತ್ರವನ್ನು ಜತೆಯಲ್ಲಿ ತರಬೇಕು.
ಸಾರ್ವಜನಿಕರ ಅನುಕೂಲಕ್ಕಾಗಿ ಈ ಅಭಿಯಾನ ಆರಂಭಿಸಿದ್ದು, ನಮ್ಮ ಕ್ಷೇತ್ರದ ನಾಗರಿಕರು ಈ ಸೌಲಭ್ಯವನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಡೆದುಕೊಳ್ಳಿ ಎಂದು ಸಚಿವ ರಾಮಲಿಂಗಾ ರೆಡ್ಡಿ ಅವರು ಮನವಿ ಮಾಡಿಕೊಂಡಿದ್ದಾರೆ.