ಸಿನಿಮಾ ಸುದ್ದಿ

ನಟಿ ರಮ್ಯಾ ಬೆಂಬಲಕ್ಕೆ ನಿಂತ ಚೇತನ್ ಅಹಿಂಸಾ : ಗೃಹ ಸಚಿವರಿಗೆ ಪತ್ರ ಬರೆದು ಕ್ರಮಕ್ಕೆ ಆಗ್ರಹ

Share It

ಬೆಂಗಳೂರು: ನಟಿ ರಮ್ಯಾ ವಿರುದ್ಧ ದರ್ಶನ್ ಅಭಿಮಾನಿಗಳು ನಡೆಸುತ್ತಿರುವ ಜಾಲತಾಣಗಳ ದಾಳಿಯ ವಿರುದ್ಧ ನಟ ಹಾಗೂ ಸಾಮಾಜಿಕ ಹೋರಾಟಗಾರ ನಟ ಚೇತನ್ ಅಹಿಂಸಾ ಧ್ವನಿಯೆತ್ತಿದ್ದು, ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಮಹಿಳಾ ಕಲಾವಿದರ ಮೇಲಿನ ದೌರ್ಜನ್ಯ ತಡೆಯುವ ನಿಟ್ಟಿನಲ್ಲಿ ಆರಂಭಿಸಿರುವ ತಮ್ಮ ಫೈರ್ ಸಂಸ್ಥೆಯ ಮೂಲಕ ಗೃಜಸಚಿವ ಡಾ. ಜಿ. ಪರಮೇಶ್ವರ ಅವರಿಗೆ ಪತ್ರ ಬರೆದಿರುವ ಅವರು, ನಟಿ ರಮ್ಯಾ ಸೇರಿದಂತೆ ಮಹಿಳೆಯರ ಮೇಲೆ ಆನ್ವಲೈನ್ ನಲ್ಲಿ ನಡೆಯುತ್ತಿರುವ ದಾಳಿಯನ್ನು ಖಂಡಿಸಿದ್ದು, ಇದರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಆನ್ ಲೈನ್ ದ್ವೇಷ ಮಹಿಳಾ ದೌರ್ಜನ್ಯದ ಭಾಗವೇ ಆಗಿದ್ದು, ಇಂತಹವರ ವಿರುದ್ಧ ಸೈಬರ್ ಅಪರಾಧ ವಿಭಾಗ ಜಾಗೃತವಾಗಿ ಕ್ರಮ ತೆಗೆದುಕೊಳ್ಳಬೇಕು. ನಟಿಯೂ ಸೇರಿ ಯಾವೊಬ್ಬ ಮಹಿಳೆಗೂ ಅವಮಾನ ಮಾಡುವ ಕಿಡಿಗೇಡಿಗಳನ್ನು ಕಾನೂನು ಶಿಕ್ಷಿಸದೆ ಬಿಡಬಾರದು ಎಂದು ಚೇತನ್ ಅಹಿಂಸಾ ತಿಳಿಸಿದ್ದಾರೆ. ಈಗಾಗಲೇ ನಟಿ ರಮ್ಯಾ ವಿರುದ್ಧದ ಅವಹೇಳನ ಕುರಿತು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಲು ಮಹಿಳಾ ಆಯೋಗ ತೀರ್ಮಾನಿಸಿದೆ.

ನಟ ದರ್ಶನ್ ಕೊಲೆ ಆರೋಪಕ್ಕೆ ಸಂಬಂಧಿಸಿದಂತೆ ರಮ್ಯಾ ಮಾಡಿದ ಟ್ವೀಟ್ ಗೆ ದರ್ಶನ್ ಅಭಿಮಾನಿಗಳು ಕೆಟ್ಟ ಕೆಟ್ಟ ಕಮೆಂಟ್ ಗಳನ್ನು ಮಾಡುತ್ತಿದ್ದಾರೆ. ಇದನ್ನು ಸ್ವತಃ ರಮ್ಯಾ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಾಕಿಕೊಂಡಿದ್ದು, ದರ್ಶನ್ ಅಭಿಮಾನಿಗಳ ವಿರುದ್ಧ ಕಿಡಿಕಾರಿದ್ದರು. ಇದೀಗ ದರ್ಶನ್ ಅಭಿಮಾನಿಗಳು ರಮ್ಯಾ ಅವರಿಗೆ ಬಾಯಿಗೆ ಬಂದಂತೆ ಕಮೆಂಟ್ ಹಾಕಿತ್ತಿದ್ದು, ಇದರ ವಿರುದ್ಧ ಕ್ರಮಕ್ಕೆ ಅನೇಕರು ಒತ್ತಾಯಿಸಿದ್ದಾರೆ.

ಇತ್ತೀಚೆಗೆ ನಟ ಪ್ರಥಮ್ ಹಲ್ಲೆಗೆ ದರ್ಶನ್ ಅಭಿಮಾನಿಗಳು ಎಂದು ಹೇಳಿಕೊಂಡಿದ್ದ ಗುಂಪೊಂದು ಪ್ರಯತ್ನ ನಡೆಸಿತ್ತು ಎಂಬ ಆರೋಪ ಕೇಳಿಬಂದಿತ್ತು. ಇದೀಗ ರಮ್ಯಾ ವಿರುದ್ಧ ದರ್ಶನ್ ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಈ ನಡುವೆ ಸುಪ್ರೀಂ ಕೋರ್ಟ್ ದರ್ಶನ್ ಜಾಮೀನು ಅರ್ಜಿಯ ತೀರ್ಪು ಕಾಯ್ದಿಸಿದ್ದು, ಒಂದು ವೇಳೆ ಜಾಮೀನು ತಿರಸ್ಕಾರವಾದರೆ, ದರ್ಶನ್ ಮತ್ತೇ ಜೈಲು ಸೇರಬೇಕಾದ ಅನಿವಾರ್ಯತೆ ಇದೆ.


Share It

You cannot copy content of this page