ದಾವಣಗೆರೆ: ಬಸ್ ಅಡ್ಡಗಟ್ಟಿ ಚಾಲಕನ ಮೇಲೆ ಹಲ್ಲೆ ನಡೆಸಿದ ಇಬ್ಬರು ಪೊಲೀಸರ ಮೇಲೆ ಐಫ್ ಐ ಆರ್ ದಾಖಲಿಸಲಾಗಿದೆ.
KSRTC ನಿಗಮ ವ್ಯಾಪ್ತಿಯ ದಾವಣಗೆರೆ ವಿಭಾಗದ ರೂಟ್ ಸಂಖ್ಯೆ 87 ರ ದಾವಣಗೆರೆ – ಬಳ್ಳಾರಿ ಬಸ್ ಕೂಡ್ಲಿಗಿ ಬಳಿಯ ಗಜಾಪುರದ ಬಳಿ ತೆರಳುವಾಗ ಎದುರುಗಡೆಯಿಂದ ಕಾರು ವೇಗವಾಗಿ ಬಂದಿತು. ಇದನ್ನು ಗಮನಿಸಿದ ಬಸ್ ಚಾಲಕ ಎಡಗಡೆಗೆ ವಾಹನ ತಿರುಗಿಸಿದರು. ಈ ವೇಳೆ ಬೈಕ್ ಗೆ ತಗುಲಿರುತ್ತದೆ.
ಇದರಿಂದ ಕೋಪಗೊಂಡ ಬೈಕ್ ಸವಾರರು, ಬಸ್ ಅಡ್ಡಗಟ್ಟಿ ಚಾಲಕನ ಮೇಲೆ ಹಲ್ಲೆ ನಡೆಸಿರುತ್ತಾರೆ. ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಚಾಲಕನ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಗಳು ಪೊಲೀಸರು ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರ ಗಮನಕ್ಕೆ ಈ ವಿಡಿಯೋ ಬಂದಿದ್ದು, ಚಾಲಕನ ಮೇಲೆ ಹಲ್ಲೆ ನಡೆಸಿದವರ ಮೆಲೆ ಕ್ರಮಕ್ಕೆ ಸೂಚಿಸಿದ್ದರು.
ಸಾರಿಗೆ ಸಚಿವರ ಸೂಚನೆಯ ಮೇರೆಗೆ ವಿಜಯ ನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಈ ಕುರಿತು ಮಾತನಾಡಿದ ನಿಗಮದ ವ್ಯವಸ್ಥಾಪಕ ನಿರ್ದೇಶಕರು, ಆ ಇಬ್ಬರು ಪೊಲೀಸರು ವಿರುದ್ಧ ಎಫ್ ಐಆರ್ ದಾಖಲು ಮಾಡಿಸಿದ್ದಾರೆ. ಆ ಮೂಲಕ ಸಂಸ್ಥೆಯ ಸಿಬ್ಬಂದಿಯ ವಿರುದ್ಧದ ಹಲ್ಲೆಗೆ ನಾವು ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ ಎಂಬ ಸಂದೇಶ ನೀಡಿದ್ದಾರೆ.