ಉಪಯುಕ್ತ ಸುದ್ದಿ

11.25 ಕೋಟಿ ವೆಚ್ಚದ ಅಂಜನಾಪುರ RTO ಕಚೇರಿ ಉದ್ಘಾಟನೆ ಮಾಡಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ

Share It

ಬೆಂಗಳೂರು: ನೂತನವಾಗಿ ಅಂಜನಾಪುರದಲ್ಲಿ ನಿರ್ಮಿಸಿರುವ ನೂತನ ಪ್ರಾದೇಶಿಕ ಸಾರಿಗೆ ಕಛೇರಿಯನ್ನು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅವರು ಉದ್ಘಾಟನೆ ಮಾಡಿದರು.

ಇದಲ್ಲದೆ ಸಾರಿಗೆ ಇಲಾಖೆಯು( RTO) ರಾಜ್ಯದಲ್ಲಿ 7 ಸ್ವಂತ ಕಛೇರಿ ಕಟ್ಟಡವನ್ನು ವೆಚ್ಚ ರೂ. 45.74 ಕೋಟಿಗಳಲ್ಲಿ‌ ಹೊಂದಿದೆ. RTO 8‌ ಸ್ವಂತ ಕಟ್ಟಡ ಕಛೇರಿಗಳು ನಿರ್ಮಾಣ ವೆಚ್ಚ ರೂ. 70.00 ಕೋಟಿಗಳು ಕಾಮಗಾರಿ ಪ್ರಗತಿಯಲ್ಲಿದೆ. ಮಧುಗಿರಿ ಮತ್ತು ಹೊನ್ನಾವರ ಕಛೇರಿ ಕಟ್ಟಡಗಳ ಕಾಮಗಾರಿಗಳನ್ನು ಒಟ್ಟು ರೂ.10.05 ಕೋಟಿಗಳ ವೆಚ್ಚದಲ್ಲಿ ನಿರ್ಮಿಸಲಾಗಿದ್ದು. ಶೀಘ್ರದಲ್ಲಿಯೇ ಪ್ರಾರಂಭಿಸಲಾಗುವುದು ಎಂದರು.

ಸ್ವಯಂ ಚಾಲಿತ ಪರೀಕ್ಷಾ ಪಥಗಳ ನಿರ್ಮಾಣ ಕಾಮಗಾರಿ, 9 ಡ್ರೈವಿಂಗ್ ಟ್ರ್ಯಾಕ್  ವೆಚ್ಚ ರೂ.44.21 ಕೋಟೆಗಳು ನಿರ್ಮಿಸಲಾಗಿದೆ. 28 ಡ್ರೈವಿಂಗ್ ಟ್ರ್ಯಾಕ್ ಕಾಮಗಾರಿ ಪ್ರಗತಿಯಲ್ಲಿದ್ದು, ಒಟ್ಟು ವೆಚ್ಚ ರೂ.203 ಕೋಟಿಗಳನ್ನು ಖರ್ಚು ಮಾಡಲಾಗಿದೆ ಎಂದರು.

ಹೊನ್ನಾವರ, ಚಾಮರಾಜನಗರ ಮತ್ತು ಚಿತ್ರದುರ್ಗ ಗಳಲ್ಲಿ ರೂ.21 ಕೋಟಿಗಳ ವೆಚ್ಚದಲ್ಲಿ ಡ್ರೈವಿಂಗ್ ಟ್ರ್ಯಾಕ್ ನಿರ್ಮಾಣ ಕೈಗೊಳ್ಳಲು ಉದ್ದೇಶಿಸಿದೆ. ಸ್ವಯಂ ಚಾಲಿತ ವಾಹನ ಪರೀಕ್ಷಾ ಕೇಂದ್ರ ಸ್ಥಾಪನೆಗೆ ಕ್ರಮ. ರಾಜ್ಯದಲ್ಲಿ ಜಿಲ್ಲೆಗೆ ಒಂದರಂತೆ ಪಿ.ಪಿ.ಪಿ. ಅಡಿ 32 ಸ್ಥಳಗಳಲ್ಲಿ ಸ್ವಯಂ ಚಾಲಿತ ವಾಹನ ಪರೀಕ್ಷಾ ಕೇಂದ್ರ ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

ಭಾರಿ ವಾಹನ ಚಾಲಕರ ತರಬೇತಿ ಕೇಂದ್ರಗಳು: ರಾಜ್ಯದಲ್ಲಿ ಗುಣಮಟ್ಟದ ಚಾಲಕರನ್ನು ತರಬೇತಿಗೊಳಿಸುವ ನಿಟ್ಟಿನಲ್ಲಿ ಭಾರಿ ವಾಹನ ಚಾಲಕರ 4 ತರಬೇತಿ ಕೇಂದ್ರಗಳನ್ನು ರೂ. 60.76 ಕೋಟಿಗಳಲ್ಲಿ ಸ್ಥಾಪಿಸಲಾಗಿದೆ.1 ತರಬೇತಿ ಕೇಂದ್ರ ಕಾಮಗಾರಿ ಪ್ರಗತಿಯಲ್ಲಿದ್ದು, ಅದರ ವೆಚ್ಚ 6.50 ಕೋಟಿ ಗಳಾಗಿದೆ. ಇದರೊಂದಿಗೆ, ವಿಜಯಪುರ, ಬಳ್ಳಾರಿ ಮತ್ತು ನಾಗಮಂಗಲ ಗಳಲ್ಲಿ ಭಾರಿ ವಾಹನ ಚಾಲಕರ ತರಬೇತಿ ಕೇಂದ್ರಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಕೃಷ್ಣಪ್ಪ ಹಾಗೂ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.


Share It

You cannot copy content of this page