ಬೆಂಗಳೂರು: ಕೆಎಸ್ಆರ್ ಟಿಸಿಯ ನೇಮಕಾತಿ ಉಪಕ್ರಮಗಳಿಗೆ Award for Institution Building ಮತ್ತು Best Inclusion Recruitment Program ವರ್ಗಗಳಲ್ಲಿ ಅಂತರರಾಷ್ಟ್ರೀಯ Asia’s Best Employer Brand- 2025 ಎರಡು ಪ್ರಶಸ್ತಿಗಳು ಲಭಿಸಿವೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (KSRTC) ಕೈಗೊಂಡಿರುವ ಅತ್ಯುತ್ತಮ ನೇಮಕಾತಿ ಉಪಕ್ರಮಗಳಿಗಾಗಿ
Award for Institution Building 2. Best Inclusion Recruitment Program ಪ್ರಶಸ್ತಿ-2025 ಎರಡು ವರ್ಗಗಳಲ್ಲಿ ಸಿಂಗಾಪುರದಲ್ಲಿ ನಡೆದ ಪ್ರಶಸ್ತಿ ಸಮಾರಂಭದಲ್ಲಿ ನೀಡಲಾಗಿದೆ.
ಕಳೆದ ಆರೇಳು ವರುಷಗಳಿಂದ ಸ್ಥಗಿತಗೊಂಡಿದ್ದ ನೇಮಕಾತಿಯನ್ನು ಪುನರ್ ಪ್ರಾರಂಭಿಸಿ, 300 ತಾಂತ್ರಿಕ ಸಹಾಯಕರು, 2000 ಚಾಲಕ ಕಂ ನಿರ್ವಾಹಕರು ಹಾಗೂ ಅನುಕಂಪದ ಆಧಾರದ ಮೇಲೆ 292 ವಿವಿಧ ಹುದ್ದೆಗಳಿಗೆ ನೇಮಕಾತಿ ಮಾಡಲಾಗಿದೆ.
ಈ ಎಲ್ಲಾ ನೇಮಕಾತಿ ಪ್ರಕ್ರಿಯೆಯು ಸಂಪೂರ್ಣವಾಗಿ ಅತ್ಯಂತ ಪಾರದರ್ಶಕತೆ ಹಾಗೂ ಮಾನವ ಹಸ್ತಕ್ಷೇಪವಿಲ್ಲದೆ, ಘಟಕಗಳ ನಿಯೋಜನೆಯನ್ನು ಸಹ ಗಣಕೀಕೃತ ಕೌನ್ಸಿಲಿಂಗ್ ಮೂಲಕ ಮಾಡಲಾಗಿದೆ. ಕಳೆದ ಒಂದುವರೆ ವರುಷದಲ್ಲಿ ಸುಮಾರು 2600 ವಿವಿಧ ಹುದ್ದೆಗಳ ನೇಮಕಾತಿಯ ಉಪಕ್ರಮವು 20th Employer Branding Awards ರವರು ಪ್ರದಾನ ಮಾಡುವ ಎರಡು ವರ್ಗದಲ್ಲಿ ಲಭಿಸಿರುತ್ತದೆ. ಪ್ಯಾನ್ ಪೆಸಿಫಿಕ್ ಹೋಟೆಲ್, ಸಿಂಗಪುರ್ ಇಲ್ಲಿ 2025ರ ಆಗಸ್ಟ್ 11 ರಂದು ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಿಗಮಕ್ಕೆ ಪ್ರಶಸ್ತಿಗಳನ್ನು ಪ್ರದಾನ ಮಾಡಿರುತ್ತಾರೆ.