ರಾಜಕೀಯ ಸುದ್ದಿ

SC ಮೀಸಲಾತಿ ವಿವಾದ ಸುಖಾಂತ್ಯ : H.C. ಮಹದೇವಪ್ಪ ತಾಳ್ಮೆಗೆ ಬಹುಪರಾಕ್ !

Share It

ಬೆಂಗಳೂರು : ಪರಿಶಿಷ್ಟ ಜಾತಿಗಳ ಮೀಸಲಾತಿ ವಿಚಾರದಲ್ಲಿ ಜಸ್ಟೀಸ್ ನಾಗಮೋಹನ್ ದಾಸ್ ಅವರ ವರದಿಯ ಅನುಷ್ಠಾನದ ಕುರಿತು ರಾಜ್ಯದಲ್ಲಿ ಉಂಟಾಗಿದ್ದ ಗೊಂದಲ ಇದೀಗ ತಿಳಿಯಾಗಿದೆ. ಇದಕ್ಕೆ H.C. ಮಹದೇವಪ್ಪ ವಹಿಸಿದ ತಾಳ್ಮೆ ಇದೀಗ ಮೆಚ್ಚುಗೆಗೆ ಪಾತ್ರವಾಗಿದೆ.

ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಜಾರಿಯಾಗಬೇಕು ಎಂಬುದು ಬಹಳ ದಿನಗಳ ಬೇಡಿಕೆ. ಈ ಬೇಡಿಕೆಗೆ ಇತ್ತೀಚೆಗೆ ಸರಕಾರ ತಾರ್ಕಿಕ ಅಂತ್ಯವಾಡುವ ಪ್ರಯತ್ನ ನಡೆಸಿತ್ತು. ಜಸ್ಟೀಸ್ ನಾಗಮೋಹನ್ ದಾಸ್ ಅವರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿ, ಸಮೀಕ್ಷೆ ನಡೆಸಲಾಗಿತ್ತು. ಈ ಸಮಿತಿ ನೀಡಿದ ವರದಿಯಲ್ಲಿನ ಕೆಲ ಗೊಂದಲಗಳ ವಿರುದ್ಧ ಬಲಗೈ ಸಮುದಾಯಗಳು ಪ್ರತಿಭಟನೆ ನಡೆಸಿದ್ದವು.

ವರದಿಯ ಪ್ರಕಾರ ಎಡಗೈ ಸಮುದಾಯ ಅತಿಹೆಚ್ಚು ಜನಸಂಖ್ಯೆಯನ್ನು ಹೊಂದಿದೆ ಎಂದು ಹೇಳಿದ್ದು, ಆ ಸಮುದಾಯಕ್ಕೆ ಶೇ. 6 ರಷ್ಟು ಮೀಸಲಾತಿ ನೀಡುವಂತೆ ಶಿಫಾರಸು ಮಾಡಲಾಗಿತ್ತು. ಈ ನಡುವೆ ಬಲಗೈ ಸಮುದಾಯಗಳಿಗೆ ಶೇ.5 ರಷ್ಟು ಮೀಸಲಾತಿ ನೀಡುವ ಶಿಫಾರಸು ಮಾಡಿತ್ತು. ಇನ್ನುಳಿದ ಸ್ಪೃಶ್ಯ ಸಮುದಾಯಗಳಿಗೆ ಶೇ. 5 ರಷ್ಟು ಮೀಸಲಾತಿ ನೀಡಬೇಕು ಎಂಬುದು ವರದಿಯ ಸಾರಾಂಶವಾಗಿತ್ತು. ಆದರೆ, ಈ ತೀರ್ಮಾನಕ್ಕೆ ಬಲಗೈ ಸಮುದಾಯಗಳು ಆಕ್ರೋಶ ವ್ಯಕ್ತಪಡಿಸಿದ್ದು, ಬಲಗೈ ಪಂಗಡದ ಕೆಲವು ಸಮುದಾಯಗಳನ್ನು ಬೇರೆ ಕೋಷ್ಟಕದಲ್ಲಿ ಸೇರಿಸಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಈ ಕುರಿತು ಸಚಿವ ಸಂಪುಟ ಸಭೆ ಅಂತಿಮ ತೀರ್ಮಾನ ತೆಗೆದುಕೊಂಡು, ಬಲಗೈ ಮತ್ತು ಎಡಗೈ ಸಮುದಾಯಗಳಿಗೆ ಸಮಾನವಾಗಿ ಶೇ. 6 ರಷ್ಟು ಮೀಸಲಾತಿ ನೀಡಿದ್ದು, ಉಳಿದ ಸಮುದಾಯಗಳಿಗೆ ಶೇ. 5 ರಷ್ಟು ಮೀಸಲಾತಿ ಮುಂದುವರಿಸಿದೆ. ಪರೆಯ, ಮೊಗೇರ ಸಮುದಾಯಗಳನ್ನು ಬಲಗೈ ಪಂಗಡಕ್ಕೆ ಸೇರ್ಪಡೆ ಮಾಡಿ, ಅವರಿಗೆ ಪ್ರತ್ಯೇಕವಾಗಿ ನೀಡಿದ್ದ ಶೇ.1 ರಷ್ಟು ಮೀಸಲಾತಿ ಅನ್ನು ಬಲಗೈ ಸಮುದಾಯದೊಳಗೆ ವಿಲೀನ ಮಾಡಲಾಗಿದೆ.

ಈ ಪ್ರಕ್ರಿಯೆ ಸರಕಾರ ಸ್ವಲ್ಪ ಆತುರ ತೋರಿದ್ದರೂ ದೊಡ್ಡ ಅನಾಹುತಕ್ಕೆ ದಾರಿ ಮಾಡಿಕೊಡಲಿತ್ತು. ಅನೇಕ ಎಡಗೈ ಸಮುದಾಯದ ನಾಯಕರು H.C. ಮಹದೇವಪ್ಪ ಎಡಗೈ ಸಮುದಾಯದ ಏಳಿಗೆಯ ವಿರೋಧಿ ಎಂದು ಬಿಂಬಿಸುವ ಪ್ರಯತ್ನ ಮಾಡಿದ್ದರು. ಆದರೆ, ಇದೆಲ್ಲವನ್ನೂ ಸಮಾಧಾನವಾಗಿಯೇ ನಿಭಾಯಿಸಿದ ಅವರು, ಯಾವುದೇ ಸಮುದಾಯಕ್ಕೆ ಅನ್ಯಾಯವಾಗದಂತೆ, ಬಹುದಿನದ ಬೇಡಿಕೆಯೂ ಈಡೇರುವಂತಹ ಐತಿಹಾಸಿಕ ತೀರ್ಮಾನ ತೆಗೆದುಕೊಂಡಿದ್ದಾರೆ.

ಮಹದೇವಪ್ಪ ಯಾವುದೇ ಮುಖಂಡರ ಹೇಳಿಕೆಗೆ ಪ್ರತಿಕ್ರಿಯೆ ನೀಡದೆ ತಾಳ್ಮೆಯಿಂದಲೇ ವರ್ತಿಸಿ, ಅಂತಿಮವಾಗಿ ಎರಡು ಸಮುದಾಯಗಳ ನಡುವೆ ಬಿರುಕು ಉಂಟಾಗದಂತೆ ಸಮಚಿತ್ತದಿಂದ ತೀರ್ಮಾನ ಮಾಡಿದ್ದಾರೆ. ಸಚಿವ ಸಂಪುಟದ ಈ ತೀರ್ಮಾನಕ್ಕೆ ಉಭಯ ಸಮುದಾಯಗಳು ತೃಪ್ತಿ ವ್ಯಕ್ರಪಡಿಸಿದ್ದು, ಇದರ ಹಿಂದಿನ ಶಲದತಿಯಾಗಿ ಮಹದೇವಪ್ಪ ನಿಲ್ಲುತ್ತಾರೆ.

ಎಡಗೈ ಸಮುದಾಯದ ನಾಯಕರ ಹೇಳಿಕೆಯಿಂದ ಮಹಾದೇವಪ್ಪ ಏನಾದರೂ ವಿಚಲಿತರಾಗಿ ಯಾಚುದಾದರೂ ಹೇಳಿಕೆ ನೀಡಿದ್ದರೂ ಎರಡು ಸಮುದಾಯಗಳ ನಡುವಿನ ಬಿರುಕು ಹೆಚ್ಚಾಗುತ್ತಿತ್ತು. ಆದರೆ, ಇದೀಗ ಸಮಾನಾಂತರ ಮೀಸಲಾತಿ ಮೂಲಕ ಈ ಹಿಂದಿನ ಬಾಂಧವ್ಯ ಮುಂದುವರಿಯಲು ಅನುಕೂಲವಾಗಿದೆ. ಇಂತಹ ಸಂಯಮ ಕಾಪಡಿಕೊಂಡ ಎಚ್.ಸಿ. ಮಹಾದೇವಪ್ಪ ಅವರ ನಡೆಗೆ ರಾಜಕೀಯ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.


Share It

You cannot copy content of this page