ಕಲಬುರಗಿ: ನಗರದ ಕೇಂದ್ರ ರೈಲ್ವೆ ನಿಲ್ದಾಣಕ್ಕೆ ಅಪರಿಚಿತ ವ್ಯಕ್ತಿಯೊಬ್ಬರು ಬಾಂಬ್ ಇಟ್ಟಿರುವುದಾಗಿ ಕರೆ ಮಾಡಿ ಭೀತಿ ಹುಟ್ಟಿಸಿದ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ.
ಬಾಂಬ್ ಇಟ್ಟಿರುವುದಾಗಿ ಅಪರಿಚಿತ ವ್ಯಕ್ತಿಯೊಬ್ಬ ಬೆಂಗಳೂರಿನ 112 ಪೊಲೀಸ್ ಕಂಟ್ರೋಲ್ ರೂಮ್‌ಗೆ ಕರೆಮಾಡಿ ಮಾಹಿತಿ ನೀಡಿದ್ದಾನೆ. ತಕ್ಷಣವೇ ಬೆಂಗಳೂರಿನಿಂದ ಕಲಬುರಗಿ ಕಂಟ್ರೋಲ್ ರೂಮ್‌ಗೆ ಸುದ್ದಿ ತಲುಪಿದ್ದು, ತಕ್ಷಣೆವೆ ಬಾಂಬ್ ಸ್ಕ್ವಾಡ್‌ಗೆ ಮಾಹಿತಿ ಸ್ಥಳಕ್ಕೆ ಪೊಲೀಸರು ಆಗಮಿಸಿ ತಪಾಸಣೆ ನಡೆಸಿದರು.
ಶಂಕಾಸ್ಪದ ಕರೆ ಹಿನ್ನೆಲೆಯಲ್ಲಿ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯ ಸಿಬ್ಬಂದಿ, ಬಾಂಬ್ ಸ್ಕ್ವಾಡ್ ಮತ್ತು ಡಾಗ್ ಸ್ಕ್ವಾಡ್ ತಂಡ ತಕ್ಷಣ ರೈಲ್ವೆ ನಿಲ್ದಾಣ ತಪಾಸಣೆ ನಡೆಸಿದವು. ನಿಲ್ದಾಣದ ಪ್ರತಿಯೊಂದು ಪ್ಲಾಟ್‌ಫಾರ್ಮ್ ಹಾಗೂ ಬೋಗಿಗಳನ್ನು ಶೋಧಿಸಿದ ಬಳಿಕ ಯಾವುದೇ ಬಾಂಬ್ ಪತ್ತೆಯಾಗದೇ, ಇದೊಂದು ಹುಸಿ ಬೆದರಿಕೆ ಕರೆ ಎಂದು ಸ್ಪಷ್ಟಪಡಿಸಿದರು.
ಹುಸಿ ಕರೆ ಮಾಡಿದ ಅಪರಿಚಿತನನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಆರಂಭಿಸಿದ್ದು, ಶೋಧ ಕಾರ್ಯ ತೀವ್ರಗೊಲೀಸಿದ್ದಾರೆ. ಜನರಲ್ಲಿ ಅನಗತ್ಯ ಭೀತಿ ಮೂಡದಂತೆ ಶಾಂತಿ ಕಾಪಾಡಿಕೊಳ್ಳುವಂತೆ ಮನವಿ ಪೊಲೀಸರು ಮಾಡಿದ್ದಾರೆ.