ಮಂಗಳೂರು: ಪತ್ನಿಯ ಅಶ್ಲೀಲ ವಿಡಿಯೋವನ್ನು ಮೊಬೈಲ್‌ನಲ್ಲಿ ಶೇಖರಿಸಿಟ್ಟುಕೊಂಡಿದ್ದ ಸಹ ಕಾರ್ಮಿಕನನ್ನು ಕಬ್ಬಿಣದ ರಾಡ್‌ನಲ್ಲಿ ಹೊಡೆದು ಕೊಲೆಗೈದು ಮೃತದೇಹವನ್ನು ಎಸ್‌ಟಿಪಿ ಟ್ಯಾಂಕ್‌ನಲ್ಲಿ ಹಾಕಿದ್ದ ಆರೋಪಿಯನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ.
ಪಶ್ಚಿಮ ಬಂಗಾಳ ಮೂಲದ ಲಕ್ಷ್ಮಣ್ ಅಲಿಯಾಸ್ ಲಖನ್ (೩೦) ಬಂಧಿತ ಆರೋಪಿ. ಮುಖೇಶ್ ಮಂಡಲ್ (೨೭) ಹತ್ಯೆಯಾದತ. ನಗರದ ಸುರತ್ಕಲ್‌ನ ಮುಕ್ಕದಲ್ಲಿ ಖಾಸಗಿ ಲೇಔಟ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ಮುಖೇಶ್ ಮಂಡಲ್, ಜೂನ್ ೨೪ರಂದು ನಾಪತ್ತೆಯಾಗಿರುವ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ತನಿಖೆ ನಡೆಸಿದಾಗ, ಆತನ ಮೃತದೇಹವು ಕೊಳೆತ ಸ್ಥಿತಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಲೇಔಟ್‌ನೊಳಗಡೆ ಇರುವ ಎಸ್‌ಟಿಪಿ ಟ್ಯಾಂಕ್‌ನಲ್ಲಿ ಆಗಸ್ಟ್ ೨೧ರ ಬೆಳಗ್ಗೆ ಪತ್ತೆಯಾಗಿತ್ತು. ಮುಖೇಶನನ್ನು ಆತನೊಂದಿಗೆ ಕೆಲಸ ಮಾಡುತ್ತಿದ್ದ ಲಕ್ಷ್ಮಣ್ ಕೊಲೆಗೈದು ಮೃತದೇಹವನ್ನು ಎಸ್‌ಟಿಪಿ ಟ್ಯಾಂಕ್‌ನೊಳಗಡೆ ಎಸೆದು, ಟ್ಯಾಂಕ್‌ನ ಮುಚ್ಚಳವನ್ನು ಪ್ಲೈವುಡ್ ಶೀಟ್ ಹಾಕಿ ಮುಚ್ಚಿದ್ದಾನೆಂದು ಚೇತನ್ ಎಂಬಾತ ಈ ಬಗ್ಗೆ ದೂರು ನೀಡಿದ್ದ.
ಮುಖೇಶ್ ಮತ್ತು ನಾನು ಜೂನ್ ೨೪ರಂದು ರಾತ್ರಿ ೯ ಗಂಟೆಗೆ ಮುಕ್ಕದ ಖಾಸಗಿ ಲೇಔಟ್‌ನ ನಿರ್ಮಾಣ ಹಂತದ ಕಟ್ಟಡದೊಳಗೆ ಪಾರ್ಟಿ ಮಾಡುತ್ತಿದ್ದೆವು. ಈ ವೇಳೆ, ಆತ ನನ್ನ ಪತ್ನಿಯ ಅಶ್ಲೀಲ ವಿಡಿಯೋಗಳನ್ನು ಸಂಗ್ರಹಿಸಿಟ್ಟಿಕೊAಡಿದ್ದನ್ನು ನನಗೆ ತೋರಿಸಿದ್ದ. ಇದರಿಂದ ಸಿಟ್ಟು ಬಂದು ಅಲ್ಲಿಯೇ ಇದ್ದ ಕಬ್ಬಿಣದ ರಾಡ್‌ನಲ್ಲಿ ಮುಖೇಶನ ತಲೆಗೆ ಹೊಡೆದೆ. ಪರಿಣಾಮ ಆತ ಅಲ್ಲಿಯೇ ಮೃತನಾಗಿದ್ದರಿಂದ ಕೊಲೆ ಮರೆಮಾಚಲು ಮೃತದೇಹವನ್ನು ಎಸ್‌ಟಿಪಿ ಟ್ಯಾಂಕ್‌ನೊಳಗೆ ಹಾಕಿದೆ ಎಂದು ಲಕ್ಷ್ಮಣ್ ತಪ್ಪೊಪ್ಪಿಕೊಂಡಿದ್ದಾನೆ.
ಅದರಂತೆ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ೫ ದಿನಗಳವರೆಗೆ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ ಎಂದು ನಗರ ಪೊಲೀಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ. ಆರೋಪಿ ಲಕ್ಷ್ಮಣ್ ವಿರುದ್ಧ ಈ ಹಿಂದೆ ಪಶ್ಚಿಮ ಬಂಗಾಳದ ರತುವಾ ಪೊಲೀಸ್ ಠಾಣೆಗಳಲ್ಲಿ ಎರಡು ಹಲ್ಲೆ ಪ್ರಕರಣಗಳು ದಾಖಲಾಗಿವೆ.