ರಾಜಕೀಯ ಸುದ್ದಿ

BJP ನಾಯಕರಿಗೆ ಮಾನಸಿಕ ಅಸ್ವಸ್ಥತೆ ಕಾಡುತ್ತಿದೆಯೇ?: ಮಹಿಷ ಟ್ಯಾಕ್ಸ್ ಎಂದು ಟೀಕಿಸಿದ ಜೋಷಿಗೆ ರಾಮಲಿಂಗಾ ರೆಡ್ಡಿ ಟಾಂಗ್

Share It

ಬೆಂಗಳೂರು: ಬಿಜೆಪಿಯ ಎಲ್ಲಾ ನಾಯಕರುಗಳಿಗೆ ಯಾವ ರೀತಿಯ ಮಾನಸಿಕ ಅಸ್ವಸ್ಥತೆ ಕಾಡುತಿದೆಯೋ‌ ತಿಳಿಯದಾಗಿದೆ ಎಂದು ಸಾರಿಗೆ ಮತ್ತು ಮುಜರಾಯಿ ಇಲಾಳೆ ಸಚಿವ ರಾಮಲಿಂಗಾ ರೆಡ್ಡಿ ಟಾಂಗ್ ನೀಡಿದ್ದಾರೆ.

ಕೆ‌ಎಸ್ ಆರ್ ಟಿ‌ಸಿ ಪ್ರತಿವರ್ಷ ದಸರಾ ಹಾಗೂ ಇತರೆ ವಿಶೇಷ ಸಂದರ್ಭಗಳಲ್ಲಿ ಕಳೆದ 20 ವರುಷಗಳಿಂದ ದರ ಏರಿಕೆ ಅನುಷ್ಠಾನಗೊಳಿಸುತ್ತಾ ಬಂದಿದೆ. ಆಂದರೆ, ನೀವು ಹೇಳುತ್ತಿರುವ ಮಹಿಷಾಸುರ ಟ್ಯಾಕ್ಸ್  ಅನ್ನು ತಮ್ಮ ಪಕ್ಷ ಸಹ ಬಿ.ಜೆ.ಪಿ ಅಧಿಕಾರದಲ್ಲಿದ್ದಾಗ  ಜಾರಿ ಮಾಡಿದ್ದೀರಾಲ್ಲ ಅದಕ್ಕೆ ತಮ್ಮ‌ ಉತ್ತರವೇನು?‌ ಮಾಹಿತಿ ಕೊರತೆ ಇದ್ದರೆ ಸಮರ್ಪಕ ಮಾಹಿತಿ ಪಡೆದು ಮಾತನಾಡಿ, ತಾವು‌ ಕೇಂದ್ರ ಸಚಿವ ಸ್ಥಾನದಲ್ಲಿದ್ದೀರಾ ಅದರ ಗೌರವವನ್ನಾದರೂ ಕಾಪಾಡಿ ಎಂದಿದ್ದಾರೆ.

ತಾವು ಜನಗಳ‌ ಮೇಲೆ 2017-2025 ರವರೆಗೆ ಸತತ 8 ವರುಷಗಳ ಕಾಲ GST ಹೆಸರಿನಲ್ಲಿ ಟ್ಯಾಕ್ಸ್ ಹಾಕಿ ಜನರ ರಕ್ತ ಹೀರಿದಿರಿ ಅದನ್ನು ಬ್ರಹ್ಮರಾಕ್ಷಸ ಟ್ಯಾಕ್ಸ್ ಅಂತ ಕರೆಯಬಹುದೇ? GST ಟ್ಯಾಕ್ಸ್ ಮೂಲಕ ಅಮಾಯಕ ಜನರಿಂದ ವರುಷಗಳ‌ ಕಾಲ ಸುಲಿಗೆ ಮಾಡಿದ್ದು ಮರೆತು ಬಿಟ್ಟಿರಾ?  ಇದಕ್ಕಾಗಿ ಕೇಂದ್ರ ಸರ್ಕಾರ, ಬಿಜೆಪಿ ಪಕ್ಷ ಮತ್ತು ಅದರ ನಾಯಕರು ದೇಶದ‌ ಜನರ ಕ್ಷಮೆ ಕೋರಬಾರದೇ??

ಈಗ GST ಟ್ಯಾಕ್ಸ್ ಕಡಿಮೆ ಮಾಡಿ,  ಸಂಭ್ರಮ ಆಚರಣೆ ಮಾಡುವ ಮೂಲಕ ಪ್ರಚಾರ ಪಡೆಯುವ ತಮ್ಮ ನೈತಿಕತೆಯ ಬಗ್ಗೆ  ಹೇಳಲಿಕ್ಕೆ ಪದಗಳು ಸಾಲದಾಗಿದೆ ಎಂದು ಗುಡುಗಿದ್ದಾರೆ.

ತಾವು ಇಲ್ಲಸಲ್ಲದ ಮಾಹಿತಿಯನ್ನು ಅಪಪ್ರಚಾರ ಮಾಡಿ ಜನರನ್ನು ತಪ್ಪು ದಾರಿಗೆ ಎಳೆಯುವ ದುಸ್ಸಾಹಸಕ್ಕೆ ಇನ್ನಾದರೂ ಪೂರ್ಣವಿರಾಮ ಹಾಕುವಿರಾ‌? ಎಂದು ಪ್ರಶ್ನೆ ಮಾಡಿದ್ದಾರೆ.


Share It

You cannot copy content of this page