ಬೆಂಗಳೂರು: ಕಳ್ಳತನ ಪ್ರಕರಣಗಳಲ್ಲಿ ಆರೋಪಿಗಳನ್ನ ಬಂಧಿಸಿ ಅವರಿಂದ ಚಿನ್ನ ರಿಕವರಿ ಮಾಡಿ ಅವನ್ನು ವಾರಸುದಾರರಿಗೆ ಹಿಂದಿರುಗಿಸದ ಹಿನ್ನೆಲೆ ಸೂರ್ಯನಗರ ಪೊಲೀಸ್ ಇನ್ಸ್ಪೆಕ್ಟರ್ ಮತ್ತು ಸಿಬ್ಬಂದಿ ಮೇಲೆ ದೂರು ದಾಖಲಾಗಿದೆ.
ಕೇಂದ್ರ ವಲಯ ಐಜಿ ಲಾಬೂರಾಮ್ ಅವರಿಗೆ ವಕೀಲ ಮತ್ತು ಸಾಮಾಜಿಕ ಕಾರ್ಯಕರ್ತ ವೆಂಕಟಾಚಲಪತಿ ದೂರು ನೀಡಿದ್ದು, ದೂರು ಆಧರಿಸಿ ಇನ್ಸ್ಪೆಕ್ಟರ್ ಸಂಜೀವ್ ಕುಮಾರ್ ಮಹಾಜನ್ ವಿರುದ್ಧ ಹೆಚ್ಚುವರಿ ಎಸ್ಪಿ ನೇತೃತ್ವದ ತನಿಖೆಗೆ ಸೂಚಿಸಲಾಗಿದೆ.
೧೦ಕ್ಕೂ ಹೆಚ್ಚು ಮನೆಗಳಲ್ಲಿ ಕಳ್ಳತನ ಮಾಡಿದ್ದ ತಮಿಳುನಾಡು ಮೂಲದ ಕುಖ್ಯಾತ ಸುಧಾಕರನ್ ಮತ್ತು ಗ್ಯಾಂಗ್ನ ಸಂಜೀವ್ ಕುಮಾರ್ ಮಹಾಜನ್ ಬಂಧಿಸಿದ್ದರು. ಕಳ್ಳರ ಜೊತೆ ಚಿನ್ನ ಖರೀದಿಸಿದ್ದ ಆರೋಪಿಗಳೂ ಸಿಕ್ಕಿದ್ದರು. ಆದರೆ ಆರೋಪಿಗಳು ಕದ್ದಿದ್ದ ಸುಮಾರು ೨ ಕೆ.ಜಿ. ಚಿನ್ನದ ಪೈಕಿ ೨೦೦ ಗ್ರಾಂಗಳಷ್ಟನ್ನು ಮಾತ್ರ ಸರ್ಕಾರಕ್ಕೆ ಮತ್ತು ಚಿನ್ನ ಕಳೆದುಕೊಂಡವರಿಗೆ ತೋರಿಸಲಾಗಿದೆ. ಉಳಿದಿದ್ದನ್ನುಇನ್ಸ್ಪೆಕ್ಟರ್ ಮತ್ತು ಸಿಬ್ಬಂದಿಯೇ ಹಂಚಿಕೊAಡಿರೋದಾಗಿ ದೂರಲ್ಲಿ ಆರೋಪಿಸಲಾಗಿದೆ.
ವಾರಸುದಾರರಿಗೆ ಹಿಂದಿರುಗಿಸದ ಚಿನ್ನ: ಪೊಲೀಸ್ ಇನ್ಸ್ಪೆಕ್ಟರ್, ಸಿಬ್ಬಂದಿ ವಿರುದ್ಧ ದೂರು
