ಉಪಯುಕ್ತ ಸುದ್ದಿ

ಡೀಸೆಲ್ ದರ ಏರಿಕೆಯಾದ್ರೂ ಬಸ್ ಟಿಕೆಟ್ ದರ ಏರಿಕೆಯಾಗಲ್ಲ: ಸಚಿವ ರಾಮಲಿಂಗಾ ರೆಡ್ಡಿ ಭರವಸೆ

Share It

ಬೆಂಗಳೂರು: ಕೊಲ್ಲಿ ರಾಷ್ಟ್ರಗಳಲ್ಲಿ ಯುದ್ದದ ಹಿನ್ನೆಲೆಯಲ್ಲಿ ಡೀಸೆಲ್, ಪೆಟ್ರೋಲ್ ದರ ಏರಿಕೆಯಾಗಿದ್ರೂ ಬಸ್ ಪ್ರಯಾಣಿಕರ ಮೇಲೆ ಹೊರ ಹಾಕುವ ಕೆಲಸವನ್ನು ಕರ್ನಾಟಕ ಸರಕಾರ ಮಾಡುವುದಿಲ್ಲ ಎಂದು ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.

ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಪ್ರೀಮಿಯಂ ಪೆಟ್ರೋಲ್ ದರ ಏರಿಕೆಯಾಗಿದೆ. ಗ್ಯಾಸ್ ಸಿಲಿಂಡರ್‌, ಪೆಟ್ರೋಲ್ ಬೆಲೆಯೂ ಏರಿಕೆಯಾಗಿದೆ. ಆದರೆ, ಆ ಹೊರೆಯನ್ನು ಬಸ್ ಪ್ರಯಾಣಿಕರ ಮೇಲೆ ಹಾಕುವುದಿಲ್ಲ, ಯಾವುದೇ ಕಾರಣಕ್ಕೂ ಬಸ್ ಪ್ರಯಾಣ ದರ ಏರಿಕೆ ಮಾಡುವುದಿಲ್ಲ ಎಂದು ತಿಳಿಸಿದರು.

ಇದು ಯುದ್ದದ ಹಿನ್ನೆಲೆಯಲ್ಲಿ ಆಗಿರುವ ಬೆಲೆ ಏರಿಕೆಯಷ್ಟೇ. ಇದು ಯುದ್ದ ನಿಂತ ನಂತರ ಕಡಿಮೆಯಾಗುತ್ತದೆ. ಹೀಗಾಗಿ, ಬಸ್ ದರ ಏರಿಕೆ ಮಾಡುವುದಿಲ್ಲ. ಬಸ್ ಪ್ರಯಾಣಿಕರ ಟಿಕೆಟ್ ದರ ಏರಿಕೆ ಈಗ ನಮ್ಮ ಕೈಯ್ಯಲಿಲ್ಲ. ಆದರೂ, ಸಧ್ಯಕ್ಕೆ ಬೆಲೆ ಏರಿಕೆ ಮಾಡುವ ಯಾವುದೇ ಆಲೋಚನೆ ಸರಕಾರದ ಮುಂದಿಲ್ಲ ಎಂದು ಅವರು ತಿಳಿಸಿದರು.


Share It

You cannot copy content of this page