ಬೆಂಗಳೂರು: ಲೈಂಗಿಕ ನಿಂದನೆ ಆರೋಪದಲ್ಲಿ ಖ್ಯಾತ ಟಾಲಿವುಡ್ ನೃತ್ಯ ನಿರ್ದೇಶಕ ಜಾನಿ ಮಾಸ್ಟರ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಜಾನಿ ಮಾಸ್ಟರ್ ವಿರುದ್ಧ ಮಕ್ಕಳ ಲೈಂಗಿಕ ಅಪರಾಧಗಳ ರಕ್ಷಣೆ ಕಾಯ್ದೆ ಸೇರಿದಂತೆ ವಿವಿಧ ಸೆಕ್ಷನ್‌ಗಳಡಿಯಲ್ಲಿ ಹಲವು ಪ್ರಕರಣಗಳನ್ನು ದಾಖಲಿಸಿ ವಿಚಾರಣೆ ನಡೆಸಲಾಗಿದೆ.
ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ನೃತ್ಯ ಸಂಯೋಜಕ ಜಾನಿ ಮಾಸ್ಟರ್‌ಗಾಗಿ ಹೈದರಾಬಾದ್ ಪೊಲೀಸರು ನಾಲ್ಕು ವಿಶೇಷ ತಂಡಗಳು (ಎಸ್‌ಒಟಿ) ರಚಿಸಲಾಗಿತ್ತು. ಇದರಲ್ಲಿ ಒಂದು ತಂಡ ಜಾನಿ ಮಾಸ್ಟರ್ ಬೆಂಗಳೂರಿನಲ್ಲಿದ್ದ ಮಾಹಿತಿ ಪಡೆದು ವಶಕ್ಕೆ ಪಡೆದಿದ್ದಾರೆ. ಘಟನೆ ನಡೆದಾಗ ಸಂತ್ರಸ್ತೆ ಅಪ್ರಾಪ್ತ ವಯಸ್ಕಳಾಗಿದ್ದಳು ಎನ್ನುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಸಂತ್ರಸ್ತೆ ಆಯೋಗವನ್ನು ಸಂಪರ್ಕಿಸಿ ದೂರು ದಾಖಲಿಸಿದ್ದಾರೆ ಎಂದು ತೆಲಂಗಾಣ ಮಹಿಳಾ ಆಯೋಗ ತಿಳಿಸಿದೆ. ರಾಷ್ಟ್ರಪ್ರಶಸ್ತಿ ವಿಜೇತ ನೃತ್ಯ ನಿರ್ದೇಶಕ ಜಾನಿ ಮಾಸ್ಟರ್ ನೃತ್ಯ ಸಂಯೋಜಕಿಯ ಮೇಲೆ ಪದೇ ಪದೇ ಅತ್ಯಾಚಾರ, ಕಿರುಕುಳ ಮತ್ತು ಹಲ್ಲೆ ಮಾಡಿದ ಆರೋಪವಿದೆ.
ಮತ್ತೊಂದೆಡೆ, ತೆಲುಗು ಫಿಲ್ಡ್ ಚೇಂಬರ್ ಆಫ್ ಕಾಮರ್ಸ್ (ಟಿಎಫ್‌ಸಿಸಿ) ಕೂಡ ಪ್ರಕರಣವನ್ನು ಪರಿಶೀಲಿಸುತ್ತಿದೆ.ಜಾನಿ ಮಾಸ್ಟರ್ ದೇಶವನ್ನು ತೊರೆಯಲು ಯೋಜಿಸುತ್ತಿದ್ದ ಎನ್ನಲಾಗಿದ್ದು ಅದರಂತೆ ಆತ ಉತ್ತರ ಭಾರತಕ್ಕೆ ತೆರಳುತ್ತಿದ್ದ ಸುಳಿವಿನ ಮೇರೆಗೆ ಪೊಲೀಸರು ಜಾನಿ ಮಾಸ್ಟರ್‌ನನ್ನು ಬಂಧಿಸಲಾಗಿದೆ.
