ಅಪರಾಧ ಸುದ್ದಿ

ಬೆಂಗಳೂರು: ಕೊಲೆಗೈದು ಕತ್ತರಿಸಿ ಫ್ರಿಟ್ಜ್ ನಲ್ಲಿದ್ದ ಯುವತಿ ಶವ ಪತ್ತೆ!

Share It

ಬೆಂಗಳೂರು: ನಗರದ ವೈಯಾಲಿಕಾವಲ್ ನ ವೀರಣ್ಣ ಆಶ್ರಮ ಬಳಿಯ ಒಂದು ಬಹುಮಹಡಿ ಕಟ್ಟಡದ ಮನೆಯಲ್ಲಿ ಉತ್ತರ ಭಾರತ ಮೂಲದ ಅಪರಿಚಿತ ಯುವತಿಯ ಶವ ಸಿಕ್ಕಿದೆ.

ಇಂದು ವೈಯಾಲಿಕಾವಲ್ ನ ವೀರಣ್ಣ ಆಶ್ರಮ ಬಳಿಯ ಪ್ರಭಾಕರ್ ಎಂಬುವರಿಗೆ ಸೇರಿದ ಬಹುಮಹಡಿ ಕಟ್ಟಡದ ಮನೆಯೊಂದರಿಂದ ಕೆಟ್ಟ ವಾಸನೆ ರಸ್ತೆಯವರೆಗೂ ಬಂದಿದೆ. ತಕ್ಷಣವೇ ನೆರೆಹೊರೆಯವರು ಮತ್ತು ಸ್ಥಳೀಯರು ಸೇರಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ತಕ್ಷಣವೇ ಸ್ಥಳಕ್ಕೆ ಬಂದ ಬೆಂಗಳೂರು ನಗರ ಹೆಚ್ಚುವರಿ ಪೊಲೀಸ್ ಆಯುಕ್ತ ಸತೀಶ್ ನೇತೃತ್ವದ ಪೊಲೀಸ್ ತಂಡ ಮತ್ತು FSL ತಂಡ ಮನೆಯನ್ನು ತಪಾಸಣೆ ನಡೆಸಿತು. ಮೂಗು ಮುಚ್ಚಿಕೊಂಡು ಮನೆಯನ್ನು ಪರಿಶೀಲನೆ ನಡೆಸಿದ ಪೊಲೀಸರು ಮತ್ತು FSL ತಂಡ ಫ್ರಿಟ್ಜ್ ನಲ್ಲಿ ಅಡಗಿಸಿಟ್ಟಿದ್ದ ಸುಮಾರು 26 ವರ್ಷದ ಉತ್ತರ ಭಾರತ ಮೂಲದ ಯುವತಿಯ ಶವವನ್ನು ಪತ್ತೆ ಹಚ್ಚಿತು‌.

ಆದರೆ ಯುವತಿಯನ್ನು ಕೊಲೆ ಮಾಡಿದ ಹಂತಕರು ಸುಮಾರು 30 ಕ್ಕೂ ಹೆಚ್ಚಿನ ಬಾರಿ ಯುವತಿಯ ದೇಹವನ್ನು ತುಂಡು ಮಾಡಿ ಮನೆಯ ಫ್ರಿಟ್ಜ್ ನಲ್ಲಿ ಇಟ್ಟು ಪರಾರಿಯಾಗಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ. ಪೊಲೀಸರು ಶಂಕಿಸಿದ ಪ್ರಕಾರ ಈ ಯುವತಿಯನ್ನು ಸೆಪ್ಟೆಂಬರ್ ಮೊದಲ ವಾರದಲ್ಲಿ ಕೊಲೆ ಮಾಡಲಾಗಿದೆ.

ಈ ಮನೆ ಉತ್ತರ ಭಾರತ ಮೂಲದ ಕುಟುಂಬದ ಮನೆಯಾಗಿತ್ತು ಮತ್ತು ಎರಡು ವಾರಗಳ ಹಿಂದೆ ಯುವತಿಯನ್ನು ಮಾತ್ರ ಮನೆಯಲ್ಲಿ ಬಿಟ್ಟು ಊರಿಗೆ ತೆರಳಿದ್ದರು ಎಂಬ ಮಾಹಿತಿ ಸಿಕ್ಕಿದೆ. ಆದಾಗ್ಯೂ ಒಬ್ಬ ಯುವಕ ಕೊಲೆಗೀಡಾದ ಯುವತಿಯ ಜೊತೆಗೆ ಪ್ರತಿ ದಿನ ಬಂದು ಬಿಟ್ಟು ಹೋಗುತ್ತಿದ್ದ ಎಂಬ ಮಾಹಿತಿ ದೊರಕಿದೆ.

ಆದ್ದರಿಂದ ಸುತ್ತಮುತ್ತಲಿನ ಸಿಸಿಟಿವಿಗಳನ್ನು ಪರಿಶೀಲಿಸಿ ಯುವತಿಯ ಕೊಲೆ ಮಾಡಿದ ಹಂತಕರು ಮನೆಯನ್ನು ಯಾವ ದಿನ, ಯಾವ ಸಮಯಕ್ಕೆ ಬಂದು ಕೊಲೆಗೈದು ವಾಪಸ್ ಹೋದರು ಎಂಬ ಬಗ್ಗೆ ಪೊಲೀಸರು ಮತ್ತು FSL ತಂಡ ತನಿಖೆ ಕೈಗೊಂಡಿದೆ.


Share It

You cannot copy content of this page