ಉಡುಪಿ : ಇಲ್ಲಿಯ ದೊಡ್ಡಣಗುಡ್ಡೆ ಬಬ್ಬುಸ್ವಾಮಿ ಗುಡಿ ಬಳಿ ಇರುವ ಧನ್ವಂತರಿ ಆಯುರ್ವೇದ ಆಸ್ಪತ್ರೆಯಲ್ಲಿ ಸೋಮವಾರ ಅಗ್ನಿ ಅವಘಡ ಸಂಭವಿಸಿದೆ.
ಕಟ್ಟಡ ನವೀಕರಣ ಕೆಲಸ ನಡೆದಿತ್ತು. ಹೀಗಾಗಿ ರೋಗಿಗಳು ಇರಲಿಲ್ಲ. ಸೋಮವಾರ ಬೆಳಗ್ಗೆ ದೈನಂದಿನ ಕೆಲಸಕ್ಕೆ ಬರುವವರು ಅಡುಗೆ ಕೋಣೆಯಲ್ಲಿ ಕೆಲಸ ಪ್ರಾರಂಭ ಮಾಡುವಾಗ ಹಾಲ್ ನಲ್ಲಿ ಬೆಂಕಿ ಹೊತ್ತಿಕೊಂಡು ಶಬ್ದ ಕೇಳಿ ಬಂದಿದೆ.
ವಿದ್ಯುತ್ ಶಾರ್ಟ್ ಸರ್ಕಿಟ್ ನಿಂದ ಘಟನೆ ಸಂಭವಿಸಿರಬಹುದು ಎಂದು ಹೇಳಲಾಗಿದೆ. ಅಗ್ನಿಶಾಮಕ ದಳದವರು ಕಾರ್ಯಾಚರಣೆ ನಡೆಸುತ್ತಿದ್ದಾರೆ.
ದೈನಂದಿನಂತೆ ಕೆಲಸಕ್ಕೆ ಬಂದ ಕುಸುಮಾ ಎಂಬುವವರು ಕೋಣೆಗೆ ಹೋಗಿ ನೋಡಿದಾಗ ಶಬ್ದ ಬಂದಿದೆ. ತಕ್ಷಣವೇ ಬೆಂಕಿ ಆವರಿಸಿದೆ ಎನ್ನಲಾಗಿದೆ. ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದು, ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ನಡೆಸುತ್ತಿದ್ದಾರೆ.
ಮೊದಲ ಮಹಡಿಯಲ್ಲಿ ಇಬ್ಬರು ಕಾರ್ಮಿಕರು ರಿನೋವೇಷನ್ ಕೆಲಸ ಮಾಡುತ್ತಿದ್ದು, ಅವರನ್ನು ಅಗ್ನಿಶಾಮಕ ಸಿಬ್ಬಂದಿ ಸುರಕ್ಷಿತವಾಗಿ ಹೊರಗೆ ಕರೆತಂದಿದ್ದಾರೆ. ಬೆಂಕಿ ನಂದಿಸುವ ಕಾರ್ಯ ಮುಂದುವರಿದಿದೆ.
