ಉಪಯುಕ್ತ ಸುದ್ದಿ

373 ಕನ್ನಡ ಶಾಲೆಗಳಲ್ಲಿ ಆಂಗ್ಲ ಮಾಧ್ಯಮಕ್ಕೆ ರಾಜ್ಯ ಸರ್ಕಾರ ಅಸ್ತು!

Share It

ಬೆಂಗಳೂರು: ರಾಜ್ಯ ಸರ್ಕಾರವು ಪ್ರಾಥಮಿಕ ಶಾಲೆಗಳಲ್ಲಿ ಆಂಗ್ಲ ಮಾಧ್ಯಮವನ್ನು ಆರಂಭ ಮಾಡಲು ನಿರ್ಧಾರ ಮಾಡಿದ್ದು, ಪ್ರಸಕ್ತ ವರ್ಷದಲ್ಲೇ ಸುಮಾರು 373 ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮವನ್ನು ತೆರೆಯಲು ಸಿದ್ಧತೆ ನಡೆಸಿದೆ.

ಈ ಹಿನ್ನೆಲೆಯಲ್ಲಿ 2024-25 ರ ಸಾಲಿನಲ್ಲಿ ಬೇಡಿಕೆಯ ಮೇರೆಗೆ 2 ಸಾವಿರದಷ್ಟು ಶಾಲೆಗಳಲ್ಲಿ ಆಂಗ್ಲ ಮಾಧ್ಯಮವನ್ನು ತೆರೆಯಲು ಇಲಾಖೆಯು ನಿರ್ಧಾರ ಮಾಡಿದ್ದು, ಆರಂಭಿಕ ಹಂತದಲ್ಲಿ 1,419 ಶಾಲೆಗಳಲ್ಲಿ ಇತರ ಭಾಷೆಗಳ ಜೊತೆಗೆ ಇಂಗ್ಲಿಷ್ ಮಾಧ್ಯಮವನ್ನು ತೆರೆಯಲಾಗುತ್ತದೆ. ಈಗಾಗಲೇ ಇಲಾಖೆ ಸೂಚನೆ ನೀಡಿರುವಂತೆ ಸ್ಥಳೀಯವಾಗಿ ಲಭ್ಯವಾಗುವ ಸಂಪನ್ಮೂಲಗಳನ್ನು ಬಳಸಿಕೊಂಡು ಹಾಗೂ ಅವಶ್ಯಕ ಶಿಕ್ಷಕರು ಮತ್ತು ಅತಿಥಿ ಉಪನ್ಯಾಸಕರನ್ನು ಸಿದ್ಧವಿದೆ ಎಂದು ತಿಳಿಸಿದೆ.

ಈಗಾಗಲೇ ಶಾಲೆಗಳು ಆರಂಭವಾಗಿ 4 ತಿಂಗಳುಗಳು ಕಳೆದಿವೆ. ಸರ್ಕಾರ ಈ ಮೊದಲೇ ಈ ಬಗ್ಗೆ ತಿಳಿಸಿದ್ದರೆ, ಲಕ್ಷಾಂತರ ರುಪಾಯಿ ಖರ್ಚು ಮಾಡಿ ಆಂಗ್ಲ ಮಾಧ್ಯಮ ಶಾಲೆಗಳಿಗೆ ಸೇರಿಸುತ್ತಲೇ ಇರುತ್ತಿರಲಿಲ್ಲ ಎಂದು ಪೋಷಕರು ತಮ್ಮ ಅಳಲನ್ನು ಹೊರ ಹಾಕಿದ್ದಾರೆ.

ಶಾಲೆಯಲ್ಲಿ ಆಂಗ್ಲ ಮಾಧ್ಯಮವನ್ನು ತೆರೆಯಲು ಬೇಕಾದ ಮಾನದಂಡಗಳು.

1 ನೆಯ ತರಗತಿಯಲ್ಲಿ 16 ಮಕ್ಕಳಿಗಿಂತ ಹೆಚ್ಚು ಜನ ಇರಬೇಕು.
ಒಟ್ಟಾರೆ ಶಾಲೆಯ ದಾಖಲಾತಿ 100 ಹೆಚ್ಚು ಇರಬೇಕು.

ಯಾವ ವಲಯದಲ್ಲಿ ಎಷ್ಟು ಶಾಲೆಗಳಲ್ಲಿ ಆಂಗ್ಲ ಮಾಧ್ಯಮ

ಬೆಂಗಳೂರು -126, ಧಾರವಾಡ -165, ಮೈಸೂರು – 82, ಬೆಂಗಳೂರು ನಗರಕ್ಕೆ 4 ಶಾಲೆಗಳಲ್ಲಿ ಅವಕಾಶ ಕಲ್ಪಿಸಿದ್ದು, ಉಳಿದ 122 ಶಾಲೆಗಳ ಕೋಲಾರ, ದೊಡ್ಡಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ರಾಮನಗರ , ಶಿವಮೊಗ್ಗ ಜಿಲ್ಲೆಗಳಲ್ಲಿ ಇವೆ.


Share It

You cannot copy content of this page