ಚೆನ್ನೈ: ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಕೇವಲ 6 ರನ್ ಗಳಿಸಿ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದ ವಿರಾಟ್ ಕೊಹ್ಲಿ ಎರಡನೇ ಇನ್ನಿಂಗ್ಸ್ ನಲ್ಲೂ ಸಹ ಕೇವಲ 17 ರನ್ ಗಳಿಸಿ ಫೆವಿಲಿಯನ್ ಸೇರಿದರು.
ರನ್ ಗಳಿಸುವುದರಲ್ಲಿ ವಿಫಲವಾದರೂ ಸಹ ವಿರಾಟ್ ಕೊಹ್ಲಿ ತನ್ನದೇ ಆದ ವಿಶೇಷ ದಾಖಲೆಗಳನ್ನು ಮಾಡುವುದರ ಕಡೆಗೆ ಹೆಜ್ಜೆ ಹಾಕಿದರು. ಹೌದು ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ತನ್ನ ತವರು ಮೈದಾನಗಳಲ್ಲಿ ಆಟವಾಡಿ 12,000ಕ್ಕೂ ಹೆಚ್ಚು ರನ್ ಗಳನ್ನು ಕಲೆ ಹಾಕಿರುವ ಎರಡನೇ ಭಾರತೀಯ ಎನಿಸಿಕೊಂಡರು.
ಭಾರತದಲ್ಲಿ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಬಿಟ್ಟರೆ, ದಾಖಲೆಗಳ ಸರದಾರ, ರನ್ ಮಿಷನ್ ವಿರಾಟ್ ಕೊಹ್ಲಿ ಮಾತ್ರ ಈ ಸಾಧನೆ ಮಾಡಿರುವುದು ವಿಶೇಷ. ಸಚಿನ್ ತೆಂಡೂಲ್ಕರ್ 14,191 ರನ್ ಗಳನ್ನು ಕಳಿಸುವುದರ ಮೂಲಕ ಮೊದಲ ಸ್ಥಾನವನ್ನು ಅಲಂಕರಿಸಿದ್ದಾರೆ.
ಇನ್ನು ಪ್ರಪಂಚಾದ್ಯಂತ ನೋಡುವುದಾದರೆ ಸಚಿನ್ ತೆಂಡೂಲ್ಕರ್ ನಂತರ ರಿಕ್ಕಿ ಪಾಂಟಿಂಗ್, ಜಾಕ್ ಕಾಲಿಸ್, ಶ್ರೀಲಂಕದ ಕುಮಾರ ಸಂಗಕಾರ ಬಿಟ್ಟರಟೆ ಐದನೇ ಸ್ಥಾನದಲ್ಲಿ ವಿರಾಟ್ ಕೊಹ್ಲಿ ಕಾಣಿಸಿಕೊಂಡಿದ್ದಾರೆ.
ಬರೋಬ್ಬರಿ ಒಂಬತ್ತು ತಿಂಗಳ ಬಳಿಕ ಟೆಸ್ಟ್ ಕ್ರಿಕೆಟ್ ಗೆ ಕಂಬ್ಯಾಕ್ ಮಾಡಿರುವ ವಿರಾಟ್ ಕೊಹ್ಲಿ ತಮ್ಮ ಫಾರ್ಮ್ ಕಂಡುಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಈಗಾಗಲೇ ಬಾಂಗ್ಲಾದೇಶದ ವಿರುದ್ಧದ ಮೊದಲ ಪಂದ್ಯದಲ್ಲಿ ಎರಡೂ ಇನ್ನಿಂಗ್ಸ್ ಅನ್ನು ಪೂರ್ಣಗೊಳಿಸಿರುವ ವಿರಾಟ್ ಕೊಹ್ಲಿ. ತಮ್ಮ ಫಾರ್ಮನ್ನು ಎರಡನೇ ಪಂದ್ಯದಲ್ಲಿ ಕಂಡುಕೊಳ್ಳಬೇಕಿದೆ.