ನವಲಗುಂದ : ರಾಜ್ಯದ ಗ್ರಾಮ ಆಡಳಿತ ಅಧಿಕಾರಿಗಳ ಸಮಸ್ಯೆ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ನವಲಗುಂದ ತಾಲ್ಲೂಕಾ ಸಂಘದಿಂದ ಪಟ್ಟಣದ ನವಲಗುಂದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಅನಿರ್ದಿಷ್ಟಾವದಿ ಪ್ರತಿಭಟನೆ ನಡೆಸಿದರು.
ಈ ಅನಿರ್ದಿಷ್ಟಾವದಿ ಪ್ರತಿಭಟನೆಗೆ ನವಲಗುಂದ ತಾಲ್ಲೂಕಾ ಗ್ರಾಮ ಸಹಾಯಕರ ಸಂಘ, ನವಲಗುಂದ ಕಂದಾಯ ನೌಕರರ ಸಂಘದ, ಹಾಗೂ ನವಲಗುಂದ ಹೊರಗುತ್ತಿಗೆ ನೌಕರರ ಸಂಘದವರು ಬಾಹ್ಯ ಬೆಂಬಲ ವ್ಯಕ್ತಪಡಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.