ಬೆಂಗಳೂರು: ಐಐಟಿ ಮಾದರಿಯಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ನಿರ್ಮಾಣ ಮಾಡಲು 500 ಕೋಟಿ ರು.ಗಳ ಘಟನೋತ್ತರ ಅನುಮೋದನೆಯನ್ನು ರಾಜ್ಯ ಸಚಿವ ಸಂಪುಟ ನೀಡಿದೆ.
ಬೆಂಗಳೂರಿನ ಜ್ಞಾನಭಾರತಿ ವಿಶ್ವವಿದ್ಯಾನಿಲಯದ ಆವರಣದಲ್ಲಿ ವಿವಿ ನಿರ್ಮಾಣಕ್ಕಾಗಿ 50 ಎಕರೆ ಜಾಗವನ್ನು ಮೀಸಲಿರಿಸಲಾಗಿದೆ. ಇದಕ್ಕಾಗಿ 100 ಕೋಟಿ ರು.ಗಳ ರಾಜ್ಯ ಸರಕಾರದ ಅನುದಾನವನ್ನು ಬಿಡುಗಡೆ ಮಾಡಲಾಗಿದೆ.
ಉಳಿದಂತೆ ಕೇಂದ್ರ ಸರಕಾರದ ಯುಜಿಸಿ ಮತ್ತಿತರ ಅನುದಾನ ಬಳಕೆ ಮಾಡಿ, ನಿರ್ಮಾಣ ಮಾಡಲಾಗುತ್ತದೆ. ಇದಕ್ಕಾಗಿ ಅಗತ್ಯ ನೆರವು ನೀಡಲು ರಾಜ್ಯ ಸರಕಾರ ತೀರ್ಮಾನಿಸಿದೆ.