ಉಪಯುಕ್ತ ಸುದ್ದಿ

ಸರ್ಕಾರಿ ಶಾಲೆ ಮಕ್ಕಳಿಗೆ ಬಸ್ ವ್ಯವಸ್ಥೆ: ಸರ್ಕಾರದಿಂದ ನಿರ್ಧಾರ

Share It

ಬೆಂಗಳೂರು: ಸರ್ಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದ್ದು, ಕೆಪಿಎಸ್ ಶಾಲೆಗೆ ಮಕ್ಕಳಿಗೆ ಪಿಕ್ ಅಪ್ & ಡ್ರಾಪ್​ಗೆ ವ್ಯವಸ್ಥೆಗೆ ಮುಂದಾಗಿದೆ.

ಈ ಬಗ್ಗೆ ಖುದ್ದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರೇ ಮಾಹಿತಿ ನೀಡಿದ್ದು, ಕರ್ನಾಟಕ ಪಬ್ಲಿಕ್ ಸ್ಕೂಲ್ಗೆ ಮಕ್ಕಳನ್ನು ಬರುವಂತೆ ಪ್ರೇರೆಪಿಸಲಾಗುತ್ತಿದೆ.
ರಾಜ್ಯದಲ್ಲಿ ಸದ್ಯ 285 ಕರ್ನಾಟಕ ಪಬ್ಲಿಕ್ ಸ್ಕೂಲ್ ಅಸ್ತಿತ್ವದಲ್ಲಿವೆ. ಇನ್ನು 500 ಕೆಪಿಎಸ್ ಪ್ರಸಕ್ತ ಸಾಲಿನಲ್ಲಿ ಆರಂಭಿಸುವ ಚಿಂತನೆ ಇದೆ ಎಂದಿದ್ದಾರೆ.

ಮಕ್ಕಳು ಶೈಕ್ಷಣಿಕ ಜೀವನದಿಂದ ವಂಚಿತರಾಗಬಾರದು ಅನ್ನೋ ಕಾರಣಕ್ಕೆ ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಕೂಡ ಪಿಕ್ & ಡ್ರಾಪ್ ವ್ಯವಸ್ಥೆ ಮಾಡೋ ಬಗ್ಗೆ ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ. ಈ ಬಗ್ಗೆ ಖುದ್ದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರೇ ಮಾಹಿತಿ ಕೊಟ್ಟಿದ್ದಾರೆ. KPS ಶಾಲೆಗೆ ಮಕ್ಕಳು ಬರಲು ಎನ್ಕರೇಜ್ ಮಾಡುವ ವಿನೂತನ ಪ್ರಯತ್ನ ಇದಾಗಿದ್ದು ಸರ್ಕಾರಿ ಶಾಲೆಗಳಲ್ಲಿ ಮಹತ್ತರ ಬದಲಾವಣೆ ಮಾಡಲು ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ.

ಕರ್ನಾಟಕ ಪಬ್ಲಿಕ್ ಸ್ಕೂಲ್ ಮಕ್ಕಳು ಶಾಲೆಗೆ ಬರುವಂತೆ ಪ್ರೇರೇಪಿಸಲು ಮುಂದಾಗಿದೆ.
Lkg ಇಂದ 12 ನೇ ತರಗತಿವರೆಗೂ ಒಂದೇ ಕಡೆ ಶಿಕ್ಷಣ ಒದಗಿಸುವ ವ್ಯವಸ್ಥೆ ಮಾಡಲಾಗ್ತೀದೆ. ಹೀಗಾಗಿ 4 ರಿಂದ 5 ಕಿಲೋಮೀಟರ್ ವ್ಯಾಪ್ತಿಯ ಮಕ್ಕಳನ್ನು ಶಾಲೆಗೆ ಕರೆ ತರಲು ಶಾಲಾ ಬಸ್ ಫ್ರೀ ಆಗಿ ಪೂರೈಕೆ ಮಾಡಲು ಇಲಾಖೆ ಮುಂದಾಗಿದೆ.


Share It

You cannot copy content of this page