ದೇವರಾಜ ಅರಸು ಟ್ರಕ್ ಟರ್ಮಿನಲ್ ಹಗರಣ: ಎಂಡಿ ಶಂಕರಪ್ಪ ಸಹೋದರನ ಬಂಧನ
ಬೆಂಗಳೂರು: ದೇವರಾಜ್ ಅರಸು ಟ್ರಕ್ ಟರ್ಮಿನಲ್ ನಲ್ಲಿ ನಡೆದಿರುವ ಹಗರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿಯನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.
ಈಗಾಗಲೇ ಬಂಧಿತರಾಗಿರುವ ಪ್ರಕರಣದ ಪ್ರಮುಖ ಆರೋಪಿ, ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕ ಎಸ್.ಶಂಕರಪ್ಪ ಸಹೋದರ ಹೊನ್ನಪ್ಪ ಎಂಬಾತನನ್ನು ರಾಮನಗರದಲ್ಲಿ ಸಿಐಡಿ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಶಂಕರಪ್ಪ ಕಾಮಗಾರಿಯನ್ನೇ ಅನುಷ್ಠಾನ ಮಾಡದೆ, 2.06 ಕೋಟಿ ಬಿಲ್ ಮಾಡಿದ್ದು, ಎಸ್.ಎಸ್. ಎಂಟರ್ಪ್ರೈಸ್ ಕಂಪನಿಗೆ ವರ್ಗಾವಣೆ ಮಾಡಿದ್ದಾರೆ. ಆ ಕಂಪನಿ ದಂಕಾ ಟ್ರೇಡರ್ಸ್ ಎಂಬ ಮಧ್ಯವರ್ತಿಗೆ 31 ಲಕ್ಷ ಪಾವತಿಸಿದ್ದು, ಅದೇ ಖಾತೆಯಿಂದ ಶಂಕರಪ್ಪ ಸಹೋದರ ಹೊನ್ನಪ್ಪ ಖಾತೆಗೆ 17 ಲಕ್ಷ ರು. ವರ್ಗಾವಣೆಯಾಗಿದೆ. ಈ ಹಿನ್ನೆಲೆಯಲ್ಲಿ ಹೊನ್ನಪ್ಪನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.
ಪ್ರಕರಣದಲ್ಲಿ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಈಗಾಗಲೇ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಶಂಕರಪ್ಪ ಅವರನ್ನು ಬಂಧಿಸಿ, ಜೈಲಿನಲ್ಲಿ ಇಡಲಾಗಿದೆ. ಇದೀಗ ಪ್ರಮುಖ ಆರೋಪಿ ಶಂಕರಪ್ಪ ಸಹೋದರನ ಬಂಧನವಾಗಿದೆ.


