ಕ್ರೀಡೆ ಸುದ್ದಿ

IPL 2025: ರಿಟೆಂಷನ್ ನ ಹೊಸ ನಿಯಮಗಳೇನು ಗೊತ್ತಾ? ಪ್ರತಿ ತಂಡದ ಪರ್ಸ್ ವ್ಯಾಲ್ಯೂ ಎಷ್ಟು?

Share It

ಐಪಿಎಲ್ 2025 ರ ಆವೃತ್ತಿ ಶುರುವಾಗುವ ಮೊದಲು ರಿಟೆಂಷನ್ ಪ್ರಕ್ರಿಯೆ ನಡೆಯಬೇಕಿದೆ. ಆದರಿಂದ ಐಪಿಎಲ್ ಗೌರ್ನಿಂಗ್ ಕೌನ್ಸಿಲ್ ಶನಿವಾರ ನಡೆದ ಸಭೆಯಲ್ಲಿ 18ನೇ ಆವೃತ್ತಿಯ ಐಪಿಎಲ್ ಗೆ ರಿಟೆಂಷನ್ ಕುರಿತು ಹಲವಾರು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದೆ.

ಐಪಿಎಲ್ ಗೌರ್ನಿಂಗ್ ಕೌನ್ಸಿಲ್ ಹೇಳಿರುವ ಹೇಳುವ ಪ್ರಕಾರ ಈ ವರ್ಷದ ಐಪಿಎಲ್ ಗೆ ಒಂದು ತಂಡವು ಒಂದು ಆರ್ ಟಿ ಎಂ ಸೇರಿ ಆರು ಆರು ಜನ ಆಟಗಾರರನ್ನು ರಿಟೇನ್ ಮಾಡಿಕೊಳ್ಳಬಹುದು. ಮೆಗಾ ಹಾರಾಜಿಗು ಮುನ್ನ ಐದು ಜನ ಆಟಗಾರರನ್ನು ರೀಟೈನ್ ಮಾಡಿಕೊಳ್ಳಬಹುದು. ಅದರಲ್ಲಿ 3 ಜನ ಕ್ಯಾಪ್ ಪ್ಲೇಯರ್ಸ್ ಮತ್ತು ಇಬ್ಬರು ಅನ್ಕ್ಯಾಪ್ ಪ್ಲೇಯರ್ಸ್ ಗಳನ್ನು ರೀಟೈನ್ ಮಾಡಿಕೊಳ್ಳಬಹುದು.

ಇನ್ನೊಂದು ಮಹತ್ವವಾದ ನಿಯಮವೇನೆಂದರೆ, ಪ್ರತಿ ತಂಡವು ಕೂಡ ಒಬ್ಬ ಅನ್ಕ್ಯಾಪ್ ಪ್ಲೇಯರ್ ಅನ್ನು ರಿಟೈನ್ ಮಾಡಿಕೊಳ್ಳಲೇಬೇಕು. ಇದಲ್ಲದೆ ಐದು ವರ್ಷಕ್ಕಿಂತ ಹೆಚ್ಚು ವರ್ಷಗಳ ಕಾಲ ಟೀಮ್ ಇಂಡಿಯಾದ ಪರವಾಗಿ ಹನ್ನೊಂದರ ಬಳಗದಲ್ಲಿ ಆಟವಾಡಿಲ್ಲದಿರುವ ಆಟಗಾರನನ್ನು ಅನ್ಕ್ಯಾಪ್ ಆಟಗಾರನೆಂದು ಘೋಷಿಸಿದೆ.

ಉದಾಹರಣೆಗೆ ಮಹೇಂದ್ರ ಸಿಂಗ್ ಧೋನಿ, ಮಯಾಂಕ್ ಮಾರ್ಕಂಡೆ, ಸಂದೀಪ್ ಶರ್ಮ, ಪಿಯೂಸ್ ಚವ್ಲ, ಮೋಹಿತ್ ಶರ್ಮಾ, ವಿಜಯಶಂಕರ್, ಇಂತಹ ಆಟಗಾರರನ್ನು ಅನ್ಕ್ಯಾಪ್ ಆಟಗಾರರೆಂದು ಎಂದು ಘೋಷಿಸಲಾಗಿದೆ. ಇಂತಹವರಿಗೆ ರಿಟೇನ್ ಮಾಡಿಕೊಳ್ಳುವ ಸಂದರ್ಭದಲ್ಲಿ 4 ಕೋಟಿಗಿಂತ ಹೆಚ್ಚು ಹಣವನ್ನು ಕೊಡುವಂತಿಲ್ಲ ಎಂಬ ನಿಯಮವನ್ನು ಮಾಡಿದೆ.

ಕೊನೆಯದಾಗಿ ಪ್ರತಿ ತಂಡಕ್ಕೆ ಕಳೆದ ಬಾರಿ 100 ಕೋಟಿ ಇದ್ದ ಪರ್ಸ್ ವ್ಯಾಲ್ಯೂ ಅನ್ನು ಈ ಬಾರಿ 120 ಕೋಟಿಗೆ ಹೆಚ್ಚಿಸಿದೆ. ಒಂದೇ ವರ್ಷದಲ್ಲಿ ಬರೋಬ್ಬರಿ 20 ಕೋಟಿಯಷ್ಟು ಹಣವನ್ನು ಹೆಚ್ಚಿಸಿದೆ.


Share It

You cannot copy content of this page