ರಾಜಕೀಯ ಸುದ್ದಿ

ಸೋಲೂರನ್ನು ನೆಲಮಂಗಲಕ್ಕೆ ಸೇರಿಸುವ ಎಲ್ಲ ಯಶಸ್ಸು ಶ್ರೀನಿವಾಸ್ ಗೆ ಸಲ್ಲಬೇಕು: ಡಿಕೆಶಿ

Share It


ಬೆಂಗಳೂರು: ಸೋಲೂರು ಹೋಬಳಿಯನ್ನು ಮಾಗಡಿಯಿಂದ ಬೇರ್ಪಡಿಸಿ, ನೆಲಮಂಗಲಕ್ಕೆ ಸೇರಿಸುವ ಪ್ರಯತ್ನದ ಎಲ್ಲ ಶ್ರೇಯಸ್ಸು ನೆಲಮಂಗಲ ಶಾಸಕ ಶ್ರೀನಿವಾಸ್ ಗೆ ಸಲ್ಲಬೇಕು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಸೋಲೂರನ್ನು ಮಾಗಡಿಯಿಂದ ಬೇರ್ಪಡಿಸಿ ನೆಲಮಂಗಲ ತಾಲೂಕಿಗೆ ಸೇರಿಸಲು ತಾವು ಪ್ರಯತ್ನ ಪಡುತ್ತಿರುವುದಾಗಿ ಸಂಸದ ಸುಧಾಕರ್ ಹೇಳಿಕೊಳ್ಳುತ್ತಿರುವ ಬಗ್ಗೆ ಕೇಳಿದಾಗ, “ಕಾಂಗ್ರೆಸ್ ಶಾಸಕ ಶ್ರೀನಿವಾಸ್ ಅವರು ಸೋಲೂರನ್ನು ನೆಲಮಂಗಲಕ್ಕೆ ಸೇರಿಸುವಂತೆ ಒಂದು ವರ್ಷದಿಂದ ನನ್ನ ಮತ್ತು ಸಿಎಂ ಸಿದ್ದರಾಮಯ್ಯರವರ ಬೆನ್ನು ಬಿದ್ದಿದ್ದಾರೆ ಎಂದಿದ್ದಾರೆ.

ಸಂಪೂರ್ಣ ಪ್ರಯತ್ನ, ಶ್ರೇಯಸ್ಸು ಶ್ರೀನಿವಾಸ್ ಅವರಿಗೆ ಸಲ್ಲಬೇಕು. ಸುಧಾಕರ್ ಅವರು ತಮ್ಮ ಹೆಸರೂ ಇದರ ಜತೆ ಇರಲಿ ಎಂದು ಏನೇನೋ ಹೇಳಿಕೊಳ್ಳುತ್ತಿದ್ದಾರೆ. ಇಲ್ಲಿ ಏನೇ ಅಭಿವೃದ್ಧಿ ಕೆಲಸವಾದರೂ ಅದರ ಎಲ್ಲಾ ಯಶಸ್ಸು ಶ್ರೀನಿವಾಸ್ ಅವರಿಗೇ ಸಲ್ಲಬೇಕು ಎಂದರು.


Share It

You cannot copy content of this page