ದಾವಣಗೆರೆ : ಬಿಜೆಪಿಯಲ್ಲಿ ಯಾರೂ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿ ಮುಖ್ಯಮಂತ್ರಿ ಆಗಲು ತಯಾರಾಗಿಲ್ಲ ಎಂದು ಮಾಜಿ ಕೇಂದ್ರ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಸ್ಪಷ್ಟಪಡಿಸಿದ್ದಾರೆ.
ದಾವಣಗೆರೆಯಲ್ಲಿ ಇಂದು ಮಾಜಿ ಸಂಸದ ಹಾಗೂ ಮಾಜಿ ಕೇಂದ್ರ ಸಚಿವ ಜಿ.ಎಂ ಸಿದ್ದೇಶ್ ಅವರ ಗೆಸ್ಟ್ ಹೌಸ್ ನಲ್ಲಿ ರಹಸ್ಯವಾಗಿ ರಾಜ್ಯ ಬಿಜೆಪಿ ಭಿನ್ನಮತೀಯ ನಾಯಕರ ಸಭೆ ನಡೆಯಿತು. ಈ ಸಭೆ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೀಗೆ ಹೇಳಿದರು: ನೋಡಿ, ಈಗ ನಾವು ಯಾವುದೇ ಕಾರಣಕ್ಕೂ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿ ಮುಖ್ಯಮಂತ್ರಿ ಆಗಲು ಈ ಸಭೆ ನಡೆಸಿಲ್ಲ. ಆದರೆ ಈಗ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ ಹೇಗಾದರೂ ಮಾಡಿ ಮುಖ್ಯಮಂತ್ರಿ ಆಗಲೇಬೇಕೆಂದು 1 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಲು ರೆಡಿಯಾಗಿದ್ದಾರೆ. ಹಿಂದೆ ನಮ್ಮ ಪಕ್ಷದಲ್ಲಿ ಆಪರೇಷನ್ ಕಮಲದ ಮೂಲಕ ರಾಜ್ಯಸರ್ಕಾರವನ್ನು ರಚಿಸಲು ಆಗ ಎಷ್ಟು ಖರ್ಚು ಮಾಡಿದರು ಅಂತ ಗೊತ್ತಿದೆ. ಅದರಂತೆ ಈಗ ಒಬ್ಬ ಶಾಸಕನಿಗೆ ಎಷ್ಟು ಕೋಟಿ ರೂಪಾಯಿ ಖರ್ಚು ಮಾಡಲೂ ರೆಡಿಯಾಗಿದ್ದಾರೆ. ಇವರೆಲ್ಲರೂ ಮುಂದಿನ ಮುಖ್ಯಮಂತ್ರಿ ಆಗಲು 1 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಲು ರೆಡಿ ಇದ್ದಾರೆ. ಆದರೆ ನಮ್ಮ ಬಿಜೆಪಿ ಪಕ್ಷ ಮಾತ್ರ ಯಾವುದೇ ಕಾರಣಕ್ಕೂ ಶಾಸಕರನ್ನು ಖರೀದಿಸಿ ಆಪರೇಷನ್ ಕಮಲದ ಮೂಲಕ ಮತ್ತೆ ಸರ್ಕಾರ ರಚಿಸಲು ತಯಾರಿಲ್ಲ. ಬಿಜೆಪಿ ಹೈಕಮಾಂಡ್ ಮಾತ್ರ ಮುಂದೆ ವಿಧಾನಸಭೆ ಚುನಾವಣೆ ಬಂದರೆ ಸಂಪೂರ್ಣ ಬಹುಮತ ಗಳಿಸಿ ಸರ್ಕಾರ ರಚಿಸಲು ಗಟ್ಟಿ ನಿರ್ಧಾರ ತೆಗೆದುಕೊಂಡಿದೆ. ಸದ್ಯ ನಮ್ಮಲ್ಲಿ ಆಪರೇಷನ್ ಕಮಲ ಅಂತ ಯಾವುದೂ ಇಲ್ಲ ಎಂದು ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಕಾಂಗ್ರೆಸ್ ಶಾಸಕರನ್ನು ರಾಜೀನಾಮೆ ಕೊಡಿಸಿ ಪರ್ಯಾಯ ಸರ್ಕಾರ ರಚಿಸಲು ತಯಾರಿಲ್ಲ ಎಂದು ಯತ್ನಾಳ್ ನೇರವಾಗಿ ಹೇಳಿದರು.