ಐಪಿಎಲ್ 2025ರ ಆವೃತ್ತಿಗು ಮುನ್ನ ಐಪಿಎಲ್ ಗೌರ್ನಿಂಗ್ ಕೌನ್ಸಿಲ್ ಮಿನಿ ಹರಾಜಿನಲ್ಲಿ ಬರುವ ವಿದೇಶಿ ಆಟಗಾರರಿಗೆ ಮತ್ತು ಐಪಿಎಲ್ ತಂಡಗಳಿಗೆ ಅರ್ಧಕ್ಕೆ ಕೈ ಕೊಟ್ಟು ತನ್ನ ದೇಶಕ್ಕೆ ಹಿಂತಿರುಗುವ ಆಟಗಾರರಿಗೆ ಕಟ್ಟುನಿಟ್ಟಾದ ನಿಯಮವನ್ನು ಜಾರಿಗೆ ತಂದಿದೆ.
ಹೌದು ಈ ಹಿಂದೆ ಹಲವು ವಿದೇಶಿ ಆಟಗಾರರು ಐಪಿಎಲ್ ಹರಾಜಿಗೆ ಹೆಸರು ನೋಂದಾಯಿಸಿಕೊಂಡು ಹರಾಜಿನಲ್ಲಿ ಒಂದು ತಂಡ ಖರೀದಿ ಮಾಡಿದ ತಕ್ಷಣ ಆ ತಂಡದ ಪರ ಪೂರ್ಣ ಟೂರ್ನಿಯನ್ನು ಆಡದೆ ಅರ್ಧಕ್ಕೆ ಕೈಕೋಟ್ಟು ತಮ್ಮ ದೇಶಕ್ಕೆ ಹಿಂತಿರುಗುವ ಆಟಗಾರರಿಗೆ ಐಪಿಎಲ್ ಗೌರ್ನಿಂಗ್ ಕೌನ್ಸಿಲ್ ಒಂದು ಉತ್ತಮವಾದ ನಿಯಮ ಜಾರಿಗೊಳಿಸಿದೆ.
ಒಬ್ಬ ವಿದೇಶಿ ಆಟಗಾರ ಖರೀದಿಯ ನಂತರ ಆಯಾ ತಂಡದ ಪರ ಆಡದಿದ್ದರೆ ಅಂತಹ ಆಟಗಾರನನ್ನು ಐಪಿಎಲ್ ನಿಂದ ಎರಡು ವರ್ಷ ಬ್ಯಾನ್ ಮಾಡಲಾಗುತ್ತದೆ. ಹಾಗೇನಾದರೂ ತಮ್ಮ ದೇಶಕ್ಕೆ ಹೋಗಬೇಕಾದರೆ ಸೂಕ್ತ ದಾಖಲೆಗಳನ್ನು ನೀಡಿ ಹೋಗಬೇಕು ಎಂಬುದನ್ನು ಕಟ್ಟುನಿಟ್ಟಾಗಿ ಹೇಳಿದೆ.
ಇನ್ನು ಕೆಲವು ವಿದೇಶಿ ಆಟಗಾರರು ದುಡ್ಡಿನ ಆಸೆಗೋಸ್ಕರ ಮೆಗಾ ಹರಾಜಿಗೆ ಬಾರದೆ ಕೇವಲ ಮಿನಿ ಹರಾಜಿಗಷ್ಟೇ ಬಂದು ಹೆಚ್ಚಿನ ಮೊತ್ತಕ್ಕೆ ಖರೀದಿಯಾಗಿ ದಾಖಲೆ ನಿರ್ಮಿಸುತ್ತಿದ್ದಾರೆ. ಇಂತಹ ಆಟಗಾರರಿಗೆ ಕಡಿವಾಣ ಹಾಕಲು ಮುಂದಾದ ಐಪಿಎಲ್ ಗೌರ್ನಿಂಗ್ ಕೌನ್ಸಿಲ್ ಎಲ್ಲ ವಿದೇಶಿ ಆಟಗಾರರಿಗೂ ನಿಯಮ ಒಂದನ್ನು ರೂಪಿಸಿದೆ.
ಅಂತಹ ನಿಯಮವೇನೆಂದರೆ ಯಾವುದೇ ವಿದೇಶಿ ಆಟಗಾರ ಮೆಗಾ ಹರಾಜಿನಲ್ಲಿ ತನ್ನ ಹೆಸರು ನೋಂದಣಿ ಮಾಡಿಕೊಳ್ಳದೆ, ನೇರವಾಗಿ ಮಿನಿ ಹರಾಜಿಗೆ ಬರುವಂತಿಲ್ಲ. ದುಡ್ಡಿನ ಆಸೆಗೆ ಐಪಿಎಲ್ ಗೆ ಬರುವಂಥ ವಿದೇಶ ಆಟಗಾರರಿಗೆ ಕಡಿವಾಣ ಹಾಕಲು ಇಂತಹ ನಿಯಮವನ್ನು ರೂಪಿಸಿದೆ ಎನ್ನಲಾಗುತ್ತಿದೆ.