ಅ.3ರಿಂದ 5 ದಿನಗಳ ಕಾಲ ಕಾವೇರಿ ಆರತಿ
ಬೆಂಗಳೂರು: ಅ. 3 ರಿಂದ 5 ದಿನ ಗಂಗಾರತಿ ಮಾದರಿಯಲ್ಲೇ ಕಾವೇರಿ ಆರತಿ ಮಾಡಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ದಿನೇಶ್‌ಗೂಳಿಗೌಡ ತಿಳಿಸಿದ್ದಾರೆ.
ಅಕ್ಟೋಬರ್ 3ರಂದು ಶ್ರೀರಂಗಪಟ್ಟಣದಲ್ಲಿ ಕಾವೇರಿ ಆರತಿ ಆರಂಭವಾಗಲಿದ್ದು, ಪ್ರಾಯೋಗಿಕವಾಗಿ ಅ. 3 ರಿಂದ 5 ದಿನ ಕಾವೇರಿ ಆರತಿ ನಡೆಯಲಿದೆ ಎಂದು ತಿಳಿಸಿದ್ದಾರೆ.
7 ಮಂದಿ ಅರ್ಚಕರು ಸೇರಿ 20 ಜನರ ತಂಡ ವಾರದಲ್ಲಿ ಎರಡು ದಿನ ಕಾವೇರಿ ಆರತಿ ನಡೆಸಿಕೊಡಲಿದ್ದಾರೆ ಕಾವೇರಿ ಆರತಿಯಲ್ಲಿ ಸಪ್ತ ಋುಷಿಗಳನ್ನು ಪೂಜಿಸಿ, ಗಣಪತಿ ಪ್ರಾರ್ಥನೆ, ಕಾವೇರಿ ಪೂಜೆ, ಕಾವೇರಿ ಮಹಾಆರತಿ ನಡೆಸಲಾಗುವುದು ಎಂದು ಡಾ.ಭಾನುಪ್ರಕಾಶ್ ಶರ್ಮ ತಿಳಿಸಿದ್ದಾರೆ.
ಶ್ರೀರಂಗಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯ ಬಳಿ ಇರುವ ಕಾವೇರಿ ನದಿ ಸ್ನಾನಘಟ್ಟ ಸ್ಥಳವನ್ನು ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ, ಅದ್ವೈತ ವಾಚಸ್ಪತಿ ಡಾ.ಭಾನುಪ್ರಕಾಶ್ ಶರ್ಮ ಜತೆಗೂಡಿ ಈಗಾಗಲೇ ಸ್ಥಳ ಪರಿಶೀಲಿಸಿದ್ದು, ಸಧ್ಯ ಅದೇ ಸ್ಥಳದಲ್ಲಿ ವಾರದಲ್ಲಿ ಎರಡು ದಿನ ಶ್ರೀರಂಗಪಟ್ಟಣ ದಸರಾ ಆರಂಭಕ್ಕೂ ಒಂದು ದಿನ ಮುಂಚಿತವಾಗಿ ಅ.3 ರಿಂದಲೇ 5 ದಿನಗಳ ಕಾಲ ಶ್ರೀರಂಗನಾಥಸ್ವಾಮಿ ದೇವಾಲಯ ಸ್ನಾನಘಟ್ಟದಲ್ಲಿ ವೇದಿಕೆ ಸಿದ್ಧಪಡಿಸಿ ಕಾವೇರಿ ಆರತಿ ನಡೆಯಲಿದೆ.
ರಾಜ್ಯದ ಜೀವನದಿ ಕಾವೇರಿ ನದಿಗೆ ಗಂಗಾರತಿ ಮಾದರಿಯಲ್ಲೇ ಆರತಿ ಮಾಡುವ ಬಗ್ಗೆ ಡಿಸಿಎಂ ನಿರ್ಧಾರ ಮಾಡಿದ್ದರು. ಅದರಂತೆ ಗಂಗಾರತಿ ಅಧ್ಯಾಯನ ಸಚಿವ ಚೆಲುವರಾಯಸ್ವಾಮಿ ನೇತೃತ್ವದಲ್ಲಿ ತಂಡ ಇತ್ತೀಚೆಗೆ ಹರಿದ್ವಾರಕ್ಕೆ ಭೇಟಿ ನೀಡಿತ್ತು.