ಇಬ್ಬರು ಕಳ್ಳರ ಬಂಧನ: 31.9 ಲಕ್ಷ ಮೌಲ್ಯದ ವಸ್ತುಗಳು ವಶ
ಬೆಂಗಳೂರು: ಬೀಗ ಹಾಕಿರುವ ಮನೆಗಳನ್ನು ಗುರುತಿಸಿ ಚಿನ್ನ, ಬೆಳ್ಳಿ ಹಾಗೂ ಹಲವು ದುಬಾರಿ ಬೆಲೆಯ ವಸ್ತುಗಳನ್ನು ಕಳವು ಮಾಡುತ್ತಿದ್ದ ಇಬ್ಬರು ಕುಖ್ಯಾತ ಕಳ್ಳರನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ.
ಇಸೈರಾಜ್ ಹಾಗೂ ರಾಮ್ ಕುಮಾರ್ ಬಂಧಿತ ಆರೋಪಗಳು. ಬಂಧಿತರಿಂದ 31.09 ಲಕ್ಷ ಮೌಲ್ಯದ 437.25 ಗ್ರಾಂ ಚಿನ್ನಾಭರಣ, 85 ಗ್ರಾಂ ಬೆಳ್ಳಿ ಆಭರಣಗಳನ್ನು ಜಪ್ತಿ ಮಾಡಲಾಗಿದೆ.
ಬಾಗಲೂರಿನ ಬಸವಲೇಔಟ್, ಚೊಕ್ಕನಹಳ್ಳಿ ಗ್ರಾಮದ ಮನೆಗೆ ಮಾ.22ರಂದು ಬೀಗ ಹಾಕಿಕೊಂಡು ವ್ಯಕ್ತಿಯೊಬ್ಬರು ಕೇರಳದಲ್ಲಿನ ಸಂಬಂಧಿಕರೊಬ್ಬರ ಮದುವೆಗೆ ಹೋಗಿದ್ದಾಗ ಹೊಂಚು ಹಾಕಿ ಬಾಗಿಲನ್ನು ಮುರಿದು ಒಳನುಗ್ಗಿ ಕೊಠಡಿಯಲ್ಲಿದ್ದ ಎರಡು ಕಬ್ಬಿಣದ ಬೀರು ಮುರಿದು ಲಾಕರ್ ನಲ್ಲಿದ್ದ 1.30 ಲಕ್ಷ ನಗದು ಹಣ ಹಾಗೂ ಚಿನ್ನಾಭರಣವನ್ನು ಕಳ್ಳರು ಕಳವು ಮಾಡಿದ್ದರು.
ಪ್ರಕರಣ ದಾಖಲಿಸಿದ ಬಾಗಲೂರು ಪೊಲೀಸರು ತಮಿಳುನಾಡಿನ ಅತಿಯೂರು ಬಸ್‍ನಿಲ್ದಾಣದಲ್ಲಿ ಇಬ್ಬರನ್ನೂ ಬಂಧಿಸಲಾಗಿದೆ.ಆರೋಪಿಗಳ ಪೈಕಿ ಓರ್ವ ಅತಿಯೂರಿನ ಮನೆಯಲ್ಲಿ ಬಚ್ಚಿಟ್ಟಿದ್ದ ಕಳವು ಮಾಡಿದ 413 ಗ್ರಾಂ ಚಿನ್ನಾಭರಣ, 85 ಗ್ರಾಂ ಬೆಳ್ಳಿಯನ್ನು ವಶಪಡಿಸಿಕೊಳ್ಳಲಾಯಿತು. ಆರೋಪಿಗಳಿಬ್ಬರ ಸ್ನೇಹಿತನಿಗೆ ನೀಡಿದ್ದ 24.25 ಗ್ರಾಂ ಚಿನ್ನದ ಚೈನ್‍ನ್ನು ಕೊಯಮತ್ತೂರ್ ಟೌನ್‍ನಲ್ಲಿ ವಾಸವಿರುವ ಆರೋಪಿಗಳ ಸ್ನೇಹಿತನ ಮನೆಯಿಂದ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಆರೋಪಿಗಳ ಬಂಧನದಿಂದ ಬಾಗಲೂರು2 ಕನ್ನ ಕಳವು, ಯಲಹಂಕ ನ್ಯೂಟೌನ್ 1 ಕಳವು ಪ್ರಕರಣ ಪತ್ತೆಯಾಗಿದೆ.


