ಕಳೆದ ಶುಕ್ರವಾರ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಹಲವೆಡೆ ಸಕಾಲಕ್ಕೆ ಬೇಕಿದ್ದ ಹಿಂಗಾರು ಮಳೆ ಸುರಿದಿದೆ. ಇದರಿಂದ ರೈತರು ಖುಷಿಯಾಗುವಂತಾಗಿದೆ.
ತಾಲ್ಲೂಕಿನ ಹೊಳಲ್ಕೆರೆ ಕಸಬಾ ಹೋಬಳಿಯಲ್ಲಿ 6.6 ಮಿ.ಮೀ, ಬಿ.ದುರ್ಗ ಹೋಬಳಿಯಲ್ಲಿ 2.9 ಮಿ.ಮೀ, ರಾಮಗಿರಿ ಹೋಬಳಿಯಲ್ಲಿ 4.7 ಮಿ.ಮೀ ಹಾಗೂ ತಾಳ್ಯ ಹೋಬಳಿಯಲ್ಲಿ 20.8 ಮಿ.ಮೀ ಮಳೆಯಾಗಿದೆ.
ಇದರಿಂದ ಸತತ ಬಿಸಿಲಿನಿಂದ ಒಂದಿಷ್ಟು ಕಂಗೆಟ್ಟಿದ್ದ ಮೆಕ್ಕೆಜೋಳ, ರಾಗಿ, ಶೇಂಗಾ ಸೇರಿ ಅಡಕೆ, ತೆಂಗು ಹಾಗೂ ಎಲ್ಲಾ ರೀತಿಯ ಬೆಳೆಗಳಿಗೆ ಮಳೆ ನೀರು ಸಿಕ್ಕು ರೈತರು ಒಂದಿಷ್ಟು ನಿಟ್ಟುಸಿರು ಬಿಡುವಂತಾಗಿದೆ.