ಬೆಂಗಳೂರು: ಸಿಎಂ ಬದಲಾವಣೆ ಒತ್ತಡ ಮತ್ತು ಜಾತಿಗಣತಿ ವರದಿ ಜಾರಿಯ ಚರ್ಚೆಯ ನಡುವೆ ಸಿಎಂ ಸಿದ್ದರಾಮಯ್ಯ ಹಿಂದುಳಿದ ವರ್ಗಗಳ ಸಚಿವರು ಮತ್ತು ಶಾಸಕರ ಸಭೆ ನಡೆಸುವ ಮೂಲಕ ಗಮನ ಸೆಳೆದಿದ್ದಾರೆ.
ಮೂಡಾ ವಿಚಾರಣೆ ಆರಂಭವಾಗಿರುವ ಬೆನ್ನಲ್ಲಿ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಒತ್ತಡ ಹೆಚ್ಚಾಗಿದೆ. ಈ ನಡುವೆ ಜಾತಿಗಣತಿ ಅಸ್ತ್ರ ಹರಿಬಿಟ್ಟಿರುವ ಸಿಎಂ ಸಿದ್ದರಾಮಯ್ಯ, ಹಿಂದುಳಿದ ವರ್ಗಗಳ ಮನಗೆಲ್ಲುವ ಪ್ರಯತ್ನ ಮಾಡಿದ್ದಾರೆ.
ಈ ಕಾರಣದಿಂದ ಹಿಂದುಳಿದ ವರ್ಗಗಳ ನಾಯಕರ ಸಭೆ ನಡೆಸಿ, ಜಾತಿಗಣತಿ ಜಾರಿಯ ಸಾಧಕ ಭಾದಕಗಳ ಕುರಿತು ಚರ್ಚೆ ನಡೆಸಿದ್ದಾರೆ. ಜತೆಗೆ ತಮ್ಮ ಬೆಂಬಲಕ್ಕೆ ನಿಲ್ಲುವಂತೆ ಪರೋಕ್ಷವಾಗಿ ಮನವೊಲಿಸಿದ್ದಾರೆ. ಈ ಮೂಲಕ ರಾಜೀನಾಮೆ ಕೇಳುತ್ತಿರುವ ವಿಪಕ್ಷ ನಾಯಕರಿಗೆ ತಮ್ಮ ಅಹಿಂದ ನಾಯಕತ್ವ ಗಟ್ಟಿಯಾಗಿದೆ ಎಂಬ ಸಂದೇಶ ರವಾನೆ ಮಾಡಿದ್ದಾರೆ.