ಉಪಯುಕ್ತ ಸುದ್ದಿ

ಕೊಂಕಣ ರೈಲ್ವೆಯಲ್ಲಿ 190 ಹುದ್ದೆಗಳಿಗೆ ಅರ್ಜಿ ಆಹ್ವಾನ: ಇಂದೇ ಅರ್ಜಿ ಸಲ್ಲಿಸಿ

Share It

ಭಾರತೀಯ ರೈಲ್ವೆ ಅದರಲ್ಲೂ ಕೊಂಕಣ ರೈಲ್ವೆಯಲ್ಲಿ ಸೇವೆ ಸಲ್ಲಿಸಬೇಕೆಂದು ಆಸೆ ಪಡುವವರ ಸಂಖ್ಯೆ ಕಡಿಮೆ ಏನಿಲ್ಲ. ಹೌದು ಕೊಂಕಣ ರೈಲ್ವೆ 190 ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಕರೆದಿದ್ದು, ಡಿಪ್ಲೊಮ ಹಾಗೂ ಬಿಇ ಮುಗಿಸಿದವರು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಕೊಂಕಣ ರೈಲ್ವೆಯು ಅಗತ್ಯವಿರುವ ಅಪ್ರೆಂಟಿಸ್‌ ಹುದ್ದೆಗಳ ಭರ್ತಿಗೆ ಅಧಿಸೂಚಿಯನ್ನು ಹೊರಡಿಸಿದ್ದು ಸಿವಿಲ್, ಮೆಕ್ಯಾನಿಕಲ್, ಇಲೆಕ್ಟ್ರಿಕಲ್ ಅಥವಾ ಇಲೆಕ್ಟ್ರಾನಿಕ್ಸ್‌ ವಿಭಾಗದಲ್ಲಿ ಪದವಿಯನ್ನು ಪಡೆದವರು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಅಭ್ಯರ್ಥಿಗಳು 2020, 2021, 2022, 2023, 2024 ನೇ ಸಾಲಿನಲ್ಲಿ ಈ ವಿದ್ಯಾರ್ಹತೆಯನ್ನು ಮುಗಿಸಿದ್ದರು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಹಾರಾಷ್ಟ್ರ , ಗೋವಾ ಹಾಗೂ ಕೊಂಕಣ ರೈಲ್ವೆಯ ಕೇಂದ್ರದಲ್ಲಿ ತರಬೇತಿ ಕೊಡಲಾಗುವುದು.

ಹುದ್ದೆಗಳ ವಿವರ :

ಸಿವಿಲ್ ಇಂಜಿನಿಯರಿಂಗ್ : 30
ಇಲೆಕ್ಟ್ರಿಕಲ್ ಇಂಜಿನಿಯರಿಂಗ್ : 20
ಇಲೆಕ್ಟ್ರಾನಿಕ್ಸ್‌ ಇಂಜಿನಿಯರಿಂಗ್ : 10
ಮೆಕ್ಯಾನಿಕಲ್ ಇಂಜಿನಿಯರಿಂಗ್ : 20
ಡಿಪ್ಲೊಮ ಇನ್ ಸಿವಿಲ್ : 30
ಡಿಪ್ಲೊಮ ಇನ್ ಇಲೆಕ್ಟ್ರಿಕಲ್ : 20
ಡಿಪ್ಲೊಮ ಇನ್ ಇಲೆಕ್ಟ್ರಾನಿಕ್ಸ್‌ : 10
ಡಿಪ್ಲೊಮ ಇನ್ ಮೆಕ್ಯಾನಿಕಲ್ : 20
ಜೆನೆರಲ್ ಸ್ಟ್ರೀಮ್ ಗ್ರಾಜುಯೇಟ್ಸ್‌: 30

ಒಟ್ಟು ಹುದ್ದೆಗಳ ಸಂಖ್ಯೆ : 190

ಮುಖ್ಯವಾಗಿ ಎರಡು ವಿಭಾಗಗಳ ಹುದ್ದೆಗಳಿಗೆ ಅರ್ಜಿ ಕರೆದಿದ್ದು ಗ್ರಾಜುಯೇಟ್ ಅಪ್ರೆಂಟಿಸ್‌ ಹುದ್ದೆಗೆ ಅರ್ಜಿ ಸಲ್ಲಿಸಲು ಬಿ.ಟೆಕ್ ಅಥವಾ ಬಿಇ ತೆರ್ಗಡೆಯಾಗಿರಬೇಕು. ಅದೇ ರೀತಿ ಡಿಪ್ಲೊಮಾ ಅಪ್ರೆಂಟಿಸ್‌ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಸಿವಿಲ್, ಮೆಕ್ಯಾನಿಕಲ್, ಇಲೆಕ್ಟ್ರಿಕಲ್ ಅಥವಾ ಇಲೆಕ್ಟ್ರಾನಿಕ್ಸ್ ವಿಭಾಗಗಳಲ್ಲಿ ಉತ್ತೀರ್ಣವಾಗಿರಬೇಕು.

ವಯೋಮಿತಿ :

ಕನಿಷ್ಠ 18 ರಿಂದ 25 ವರ್ಷದ ಒಳಗೆ ಇರಬೇಕು.
01-09-1999 ರಿಂದ 01-09-2006 ರ ನಡುವೆ ಜನ್ಮ ತಾಳಿರಬೇಕು. ಒಬಿಸಿ ಗೆ 3 ವರ್ಷ ಹಾಗೂ SC ST ಗೆ 5 ವರ್ಷ ವಯಸ್ಸಿನ ಸಡಿಲಿಕೆಯನ್ನು ನೀಡಲಾಗಿದೆ.

ಅಭ್ಯರ್ಥಿಗಳನ್ನು ಪಡೆದ ಅಂಕಗಳ ಮೇಲೆ ಮೆರಿಟ್ ಲಿಸ್ಟ್ ಅನ್ನು ಸಿದ್ಧಪಡಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಅರ್ಜಿ ಶುಲ್ಕ 100 ರೂ.

ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ: 02-11-2024

ಅರ್ಜಿಯನ್ನು ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
https://nats.education.gov.in/ /

https://wps.konkanrailway.com/nats/portal ಗೆ ಭೇಟಿ ನೀಡಿ.


Share It

You cannot copy content of this page