ರಾಜಕೀಯ ಸುದ್ದಿ

ಸರಕಾರ-ರಾಜಭವನ ಜಟಾಪಟಿ ಮುಂದುವರಿಕೆ:ಮತ್ತೇ 5 ವಿಧೇಯಕಗಳನ್ನು ರಾಜ್ಯಪಾಲರ ಮುಂದೆ ಕಳುಹಿಸಿದ ಸರಕಾರ

Share It

ಬೆಂಗಳೂರು: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್‌ ಅವರಿಗೆ ಮತ್ತೊಮ್ಮೆ 5 ಮಸೂದೆಗಳನ್ನು ಅನುಮೋದನೆಗಾಗಿ ಕಳುಹಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ. ಪಾಟೀಲ್‌ ತಿಳಿಸಿದ್ದಾರೆ.
ಇತ್ತೀಚೆಗೆ ರಾಜ್ಯಪಾಲರು ಸ್ಪಷ್ಟನೆ ಕೋರಿ ಹನ್ನೊಂದು ವಿಧೇಯಕಗಳನ್ನು ರಾಜ್ಯ ಸರ್ಕಾರಕ್ಕೆ ಹಿಂದಿರುಗಿಸಿದ್ದರು, ಕರ್ನಾಟಕ ವಿಧಾನ ಮಂಡಲವಿಧೇಯಕ ಸಂಖ್ಯೆ 26, 2024″ನ್ನು ಮುಂಬರುವ ವಿಧಾನ ಮಂಡಲದ ಅಧಿವೇಶನದ ಸಂದರ್ಭದಲ್ಲಿ ಹಿಂಪಡೆಯಲು ಮತ್ತು ವಿಧಾನಸಭೆಯ ವಿಧೇಯಕ 27ಕ್ಕೆ ಒಪ್ಪಿಗೆ ನೀಡುವಂತೆ ರಾಜ್ಯಪಾಲರನ್ನು ಕೋರಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಹೇಳಿದರು.
ತಮ್ಮ ಆಕ್ಷೇಪಣೆಯಲ್ಲಿ ಈಗಾಗಲೇ ಮಸೂದೆ ಇದ್ದರೂ, ಮತ್ತೊಂದು ಮಸೂದೆ ಅಗತ್ಯತೆಯ ಬಗ್ಗೆ ಸ್ಪಷ್ಟೀಕರಣ ಕೇಳಿದ್ದರು. ಅದರ ಆಧಾರದಲ್ಲಿ ಹಿಂದಿನ ಮಸೂದೆಯನ್ನು ಹಿಂಪಡೆಯಲು ತೀರ್ಮಾನಿಸಲಾಗಿದೆ. ಕರ್ನಾಟಕ ವಿಧಾನ ಮಂಡಲ (ಅನರ್ಹತಾ ನಿವಾರಣೆ) (ತಿದ್ದುಪಡಿ) ವಿಧೇಯಕ, 2024ವನ್ನು ರಾಜ್ಯಪಾಲರಿಗೆ ಕಳುಹಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

11 ಬಿಲ್ ಗಳ ಪೈಕಿ ಐದು ಬಿಲ್ ಗಳಿಗೆ ಉತ್ತರ ನೀಡಿದ್ದೇವೆ. ಆರು ಬಿಲ್ ಗಳ ಪೈಕಿ ಒಂದು ಬಿಲ್ ನ್ನು ಸಂಪುಟ ಸಭೆಯಲ್ಲಿ ತೀರ್ಮಾನಿಸಿದ್ದೇವೆ. ಉಳಿದ ಬಿಲ್ ಗಳ ಬಗ್ಗೆ ಮುಂದಿನ ದಿನ ವಿವರಣೆ ನೀಡಿ ರಾಜ್ಯಪಾಲರಿಗೆ ಕಳುಹಿಸುತ್ತೇವೆ ಎಂದು ತಿಳಿಸಿದರು.


Share It

You cannot copy content of this page