ಅಪರಾಧ ಸುದ್ದಿ

ತುಮಕೂರು: ಹಬ್ಬ ಮುಗಿಸಿಕೊಂಡು ಬರುತ್ತಿದ್ದವರು ಮಸಣ ಸೇರಿದರು

Share It

ಎರಡು ಕಾರುಗಳ ಮಧ್ಯೆ ಅಪಘಾತ: 6 ಮಂದಿ ಸಾವು

ತುಮಕೂರು: ಎರಡು ಕಾರುಗಳ ನಡುವೆ ಡಿಕ್ಕಿಯಾಗಿ ಆರು ಮಂದಿ ಮೃತಪಟ್ಟು ಮೂವರು ಗಾಯಗೊಂಡಿರುವ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಕೆರೆಗಳಪಾಳ್ಯ ಗ್ರಾಮದ ಬಳಿ ಭಾನುವಾರ ನಡೆದಿದೆ.

ಗಣೇಶ ಹಬ್ಬ ಮುಗಿಸಿ ತುಮಕೂರಿನಿಂದ ಬೆಂಗಳೂರಿಗೆ ಪ್ರಯಾಣ ತೆರಳುತ್ತಿದ್ದರು. ಕಾರಿನಲ್ಲಿ ಧವಸ‌ ಧಾನ್ಯ, ಅಕ್ಕಿ, ಶೇಂಗಾ ಬೀಜ ಸೇರಿದಂತೆ ಹಲವು ಸಾಮಗ್ರಿಗಳನ್ನು ತುಂಬಿಕೊಂಡು ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದರು.

ಅಪಘಾತ ನಡೆದ ಸ್ಥಳಕ್ಕೆ ಎಡಿಜಿಪಿ ಅಲೋಕ್​ ಕುಮಾರ್ ಹಾಗೂ ಕೇಂದ್ರ ವಲಯ ಐಜಿಪಿ ಲಾಬೂರಾಮ್​ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕೊರಟಗೆರೆ ಕಡೆಗೆ ಮಾರುತಿ ಸಿಯಾಜ್ ಕಾರು ಹಾಗೂ ಮಧುಗಿರಿ ಕಡೆಗೆ ಟಾಟಾ ಟಿಯಾಗೋ ತೆರಳುತ್ತಿತ್ತು.

ಓವರ್​ಟೇಕ್ ವೇಳೆ ಸಿಯಾಜ್ ಕಾರು ಬಲಬದಿ ಲೇನ್​ಗೆ ನುಗ್ಗಿ ಅಪಘಾತ ಸಂಭವಿಸಿದೆ. ಸಿಯಾಜ್ ಕಾರಿನಲ್ಲಿ ಚಾಲಕ ಸಮೇತ ಒಟ್ಟು 7 ಜನ ಪ್ರಯಾಣಿಸುತ್ತಿದ್ದರು. ಹಬ್ಬ ಮುಗಿಸಿಕೊಂಡು ವಾಪಸ್​ ಬೆಂಗಳೂರಿಗೆ ಹಿಂದಿರುಗುತ್ತಿದ್ದರು. ಎದುರಿಗೆ ಬರ್ತಿದ್ದ ಟಾಟಾ ಟಿಯಾಗೋ ಕಾರಿನಲ್ಲಿದ್ದ ಇಬ್ಬರು ಮೃತಪಟ್ಟಿದ್ದಾರೆ.

ಮಧುಗಿರಿ ಕಡೆಗೆ ಹೋಗ್ತಿದ್ದ ನಾಗರಾಜ್, ಸಿದ್ದಗಂಗಾ ಮೃತಪಟ್ಟಿದ್ದಾರೆ. ಬೆಂಗಳೂರಿಗೆ ಹೋಗ್ತಿದ್ದ ಸಿಂಧೂ, ಜನಾರ್ಧನ್ ಸೇರಿ ನಾಲ್ವರು ಮೃತಪಟ್ಟಿದ್ದಾರೆ. ಉಳಿದ ಗಾಯಾಳುಗಳಿಗೆ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ವೆಂಕಟ್ ಮಾಹಿತಿ ನೀಡಿದರು.

ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಎತ್ತಿನಹಳ್ಳಿ ಗ್ರಾಮದಿಂದ ಸಿಂಧೂ ಅವ್ರ ಪುತ್ರ ವೇದಾಸ್ ರೆಡ್ಡಿ, ಜನಾರ್ದನ್ ರೆಡ್ಡಿ, ಕಾರು ಚಾಲಕ ಆನಂದ್ ಹಾಗೂ ಗೀತಾ ಯೋದಾ ಮತ್ತು ಟ್ರಯಾಂಗ್ ದೇವ್ ಸೇರಿ ಒಟ್ಟು 7 ಮಂದಿ ಹಬ್ಬ ಮುಗಿಸಿಕೊಂಡು ಬೆಂಗಳೂರಿನ ಜೆಪಿ ನಗರ ಕಡೆ ಪ್ರಯಾಣಿಸುತ್ತಿದ್ದರು.

ನಾಗರಾಜ್ ಹಾಗೂ ಸಿದ್ಧಗಂಗಾ ಎಂಬುವರು ಟಿಯಾಗೋ ಕಾರಿನಲ್ಲಿ ಬೆಂಗಳೂರು ಕಡೆಯಿಂದ ಮಧುಗಿರಿ ಕಡೆಗೆ ತೆರಳುತ್ತಿದ್ದರು. ಆದ್ರೆ ಮಧುಗಿರಿ ತಾಲೂಕಿನ ಕಾಟಗಾನಹಟ್ಟಿ ಬಳಿ ಎರಡು ಕಾರ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ.

ಅಪಘಾತದ ರಭಸಕ್ಕೆ ಮಾರುತಿ: ಸಿಯಾಜ್‌ ಕಾರ್‌ನಲ್ಲಿದ್ದ 33 ವರ್ಷದ ಸಿಂಧೂ ಅವರ ಪುತ್ರ 12 ವರ್ಷದ ವೇದಾಸ್‌ ರೆಡ್ಡಿ, 30 ವರ್ಷದ ಆನಂದ್, 60 ವರ್ಷದ ಜನಾರ್ದನ ರೆಡ್ಡಿ ಸಾವನಪ್ಪಿದ್ದಾರೆ. ಇನ್ನು ಟಿಯಾಗೋ ಕಾರಿನಲ್ಲಿದ ಪಿಗ್ಮಿ ಕಲೆಕ್ಟರ್ ನಾಗರಾಜ್ ಮತ್ತು ಸಿದ್ಧಗಂಗಾ ಮೃತಪಟ್ಟಿದ್ದಾರೆ.


Share It

You cannot copy content of this page