ಬೆಂಗಳೂರು: ವಾಲ್ಮೀಕಿ ನಿಗಮದಲ್ಲಿ ನಡೆದಿರುವ ಹಗರಣದ ಕುರಿತು ಮಾಜಿ ಸಚಿವ ಅರವಿಂದ ಲಿಂಬಾವಳಿ ನೇತೃತ್ವದ ಬಿಜೆಪಿ ನಿಯೋಗ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ದೂರು ನೀಡಿದೆ.
ಬಿಜೆಪಿಯ ಮತ್ತೊಂದು ಬಣ ಮೂಡಾ ಹಗರಣದ ವಿರುದ್ಧ ಸಮರ ಸಾರಿದ್ದು, ಅರವಿಂದ್ ಲಿಂಬಾವಳಿ ಸೇರಿದಂತೆ ಹಿರಿಯ ಕೆಲವು ಬಿಜೆಪಿ ನಾಯಕರು ವಾಲ್ಮೀಕಿ ಹಗರಣವನ್ನು ಮುಖ್ಯವಾಗಿಸಿಕೊಂಡು ಹೋರಾಟಕ್ಕೆ ಇಳಿದಿದ್ದಾರೆ.
ಅರವಿಂದ ಲಿಂಬಾವಳಿ ನೇತೃತ್ವದಲ್ಲಿ ಬಸನಗೌಡ ಪಾಟೀಲ್ ಯತ್ನಾಳ, ರಮೇಶ್ ಜಾರಕಿಹೊಳಿ, ಮಧು ಬಂಗಾರಪ್ಪ, ಸೋಮಲಿಂಗಪ್ಪ, ಬಿ.ಪಿ. ಹರೀಶ್ ಸೇರಿದಂತೆ ಅನೇಕರು ನಾಯಕರು ಜತೆಯಲ್ಲಿದ್ದರು.
ನೆನ್ನೆಯಷ್ಟೇ ಬಿಜೆಪಿಯ ಮೂರು ಬಣಗಳ ನಡುವೆ ಸಮನ್ವಯ ಸಭೆ ನಡೆಸಿದ್ದ ಆರ್ ಎಸ ಎಸ್ ನಾಯಕರು, ಹೊಂದಾಣಿಕೆಯಿಂದ ಹೋಗುವಂತೆ ಸೂಚನೆ ನೀಡಿದ್ದರು. ಮರುದಿನವೇ ಹಿರಿಯ ನಾಯಕರ ತಂಡ ಒಂದೆಜ್ಜೆ ಮುಂದಿಟ್ಟಿರುವುದು ಸಹಜವಾಗಿ ಬಿಜೆಪಿ ಬಣ ರಾಜಕೀಯ ಹೆಚ್ಚಿಸಲಿದೆ.