ಉಪಯುಕ್ತ ಸುದ್ದಿ

ಸೀತಾಫಲ ಹಣ್ಣನ್ನು ಸೇವಿಸುವಾಗ ಎಚ್ಚರ! ಅತಿಯಾಗಿ ತಿಂದ್ರೆ ಆರೋಗ್ಯ ಸಮಸ್ಯೆ ಗ್ಯಾರಂಟಿ!

Share It

ಹಣ್ಣುಗಳು ಹೆಚ್ಚು ಪೋಷಕಾಂಶಗಳನ್ನು ಹೊಂದಿರುತ್ತವೆ. ವೈದ್ಯರು ಸಹ ಹಣ್ಣುಗಳನ್ನು ನಿಯಮಿತವಾಗಿ ತಿನ್ನಲು ಸಲಹೆ ನೀಡುತ್ತಾರೆ. ಅದರಲ್ಲಿಯೂ ಸೀತಾ ಫಲ ಹಣ್ಣನ್ನು ಹೆಚ್ಚು ಸೇವೆಸಲೇ ಬಾರದು ಎಂದು ವೈದ್ಯರು ಹೇಳುತ್ತಾರೆ. ಅಷ್ಟಕ್ಕೂ ಈ ಹಣ್ಣಿನಲ್ಲಿ ಅಂತದ್ದು ಏನಿದೆ ಎಂಬುದನ್ನು ಈ ಸ್ಟೋರಿಯಲ್ಲಿ ನೋಡೋಣ ಬನ್ನಿ.

ಭಾರತೀಯರಿಗೆ ಎಲ್ಲರಿಗೂ ಪರಿಚಯವಿರುವ ಹಣ್ಣು ಸೀತಾಫಲ. ಬೇರೆ ಬೇರೆ ಸ್ಥಳಗಳಲ್ಲಿ ಬೇರೆ ಬೇರೆ ನಾಮಧೇಯದಿಂದ ಕರೆಯುತ್ತಾರೆ. ಈ ಹಣ್ಣಿನಲ್ಲಿ ಆ್ಯಂಟಿ ಆಕ್ಸಿಡೆಂಟ್ಸ್ ಅಂಶವು ಹೆಚ್ಚಿರುತ್ತದೆ. ಇದು ನಮ್ಮ ದೇಹಕ್ಕೆ ಹಾನಿಯ ಉಂಟು ಮಾಡುವ ಸೂಕ್ಷ್ಮಾಣು ಜೀವಿಗಳಿಂದ ರಕ್ಷಿಸುತ್ತದೆ ಎಂದು ವೈದ್ಯಕೀಯ ಲೋಕ ಹೇಳುತ್ತದೆ.

ವೈದ್ಯರು ಹೇಳುವಂತೆ ಈ ಹಣ್ಣಿನಲ್ಲಿ ವಿಟಮಿನ್ ಸಿ ಅಧಿಕ ಪ್ರಮಾಣದಲ್ಲಿ ಇರುತ್ತದೆ. ಅದೇ ರೀತಿ ಸೋಡಿಯಂ, ಪೊಟ್ಯಾಶಿಯಂ, ಥಯಾಮಿನ್, ಪ್ಯಾಂಟೊಥೆನಿಕ್ ಮುಂತಾದ ಅಪರೂಪದ ಅಂಶಗಳಿದ್ದು ಅತಿಯಾಗಿ ಸೇವನೆ ಮಾಡುವುದರಿಂದ ಅಪಾಯ ಆಗಬಹುದು.

ಅಲರ್ಜಿ ಸಮಸ್ಯೆ

ಈ ಹಣ್ಣನ್ನು ಸೇವಿಸಿದ ನಂತರ ಕೆಲವರಿಗೆ ಗಂಟಲಲ್ಲಿ ಅಲರ್ಜಿ ಆಗಬಹುದು. ಅಥವಾ ಮೈ ತುರಿಕೆ ಆಗಬಹುದು. ನೆಗಡಿಯು ಸಂಭವಿಸಬಹುದು.ಇಂತಹ ಲಕ್ಷಣ ಇರುವವರು ಇದರ ಬಳಕೆ ಕಡಿಮೆ ಮಾಡಿ.

ಹೊಟ್ಟೆ ನೋವು

ಕೆಲವರಿಗೆ ಈ ಹಣ್ಣನ್ನು ತಿಂದಾಗ ಹೊಟ್ಟೆ ನೋವು ಬರುತ್ತದೆ. ಅವರಿಗೆ ಅಜೀರ್ಣದ ಸಮಸ್ಯೆ ಸಹ ಆಗುತ್ತದೆ. ಈ ಹಣ್ಣು ಹೆಚ್ಚಿನ ಪ್ರಮಾಣದ ನಾರಿನ ಅಂಶದಿಂದ ಕೂಡಿರುತ್ತದೆ. ಆದ್ದರಿಂದ ಈ ಸಮಸ್ಯೆ ಉಂಟಾಗುತ್ತದೆ.

ಬೀಜಗಳನ್ನು ತಿನ್ನಬಾರದು

ಚಿಕ್ಕವರಿದ್ದಾಗ ಬೀಜಗಳು ಹೊಟ್ಟೆ ಒಳಗೆ ಹೋದರೆ ಮರವಾಗುತ್ತದೆ ಎಂದು ಹೇಳಿ ಎದರಿಸುತ್ತಿದ್ದರು. ಆದ್ರೆ ಸೀತಾಫಲ ಬೀಜಗಳು ನಿಜಕ್ಕೂ ಅಪಾಯಕಾರಿ. ಅವುಗಳು ಬೀಜದಲ್ಲಿ ಅಪಾಯಕಾರಿ ಸಂಯುಕ್ತಗಳನ್ನು ಒಳಗೊಂಡಿರುತ್ತವೆ.

ವಾಕರಿಕೆ

ಕೆಲವೊಮ್ಮೆ ಹಣ್ಣನ್ನು ಸೇವನೆ ಮಾಡುವಾಗ ವಾಕರಿಗೆ ಬರಲುಬಹುದು. ಇದರಲ್ಲಿ ಕಬ್ಬಿಣದ ಅಂಶವು ಅಧಿಕವಾಗಿರುತ್ತದೆ.

ಕೆಮ್ಮು, ಜ್ವರ,ನೆಗಡಿ

ಶೀತ ಕಾಲದಲ್ಲಿ ಈ ಹಣ್ಣನ್ನು ಸೇವನೆ ಮಾಡುವುದರಿಂದ ನೆಗಡಿ ಗೆ ಕಾರಣವಾಗುತ್ತದೆ. ಗರ್ಭಿಣಿಯರು ಈ ಹಣ್ಣನ್ನು ತಿನ್ನಲೆ ಬಾರದು. ಮಧುಮೇಹಕ್ಕೆ ಈ ಹಣ್ಣು ಪರಿಹಾರವಾದರು ವೈದ್ಯರ ಸಲಹೆಯ ಮೇಲೆ ತಿನ್ನುವುದು ಒಳ್ಳೆಯದು.


Share It

You cannot copy content of this page