ಮದ್ಯ ಸೇವನೆ ಆದ್ರೆ ಕೆಲವರು ವಿರೋಧ ಮಾಡುತ್ತಾರೆ. ಕೆಲವರು ಒಪ್ಪುತ್ತಾರೆ. ಅದು ಬೇರೆ ವಿಚಾರ ಆದ್ರೆ ಇಂದು ಅಬಕಾರಿ ಇಲಾಖೆಯಿಂದ ದೇಶಕ್ಕೆ ಬರುವಷ್ಟು ಆದಾಯ ಬೇರೆ ಮೂಲಕಗಳಿಂದ ಬರುವುದಿಲ್ಲ ಎಂಬುದು ಅಷ್ಟೇ ಸತ್ಯ. ಅದರಲ್ಲಿಯೂ ಬಿಯರ್ ಆದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಯುವಕರ ಪಾರ್ಟಿಗಂತೂ ಬಿಯರ್ ಇರಲೇ ಬೇಕು. ಮಹಿಳೆಯರು ಸಹ ಬಿಯರ್ ಕುಡಿದು ಎಂಜಯ್ ಮಾಡುವುದನ್ನು ನಾವು ನೋಡಿಯೇ ಇದ್ದೇವೆ. ಬಿಯರ್ ಗಳಲ್ಲಿ ಹತ್ತಾರು ಕಂಪನಿಯ ವ್ಯರೈಟಿ ಗಳಿವೆ. ಆಗಿದ್ರೆ ಮಾರುಕಟ್ಟೆಗೆ ಬಂದಿರುವ ಹೊಸ ಬಿಯರ್ ಯಾವುದು ಎಂಬುದನ್ನ ನೋಡೋಣ ಬನ್ನಿ.
ಕೆಲವರಿಗೆ ಅತಿಯಾಗಿ ಕುಡಿದರೆ ವಾಂತಿ ಆಗೋದು ಆಗೋದು ಪಕ್ಕ. ಆದ್ರೆ ಸಿಂಗಾಪುರ ದೇಶವು ತಯಾರು ಮಾಡಿರುವ ಬಿಯರ್ ನ ಕೇಳಿದ್ರೆ ನಿಮಗೆ ವಾಂತಿಯಾಗುತ್ತದೆ. ಈ ಬಿಯರ್ ಅನ್ನು ಮನುಷ್ಯನ ಮೂತ್ರ ಮತ್ತು ಒಳಚರಂಡಿ ನೀರಿನಿಂದ ಮಾಡಲಾಗಿದೆ. ಈ ವರೆಗೆ ಹೆಚ್ಚು ಆಕರ್ಷಣೆ ಮಾಡುತ್ತಿದ್ದ ಬಿಯರ್ ಗಳ ಪೈಕಿ ಸಿಂಗಾಪುರದ ನ್ಯೂಬ್ರೂ ಬಿಯರ್ ಬಹಳ ಮನ್ನಣೆಗೆ ಪಾತ್ರವಾಗಿತ್ತು.
ಈ ಬಿಯರ್ ಅನ್ನು ಕಂಪನಿಯು ಅಂತರಾಷ್ಟ್ರೀಯ ಮಾನದಂಡಗಳಿಗೆ ಬದ್ದವಾಗಿ ತಯಾರು ಮಾಡಿದೆ. ಮೂತ್ರವನ್ನು ಬಳಸಿಕೊಂಡು ಒಳಚರಂಡಿ ನೀರನ್ನು ಶುದ್ಧೀಕರಣ ಮಾಡಿದೆ. ಇದನ್ನು ಕುಡಿಯುವ ನೀರಿನ ತರಹ ಬಳಕೆ ಮಾಡಬಹುದಾಗಿದೆ.
ಮುಖ್ಯವಾಗಿ ಮೂತ್ರ ಮತ್ತು ಒಳಚರಂಡಿ ನೀರಿನಿಂದ ಕೊನೆಯದಾಗಿ ಹೊರ ತೆಗೆಯುವ ನೀರನ್ನು ನೀವಾಟರ್ ಎಂದು ಕರೆಯಲಾಗಿದೆ. ಹಾಗೇ ಪ್ರಸಿದ್ಧ ನ್ಯೂಬ್ರೂ ಬಿಯರ್ ತಯಾರು ಮಾಡಲು ಸುಮಾರು 95 ರಷ್ಟು ಈ ನೀವಾಟರ್ ಅನ್ನು ಬಳಕೆ ಮಾಡುತ್ತಾರೆ. ಇದನ್ನು ಹಸಿರು ಬಿಯರ್ ಎಂತಲೂ ಕರೆಯುತ್ತಾರೆ.
ಈ ಬಿಯರ್ ನಿಂದಾಗಿ ದೇಶದಲ್ಲಿ ನೀರಿನ ಸಮಸ್ಯೆಯನ್ನು ಬಗೆಹರಿಸುವ ಪ್ಲಾನ್ ಅನ್ನು ಅಲ್ಲಿನ ಸರ್ಕಾರ ರೂಪಿಸಿದೆ. ಮುಂದೆ ಆಗುವ ಕುಡಿಯುವ ನೀರಿನ ಆಭವಕ್ಕೆ ಸಿದ್ಧತೆ ನಡೆಸಿದೆ. ಜೊತೆಗೆ ನೀರಿನ ಬಗ್ಗೆ ಜಾಗೃತಿಯನ್ನು ಮೂಡಿಸುವ ಕೆಲಸ ನಡೆಯುತ್ತಿದೆ. ಶಿಕ್ಷಣ ಸಂಸ್ಥೆಗಳಲ್ಲಿ ಈ ಬಗ್ಗೆ ಹೇಳಲಾಗುತ್ತಿದೆ. ಸದ್ಯ ಇದು ಸಿಂಗಾಪುರದಲ್ಲಿ ಹೆಚ್ಚು ಫೇಮಸ್ ಆಗುತ್ತಿರುವ ಬಿಯರ್ ಆಗಿದೆ.
ಕೆಲ ವರ್ಷಗಳ ಹಿಂದೆ ಕೊಳಚೆ ನೀರನ್ನು ಸಂಸ್ಕರಿಸಿ ಮರು ಬಳಕೆ ಮಾಡುವ ವಿಷಯಕ್ಕೆ ಸಂಬಂಧಪಟ್ಟಂತೆ ಭಾರಿ ವಿರೋಧ ವ್ಯಕ್ತವಾಗಿತ್ತು. ನೀರಿನ ಅಭಾವ ಕಾಣಿಸಿಕೊಂಡಾಗ ಇದನ್ನು ಅಳವಡಿಕೆ ಮಾಡಿಕೊಳ್ಳುವುದು ಸೂಕ್ತ ಎಂದು ಅರಿತರು. ಲಾಸ್ ಏಂಜಲೀಸ್ ಹಾಗೂ ಇಸ್ರೇಲ್ ನ ಅನೇಕ ದೇಶಗಳು ಇದನ್ನು ಅನುಸರಣೆ ಮಾಡುತ್ತಿವೆ.