ಅಪರಾಧ ಸುದ್ದಿ

ನಿಪ್ಪಾಣಿ ಬಳಿ ಭೀಕರ ಅಪಘಾತ: ಇಬ್ಬರು ಸ್ಥಳದಲ್ಲೇ ಸಾವು

Share It

ಬೆಳಗಾವಿ : ನಿಪ್ಪಾಣಿ ಬಳಿಯ ಸ್ಥವನಿಧಿ ಘಾಟ್ ಬಳಿ ರವಿವಾರ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಟ್ರಕ್ ಬ್ರೇಕ್ ಫೈಲ್ ಆದ ಪರಿಣಾಮ ಏಳು ಕಾರು ಮತ್ತು 5 ಬೈಕಿಗೆ ಹೊಡೆದು ಈ ಅನಾಹುತ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ ಎಂದು ಎಂದು ಮೂಲಗಳು ತಿಳಿಸಿವೆ.

ರಾಷ್ಟ್ರೀಯ ಹೆದ್ದಾರಿಯ ನಿಪ್ಪಾಣಿ ಸಮೀಪದ ಘಾಟ್‌ನಲ್ಲಿ ವಾಹನಗಳು ಭೀಕರ ಅಪಘಾತಕ್ಕೀಡಾಗಿದ್ದು, ಈ ಅಪಘಾತದಿಂದ ಸಂಚಾರ ಅಸ್ತವ್ಯಸ್ತಗೊಂಡಿದೆ. ಸಾವಿನ ಸಂಖ್ಯೆಯೂ ಹೆಚ್ಚಾಗುವ ಸಾಧ್ಯತೆ ಇದೆ.

ರವಿವಾರ ಸಂಜೆ 5.30ರ ನಡುವೆ ಘಾಟ್‌ನ ಅಮರ್ ಹೋಟೆಲ್ ಬಳಿಯ ತಿರುವಿನಲ್ಲಿ ಅಪಘಾತ ಸಂಭವಿಸಿದೆ.

ಈ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಇನ್ನೂ ತಿಳಿದುಬಂದಿಲ್ಲ, ಆದರೆ ಸಂಖ್ಯೆ 4 ಕ್ಕಿಂತ ಹೆಚ್ಚು ಎನ್ನಲಾಗಿದೆ. ಈ ಅವಘಡದಿಂದಾಗಿ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ಕಳೆದ ಒಂದೂವರೆ ಗಂಟೆಯಿಂದ ವಾಹನಗಳು ನಿಲುಗಡೆಗೊಂಡಿವೆ.

ಕಂಟೈನರ್ ಡಿಕ್ಕಿ ಹೊಡೆದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ. ಅಪಘಾತ ಹೇಗೆ ಸಂಭವಿಸಿದೆ ಮತ್ತು ಎಷ್ಟು ಮಂದಿ ಸಾವನ್ನಪ್ಪಿದ್ದಾರೆ ಎಂಬ ಬಗ್ಗೆ ನಿಖರ ಮಾಹಿತಿ ಇನ್ನೂ ಲಭ್ಯವಾಗಿಲ್ಲ.


Share It

You cannot copy content of this page