ಕ್ರೀಡೆ ಸುದ್ದಿ

ಟೀಮ್ ಇಂಡಿಯಾಗೆ ಆಧಾರ ಸ್ಥಂಭವಾದ ಜಡೇಜಾ ಅಶ್ವಿನ್ ಜೋಡಿ

Share It

ಶಿವರಾಜು ವೈ. ಪಿ
ಎಲೆರಾಂಪುರ

ಚೆನ್ನೈ : ಭಾರತ ಮತ್ತು ಬಂಗ್ಲಾದೇಶದ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲನೇ ಪಂದ್ಯದಲ್ಲಿ  ಟಾಸ್ ಸೋತು ಮೊದಲು ಬ್ಯಾಟಿಂಗ್ ಆಡಲು ನಿರ್ಧರಿಸಿತು.

ಈಗಾಗಲೇ ಮೊದಲ ಪಂದ್ಯದ ಮೊದಲ ದಿನದ ಆಟ ಮುಕ್ತಯಗೊಂಡಿದ್ದು. ಬ್ಯಾಟಿಂಗ್ ನಲ್ಲಿ ವಿಫಲವಾಗಿದ್ದ ಟೀಮ್ ಇಂಡಿಯಾಗೆ ಅಶ್ವಿನ್ ಜಡೇಜಾ ಜೋಡಿಯ 195 ರಗಳ ಜೊತೆಯಾಟ ಭಾರತಕ್ಕೆ ಆಧಾರ ಸ್ಥಂಭವಾಯಿತು.

ಆರಂಭಿಕ ಆಟಗಾರರಾಗಿ  ನಾಯಕ ರೋಹಿತ್ ಶರ್ಮ ಮತ್ತು ಯಶಸ್ವಿ ಜೈಸ್ವಾಲ್ ಕಣಕ್ಕಿಳಿದರು. ಬಾಂಗ್ಲಾದ ಪರ ಬೌಲ್ ಮಾಡಿದ ಹಸನ್ ಮಹಮೂದ್ ರೋಹಿತ್ ಶರ್ಮನನ್ನು ಔಟ್ ಮಾಡುವ ಮೂಲಕ ಅಘಾತ ನೀಡಿದರು. ಬಳಿಕ ಬಂದ ಯುವ ಆಟಗಾರ ಶುಭ್ಮನ್ ಗಿಲ್ ಖಾತೆ ತೆರೆಯಲು ವಿಫಲರಾದರು.

ಬರೋಬ್ಬರಿ 9 ತಿಂಗಳ ಬಳಿಕ ಟೆಸ್ಟ್ ಆವೃತ್ತಿಗೆ ಕಂಬ್ಯಾಕ್ ಮಾಡಿದ್ದ ವಿರಾಟ್ ಕೊಹ್ಲಿ ಮತ್ತೆ ರನ್ ಕಲೆ ಹಾಕುವುದರಲ್ಲಿ ವಿಫಲವಾಗಿ ಪೆವಿಲಿಯನ್ ಸೇರಿದರು. ಮತ್ತೊಂದೆಡೆ ಗೋಡೆಯಂತೆ ನಿಂತಿದ್ದ ಜೈಸ್ವಾಲ್ ಗೆ ಕೀಪರ್ ರಿಷಬ್ ಪಂತ್ ಆಸರೆಯಾದರು. ಬಳಿಕ ಇನ್ನಿಂಗ್ಸ್ ಗೆ ತಿರುವು ನೀಡಲು ಹೋದ ಪಂತ್ ವಿಕೆಟ್ ಒಪ್ಪಿಸಿ ಪೆವಿಲಿಯನ್  ಸೇರಿದರು.

ಬಳಿಕ ಅಭಿಮಾನಿಗಳ ನೀರಿಕ್ಷೆಗಳನ್ನು ಹೊತ್ತು ಕಣಕ್ಕಿಳಿದ ಕನ್ನಡಡಿಗ ಕೆ.ಎಲ್ ರಾಹುಲ್ ಮತ್ತೆ ಅಭಿಮಾನಿಗಳ ನೀರಿಕ್ಷೆಯನ್ನು ಹುಸಿಗೊಳಿಸಿದರು. ಬ್ಯಾಟಿಂಗ್ ವೈಫಲ್ಯದಿಂದ ಸೋತಿದ್ದ ಟೀಮ್ ಇಂಡಿಯಾಗೆ ಕೊನೆಗೆ ಆಸರೆಯಾಗಿದ್ದು ಜಡೇಜಾ ಅಶ್ವಿನ್ ಜೋಡಿ.

ಭಾರತದ ಪರ ಬ್ಯಾಟ್ ಬೀಸಿದ ಆಲ್ ರೌಂಡರ್ ಜಡೇಜಾ ಎರಡು ಸಿಕ್ಸರ್ ಮತ್ತು ಹತ್ತು ಬೌಂಡರಿ ಸಹಿತ 117 ಬಾಲ್ ಗಳಲ್ಲಿ ಬರೋಬ್ಬರಿ 86 ರಗಳನ್ನು ಸಿಡಿಸಿದರು. ಮತ್ತು ಅಶ್ವಿನ್ ರವರ ಅಮೋಘ ಶತಕದೊಂದಿಗೆ ಟೀಮ್ ಇಂಡಿಯಾ 6 ವಿಕೆಟ್ ಗಳ ನಷ್ಟಕ್ಕೆ 339 ರನ್ ಗಳನ್ನು ಗಳಿಸಿ ಮೊದಲ ದಿನದ ಆಟಕ್ಕೆ ತೆರೆ ಎಳೆದರು .


Share It

You cannot copy content of this page