ಕ್ರೀಡೆ ಸುದ್ದಿ

ಭಾರತದ ಉದಯೋನ್ಮುಖ ಯುವ ಕ್ರಿಕೆಟ್ ಆಟಗಾರನಿಗೆ ಆಕ್ಸಿಡೆಂಟ್ !

Share It

ಮುಂಬೈ: ಆಲ್‌ರೌಂಡರ್ ಮತ್ತು ಭಾರತದ ತಂಡದಲ್ಲಿ ಪ್ರಮುಖ ಯುವ ಬ್ಯಾಟ್ಸಮನ್ ಆಗಿರುವ ಸರ್ಫರಾಜ್ ಖಾನ್ ಅವರ ಕಿರಿಯ ಸಹೋದರ ಮುಶೀರ್ ಖಾನ್ ಶುಕ್ರವಾರ(ಸೆಪ್ಟೆಂಬರ್ 26) ಲಕ್ನೋದ ಹೊರವಲಯದಲ್ಲಿ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದಾರೆ.

ಅಕ್ಟೋಬರ್ 1 ರಂದು ಪ್ರಾರಂಭವಾಗುವ ಇರಾನಿ ಕಪ್‌ಗಾಗಿ ಮುಶೀರ್ ತಮ್ಮ ತಂದೆ ನೌಶಿದ್ ಖಾನ್ ಜೊತೆಗೆ ಅಜಂಗಢದಿಂದ ಲಕ್ನೋಗೆ ತೆರಳುತ್ತಿದ್ದರು. ರಸ್ತೆ ಅಘಾತದಿಂದ ಕತ್ತಿನ ಜಾಗದಲ್ಲಿ ಮೂಳೆ ಮುರಿದಿರುವುದು ತಿಳಿದು ಬಂದಿದೆ. ಇನ್ನೂ 16 ವಾರಗಳ ಕಾಲ ಮುಶೀರ್ ಖಾನ್ಗೆ ಕ್ರಿಕೆಟ್ ಆಡಲು ಅವಕಾಶವಿಲ್ಲದಂತಾಗಿದೆ.

ಮುಶೀರ್ ಖಾನ್ ಈ ತಿಂಗಳ ಆರಂಭದಲ್ಲಿ ದುಲೀಪ್ ಟ್ರೋಫಿಯಲ್ಲಿ 181 ರನ್ ಗಳಿಸಿದ್ದರು.
ಈ ವರ್ಷದ ರಣಜಿ ಟ್ರೋಫಿಯ ಮೊದಲ ಕೆಲವು ಸುತ್ತುಗಳನ್ನು ಆಡುವ ಸಾಧ್ಯತೆ ಕಡಿಮೆ.ಎಕಾನಾ ಸ್ಟೇಡಿಯಂನಲ್ಲಿ ನಡೆಯಲಿರುವ ಪ್ರಥಮ ದರ್ಜೆ ಇರಾನಿ ಕಪ್ ಪಂದ್ಯಾವಳಿಯಲ್ಲಿ ರಣಜಿ ಟ್ರೋಫಿ ಚಾಂಪಿಯನ್ ಮುಂಬೈ ತಂಡವನ್ನು ಪ್ರತಿನಿಧಿಸಲು ಮುಶೀರ್ ಸಜ್ಜಾಗಿದ್ದರು.

ಮುಶೀರ್ ತನ್ನ ತಂದೆ ಮತ್ತು ಇತರ ಇಬ್ಬರೊಂದಿಗೆ ಪ್ರಯಾಣಿಸುತ್ತಿದ್ದಾಗ ಅವರ ಎಸ್‌ಯುವಿ, ಟೊಯೊಟಾ ಫಾರ್ಚುನರ್, ಮೀಡಿಯನ್‌ಗೆ ಡಿಕ್ಕಿ ಹೊಡೆದು ಉರುಳಿಬಿದ್ದಿದೆ ಎಂದು ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಶನಿವಾರ ನೀಡಲಾದ MCA (ಮುಂಬೈ ಕ್ರಿಕೆಟ್ ಅಸೋಸಿಯೇಷನ್ ) ಹೇಳಿಕೆಯು ಮುಶೀರ್ ಖಾನ್ಗೆ ಆಗಿರುವ ಕತ್ತಿನ ಗಾಯವನ್ನು ದೃಢಪಡಿಸಿದೆ ಮತ್ತು “ಅವರು ಎಚ್ಚರವಾಗಿದ್ದಾರೆ ಪ್ರಾಣಕ್ಕೆನೂ ಸಮಸ್ಯೆಯಿಲ್ಲ ಎಂದು ಹೇಳಿದರು.

ಒಮ್ಮೆ ಮುಶೀರ್ ವೈದ್ಯಕೀಯವಾಗಿ ಪ್ರಯಾಣಕ್ಕೆ ಯೋಗ್ಯರೆಂದು ಪರಿಗಣಿಸಿದರೆ, ಹೆಚ್ಚಿನ ಮೌಲ್ಯಮಾಪನ ಮತ್ತು ಹೆಚ್ಚುವರಿ ವೈದ್ಯಕೀಯ ಚಿಕಿತ್ಸೆಗಾಗಿ ಅವರನ್ನು ಮುಂಬೈಗೆ ಕಳಿಸುತ್ತಾರೆ. ಈ ಮೌಲ್ಯಮಾಪನಗಳನ್ನು ಅನುಸರಿಸಿ ಅವರ ಚೇತರಿಕೆಯ ಸಮಯವನ್ನು ನಿರ್ಧರಿಸಲಾಗುತ್ತದೆ.

ಎಕಾನಾ ಸ್ಟೇಡಿಯಂನಲ್ಲಿ ನಡೆಯಲಿರುವ ಪ್ರಥಮ ದರ್ಜೆ ಇರಾನಿ ಕಪ್ ಪಂದ್ಯಾವಳಿಯಲ್ಲಿ ರಣಜಿ ಟ್ರೋಫಿ ಚಾಂಪಿಯನ್ ಮುಂಬೈ ತಂಡವನ್ನು ಪ್ರತಿನಿಧಿಸಲು ಮುಶೀರ್ ಸಜ್ಜಾಗಿದ್ದರು. ಇರಾನಿ ಕಪ್ ನಂತರದಲ್ಲಿ ಮುಂಬೈ ಅಕ್ಟೋಬರ್ 11 ರಂದು ಬರೋಡಾ ವಿರುದ್ಧ ರಣಜಿ ಅಭಿಯಾನವನ್ನು ಪ್ರಾರಂಭಿಸಲಿದೆ.

ಮೊದಲ ದರ್ಜೆಯ ವೃತ್ತಿಜೀವನದ ಅದ್ಭುತ ಆರಂಭದ ನಂತರ ಮುಶೀರ್‌ಗೆ ಗಾಯವು ಹಿನ್ನಡೆಯಾಗಿದೆ; ಅವರು ಒಂಬತ್ತು ಪ್ರಥಮ ದರ್ಜೆ ಪಂದ್ಯಗಳಲ್ಲಿ ಮೂರು ಶತಕ ಮತ್ತು ಅರ್ಧ ಶತಕಗಳನ್ನು ಹೊಂದಿದ್ದಾರೆ. ಇದರಲ್ಲಿ ಕಳೆದ ಋತುವಿನ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್‌ನಲ್ಲಿ ದ್ವಿಶತಕ, ಸೆಮಿಫೈನಲ್‌ನಲ್ಲಿ ಅರ್ಧಶತಕ ಮತ್ತು ವಿದರ್ಭ ವಿರುದ್ಧದ ಫೈನಲ್‌ನಲ್ಲಿ ಪಂದ್ಯಶ್ರೇಷ್ಠ ಶತಕ ಪಡೆದುಕೊಂಡಿದ್ದರು.


Share It

You cannot copy content of this page