ನವಲಗುಂದ: ಅತೀ ಹೆಚ್ಚು ಮಳೆಯಾಗಿ ಎಲ್ಲಾ ರಸ್ತೆಗಳು ಸೇತುವೆ, ಬೆಳೆದ ಬೆಳೆಗಳು ಹಾಳಾಗಿದ್ದು ಕೇಂದ್ರ ಸರ್ಕಾರ ಮಾನದಂಡಗಳಂತೆ ರಾಜ್ಯ ಸರ್ಕಾರ ಪರಿಹಾರ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಭದ್ದವಾಗಿದೆ ಎಂದು ನವಲಗುಂದ ಶಾಸಕ ಎನ್.ಹೆಚ್. ಕೋನರಡ್ಡಿ ಹೇಳಿದರು.
ಅವರು ಇಂದು ನವಲಗುಂದ ವಿಧಾನಸಭಾ ಕ್ಷೇತ್ರದ ನವಲಗುಂದ, ಅಣ್ಣಿಗೇರಿ ಹಾಗೂ ಹುಬ್ಬಳ್ಳಿ ತಾಲೂಕಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ (KDP) ಸಭೆ ಹಾಗೂ ಮಳೆಯಿಂದ ಹಾನಿಯಾದ ಕುರಿತು ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಈ ಮೊದಲು ಹೆಚ್ಚು ಮಳೆಯಾದಾಗ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್, ನಾನು ಸೇರಿ ತುಪ್ಪರಿಹಳ್ಳದಿಂದ ತೊಂದರೆ ಆದ ಶಿರೂರ, ಗುಮ್ಮಗೊಳ, ಬ್ಯಾಲಾಳ, ಹನಸಿ ಹಾಗೂ ಶಿರಕೋಳ ಗ್ರಾಮಗಳಿಗೆ ಭೇಟಿ ನೀಡಿ ಸರ್ಕಾರ ನಿಮ್ಮ ಜೊತೆ ಇದೆ ಎಂದು ಭರವಸೆ ನೀಡಿದ್ದೇವೆ. ಪ್ರತಿ ವರ್ಷಕ್ಕಿಂತ ಈ ಬಾರಿ ಅತೀ ಹೆಚ್ಚಿನ ಮಳೆಯಾಗಿದ್ದರಿಂದ ಬೆಳೆಹಾನಿ, ರಸ್ತೆ, ಸೇತುವೆಗಳನ್ನು ಪರೀವೀಕ್ಷಣೆ ಮಾಡಿ ಸರ್ವೆ ಮಾಡಲು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಭಾರತೀಯ ಜನತಾ ಪಾರ್ಟಿಯವರು ಶಾಸಕರು ಹೊರದೇಶಕ್ಕೆ ಮೊಜು ಮಸ್ತಿ ಮಾಡಲು ಹೋಗಿದ್ದಾರೆ ಎಂದು ಪ್ರತಿಭಟನೆಯನ್ನು ಮಾಡಿದ್ದಾರೆ. ನಾನು 3 ತಿಂಗಳ ಹಿಂದೆ ಪೂರ್ವ ನಿಗಧಿ ಕಾರ್ಯದಂತೆ 10 ದಿವಸ ವಿದೇಶ ಪ್ರವಾಸ ಹೋದಾಗ ಭಾರತೀಯ ಜನತಾ ಪಾರ್ಟಿಯವರು ತಹಶಿಲ್ದಾರ ಕಟ್ಟಡಕ್ಕೆ ಮುತ್ತಿಗೆ ಹಾಕಿರುವುದು ಒಳ್ಳೆಯ ಬೆಳವಣಿಗೆಯಲ್ಲಾ, 5 ವರ್ಷ ಭಾರತೀಯ ಜನತಾ ಪಾರ್ಟಿಯವರು ಅಧಿಕಾರದಲ್ಲಿದಾಗ ಸಾರ್ವಜನಿಕರಿಗೆ ಭೇಟಿಯೇ ಆಗುತ್ತಿರಲ್ಲಿಲ್ಲಾ ಎಂಬುದು ಕ್ಷೇತ್ರದ ಜನತೆಗೆ ಗೊತ್ತಿರುವ ವಿಷಯ ಎಂದರು.
ಸಭೆಯಲ್ಲಿ ಕೃಷಿ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ, ನವಲಗುಂದ ತಹಶೀಲ್ದಾರ ಸುಧೀರ ಸಾವಕಾರ, ಅಣ್ಣಿಗೇರಿ ತಹಶೀಲ್ದಾರ ಮಂಜುನಾಥ ದಾಸಪ್ಪನವರ, ಹುಬ್ಬಳ್ಳಿ ತಹಶೀಲ್ದಾರ ಜೆ.ಬಿ. ಮಜ್ಜಗಿ, ಅಣ್ಣಿಗೇರಿ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳಾದ ಭ್ಯಾಗ್ಯಶ್ರೀ ಜಾಗೀರದಾರ, ಹುಬ್ಬಳ್ಳಿ ತಾ.ಪಂ. ಯಶವಂತಕುಮಾರ, ಸಿಪಿಐ ರವಿ ಕಪ್ಪತ್ತನವರ, ಕಿಮ್ಸ್ ನಾಮನಿರ್ದೇಶಿತ ಸದಸ್ಯ ಎಂ.ಎಸ್. ರೋಣದ, ನವಲಗುಂದ ತಲ್ಲೂಕು ಗ್ಯಾರೆಂಟಿ ಸಮಿತಿ ಅಧ್ಯಕ್ಷ ವರ್ಧಮಾನಗೌಡ ಹಿರೇಗೌಡ್ರ, ಹುಬ್ಬಳ್ಳಿ ತಾಲ್ಲೂಕು ಗ್ಯಾರೆಂಟಿ ಸಮಿತಿ ಅಧ್ಯಕ್ಷ ಶಿವಾನಂದ ಭೂಮಣ್ಣವರ, ಕೆಡಿಪಿ ಸದಸ್ಯರಾದ ಬಸವರಾಜ ನರನರಗುಂದ, ಸಿರಾಜುದ್ದೀನ ಧಾರವಾಡ, ಸೋಮಣ್ಣ ಸಿದ್ನಾಳ, ಬಸವರಾಜ ಬೀರಣ್ಣವರ, ಖಾದರಸಾಬ ಮುಳಗುಂದ, ನಿಜಲಿಂಗಪ್ಪ ಹೊನ್ನನಾಯ್ಕರ, ವೆಂಕಟೇಶ ಗಿರಡ್ಡಿ, ಮಂಜುನಾಥ ಗಾಣಿಗೇರ, ಶ್ರೀಮತಿ ನಂದಿನಿ ಹಾದಿಮನಿ, ಅಶೋಕ ಸಂಕರಡ್ಡಿ, ನವಲಗುಂದ, ಅಣ್ಣಿಗೇರಿ ಹಾಗೂ ಹುಬ್ಬಳ್ಳಿ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.