ಹೊಸದಿಲ್ಲಿ: ರೈತರ ಬಗ್ಗೆ ಹಿಂದೆಯೇ ಅವಹೇಳನಕಾರಿಯಾಗಿ ಮಾತನಾಡಿ, ರಕ್ಷಣಾ ಸಿಬ್ಬಂದಿಯಿಂದ ಕಪಾಳಮೋಕ್ಷ ಮಾಡುವ ಮಾಡಿಸಿಕೊಂಡ ನಂತರವೂ ಬಿಜೆಪಿ ಸಂಸದೆ ಕಂಗನಾ ರಣಾವತ್ ಮತ್ತೊಮ್ಮೆ ರೈತರ ಹೋರಾಟವನ್ನು ಟೀಕಿಸಿ ಸುದ್ದಿಯಾಗಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು ರೈತರ ಹೋರಾಟವನ್ನು ಬಾಂಗ್ಲಾ ದಂಗೆಗೆ ಹೋಲಿಕೆ ಮಾಡಿ ಮಾತನ್ನಾಡಿದ್ದಾರೆ. ಈ ವಿಡಿಯೋ ತುಣುಕುಗಳನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದು ಈಗ ವೈರಲ್ ಆಗಿದೆ.
ಸಾಮಾಜಿಕ ಜಾಲತಾಣದಲ್ಲಿ ಕಂಗನಾ ಹೇಳಿಕೆ ವಿರುದ್ಧ ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಸಂಸದೆಯಾಗಿ ಆಯ್ಕೆಯಾದ ನಂತರವೂ ಕಂಗನಾ ಹೇಳಿಕೆಗಳು ರೈತರ ವಿರುದ್ಧವೇ ವ್ಯಕ್ತವಾಗುತ್ತಿದ್ದು, ಈ ಹಿಂಎ ರೈತರ ಹೋರಾಟದ ವಿರುದ್ಧ ಮಾತನಾಡಿದ ಕಾರಣಕ್ಕೆ ಭದ್ರತಾ ಸಿಬ್ಬಂದಿ ಹಲ್ಲೆ ನಡೆಸಿದ್ದರು.