ತಿರುಪತಿ ತಿಮ್ಮಪ್ಪನಿಗೆ ಕೆಎಂಎಫ್ ತುಪ್ಪ : ಲಡ್ಡಿಗೆ ಬರಲಿದೆ ನಂದಿನಿಯ ಘಮ
ಬೆಂಗಳೂರು: ತಿರುಪತಿ ಲಡ್ಡು ಇನ್ಮುಂದೆ ನಂದಿನ ಘಮ ಘಮ ಪರಿಮಳದೊಂದಿಗೆ ನಮ್ಮ ಕೈ ಸೇರಲಿದೆ. ತಿರುಪತಿ ದೇವಸ್ಥಾನದಲ್ಲಿ ವಿತರಿಸುವ ಲಡ್ಡುಗೆ ನಂದಿನಿ ತುಪ್ಪ ಸರಬರಾಜು ಮಾಡಲಾಗುತ್ತದೆ.
ಕಳೆದ ಮೂರು ವರ್ಷದಿಂದ ಟೆಂಡರ್ ಪ್ರಕ್ರಿಯೆಯಲ್ಲಿನ ಗೊಂದಲದಿಂದಾಗಿ ನಂದಿನಿ ತಪ್ಪ ಸರಬರಾಜು ನಿಲ್ಲಿಸಲಾಗಿತ್ತು. ಇದೀಗ ಟಿಟಿಡಿ ಮತ್ತು ಕೆಎಂಎಫ್ ಹೊಸ ಒಪ್ಪಂದ ಮಾಡಿಕೊಂಡಿದ್ದು, ತುಪ್ಪ ಸರಬರಾಜು ಮಾಡಲು ಸಜ್ಜಾಗಿದೆ.
ಒಪ್ಪಂದದ ಪ್ರಕಾರ ಮೊದಲ ಹಂತದಲ್ಲಿ 3050 ಟನ್ ತುಪ್ಪವನ್ನು ಟಿಟಿಡಿಗೆ ಸರಬರಾಜು ಮಾಡಲಾಗುತ್ತದೆ. ಆ ಮೂಲಕ ತಿರುಪತಿ ಲಡ್ಡುಗೆ ಮತ್ತೇ ನಂದಿಯ ಘಮಲು ಬರಲಿದೆ. ಇದು ಕರ್ನಾಟಕದ ಭಕ್ತರಿಗೆ ಹೆಮ್ಮೆಯ ಸಂಗತಿಯೇ ಸರಿ.
ತುಪ್ಪ ಸರಬರಾಜು ಪ್ರಕ್ರಿಯೆಗೆ ಸಿಎಂ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಚಾಲನೆ ನೀಡಿದ್ದು, ಕೆಎಂಎಫ್ ಮತ್ತು ಟಿಟಿಡಿ ಒಪ್ಪಂದದ ಬಗ್ಗೆ ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್ ಮಾಹಿತಿ ಹಂಚಿಕೊಂಡಿದ್ದಾರೆ.


