ಬೆಂಗಳೂರು: ಬಿಜೆಪಿ ಶಾಸಕ ಮುನಿರತ್ನ ವಿರದ್ಧ ಜಾತಿನಿಂದನೆ ಪ್ರಕರಣ ದಾಖಲಾಗಿದ್ದು, ವೈರಲ್ ಆಗಿತುವ ವಿಡಿಯೋ ಬಗ್ಗೆ ಬಿಜೆಪಿಯಲ್ಲೇ ಆಕ್ರೋಶ ವ್ಯಕ್ತವಾಗಿದೆ.
ಆಡಿಯೋದಲ್ಲಿ ಮುನಿರತ್ನ ಗುತ್ತಿಗೆದಾರನ ಜಾತಿ ಕೇಳಿ, ಆತನ ಹೆಂಡತಿ ಮತ್ತು ತಾಯಿ ಬಗ್ಗೆ ಮಾಯನಾಡಿರುವುದು ಹಾಗೂ ಮತ್ತೊಬ್ಬ ದಲಿತ ವ್ಯಕ್ತಿಯ ಜಾತಿಯ ಬಗ್ಗೆ ಅವಹೇಳನಕರವಾಗಿ ಮಾತನಾಡಿರುವುದು ಬೆಳಕಿಗೆ ಬಂದಿದೆ.
ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಬಿಜೆಪಿ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಯಾರೇ ಆಗಲಿ ಇಂತಹ ನಡೆಯನ್ನು ಸಹಿಸುವುದಿಲ್ಲ. ಘಟನೆಗೆ ಸಂಬಂಧ ನಾನು ಹೈಕಮಾಂಡ್ ಗೆ ದೂರು ನೀಡುತ್ತೇನೆ ಎಂದಿದ್ದಾರೆ.
ಆಡಿಯೋ ಕೇಳಿದರೆ ನನಗೆ ಬೇಸರವಾಗುತ್ತಿದೆ. ಇದರ ಕುರಿತು ಸಮಗ್ರ ತನಿಖೆಯಾಗಬೇಕು. ಪೊಲೀಸರು ಸೂಕ್ತ ಕ್ರಮ ತೆಗೆದುಕೊಳ್ಳಲಿ, ಬಿಜೆಪಿ ಇದನ್ನೆಲ್ಲ ಸಹಿಸುವುದಿಲ್ಲ, ನಾನಂತೂ ಈ ವಿಚಾರದಲ್ಲಿ ಯಾರ ಮರ್ಜಿಗೂ ಬೀಳುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ