ರಾಜಕೀಯ ಸುದ್ದಿ

ಕರಗ ಉತ್ಸವಕ್ಕೆ ಹಣ ಬಿಡುಗಡೆ ವಿಚಾರದಲ್ಲಿ ಸುಳ್ಳು ಸುದ್ದಿ:ಜೆಡಿಎಸ್ ಗೆ ಜಾಡಿಸಿದ ಕಾಂಗ್ರೆಸ್

Share It

ಬೆಂಗಳೂರು: ಬೆಂಗಳೂರಿನ ಐತಿಹಾಸಿಕ ಕರಗ ಮಹೋತ್ಸವ ನಡೆಸಲು ಸರಕಾರ ಹಣ ಬಿಡುಗಡೆ ಮಾಡಿಲ್ಲ ಎಂದು ಟ್ವೀಟ್ ಮಾಡುವ ಮೂಲಕ ನಗೆಪಾಟಲಿಗೀಡಾದ ಜೆಡಿಎಸ್ ಗೆ ಕಾಂಗ್ರೆಸ್ ಜಾಡಿಸಿದೆ.

ಸಾಮಾಜಿಕ ಜಾಲತಾಣದಲ್ಲಿಯೇ ಜೆಡಿಎಸ್ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿದ್ದು, ಕರಗ ಉತ್ಸವಕ್ಕೆ ಶುಕ್ರವಾರವೇ ಬಿಬಿಎಂಪಿ ಕಡೆಯಿಂದ ಹಣ ಬಿಡುಗಡೆಯಾಗಿದ್ದು, ತಲೆ ಇಲ್ಲದ ಅಯೋಗ್ಯರನ್ನು ಬಿಟ್ಟು ಸ್ವಲ್ಪ ತಲೆ ಇರುವವರನ್ನು ಸಾಮಾಜಿಕ ಜಾಲತಾಣ ನಿರ್ವಹಣೆಗೆ ನೇಮಿಸಿಕೊಳ್ಳಿ ಎಂದು ಸಲಹೆ ನೀಡಿದೆ.

ಬಿಜೆಪಿ ಜತೆಗೆ ಸೇರಿ ಅವರದ್ದೇ ಬುದ್ದಿ ಕಲಿತಿರುವ ಜೆಡಿಎಸ್, ಚಾಮುಂಡೇಶ್ವರಿ ದೇವಸ್ಥಾನ, ಹುಲಿಗೆಮ್ಮ ದೇವಸ್ಥಾನ, ಸವದತ್ತಿ ಯಲ್ಲಮ್ಮ, ಘಾಟಿ ಸುಬ್ರಮಣ್ಯ ದೇವಸ್ಥಾನಗಳಿಗೆ ಪ್ರಾಧಿಕಾರ ರಚನೆ ಮಾಡಿ ಹೊಸ ಬಾಷ್ಯ ಬರೆದಿದ್ದು ಕಾಂಗ್ರೆಸ್ ಸರಕಾರವೇ ಹೊರತು, ಹಿಂದೂಗಳ ಪರ ಎಂದು ಕರೆದುಕೊಳ್ಳುವ ಬಿಜೆಪಿ ಸರಕಾರವಲ್ಲ ಎಂದು ಟಾಂಗ್ ನೀಡಿದೆ.

ರಾಜ್ಯದ ಮುಜರಾಯಿ ಇಲಾಖೆ ಅರ್ಚಕರ ತಸ್ತಿಕ್ ಹಣವನ್ನು 60, 000 ದಿಂದ 72,000 ಹೆಚ್ಚಿಸಿತುವುದನ್ನು ಮರೆತಿದ್ದೀರಿ, ತಸ್ತೀಕ್ ಮೊತ್ತವನ್ನು ಸಿದ್ದರಾಮಯ್ಯ ಅವರು ನಾಲ್ಕು ಬಾರಿ ಹೆಚ್ಚಳ ಮಾಡಿದ್ದು, ಒಟ್ಟು 48,000 ಹೆಚ್ಚಿಸಿದ ಖ್ಯಾತಿ ಅವರದ್ದು. ನಿಮ್ಮ ಕುಮಾರಸ್ವಾಮಿ ಆಗಲೀ, ದೇವೇಗೌಡರಾಗಲೀ, ಸಿಎಂ ಆಗಿದ್ದಾಗ, ಈ ಬಗ್ಗೆ ಯೋಚನೆಯನ್ನೂ ಮಾಡಿರಲಿಲ್ಲ ಎಂದು ಗೇಲಿ ಮಾಡಿದೆ.

ಹಿಂದೂ ದೇವಾಲಯಗಳ ಆದಾಯವನ್ನು ದೇವಸ್ಥಾನದ ಅಭಿವೃದ್ಧಿ ಹೊರತುಪಡಿಸಿ ಬೇರೆ ಯಾವುದಕ್ಕೂ ಬಳಸುವಂತಿಲ್ಲ ಎಂಬ ಕಾನೂನು ರಾಜ್ಯದಲ್ಲಿದೆ ಎಂಬ ಪರಿಜ್ಞಾನ ನಿಮಗಿಲ್ಲವೇ? ಎಂದು ಪ್ರಶ್ನಿಸಿರುವ ಕಾಂಗ್ರೆಸ್, ಇದೇ ರೀತಿ ಸುಳ್ಳು ಹೇಳಿದರೆ ರಾಜ್ಯದ ಜನ ಕ್ಯಾಕರಿಸಿ ಉಗಿಯುತ್ತಾರೆ. ಇದನ್ನು ನೋಡಿ ನಿಮ್ಮ ಬ್ರದರ್ ಸ್ವಾಮಿ ಗೊಳೋ ಅನ್ನಬಹುದು ಎಂದು ವ್ಯಂಗ್ಯವಾಡಿದೆ.


Share It

You cannot copy content of this page