ಬೆಂಗಳೂರು: ಸ್ಯಾಂಡಲ್ವುಡ್ನ ಖ್ಯಾತ ನಟಿ ರಚಿತಾ ರಾಮ್ ಅವರ ಮೇಲೆ ಸಂಜು ವೆಡ್ಸ್ ಗೀತಾ- 2 ಹಾಗೂ ಉಪ್ಪಿ ರುಪ್ಪಿ ಸಿನಿಮಾ ತಂಡದವರು ಆರೋಪ ಮಾಡಿದ್ದರು. ಈ ಕುರಿತು ರಚಿತಾ ರಾಮ್ ಅವರು ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
ರಚಿತಾ ರಾಮ್ ಅವರು ತಮ್ಮ ಅಧಿಕೃತ ಇನ್ಸ್ಟಾ ಅಕೌಂಟ್ನ ವಿಡಿಯೋದಲ್ಲಿ ಮಾತನಾಡಿದ್ದು, ಈಗ ಒಂದು ವಾರದಿಂದ ನನ್ನ ಮೇಲೆ ಅರೋಪಗಳು ಕೇಳಿ ಬರುತ್ತಿವೆ. ಇದರಲ್ಲಿ ಮೊದಲು ಸಂಜು ವೆಡ್ಸ್ ಗೀತಾ-2 ಸಿನಿಮಾ ಬಗ್ಗೆ ಮಾತನಾಡುತ್ತೇನೆ. ನನ್ನ ತಂಡ, ನಿರ್ಮಾಪಕರು, ನಿರ್ದೇಶಕರು ಹಾಗೂ ಹೀರೋ ಕೂಡ ಮಾಧ್ಯಮಗೋಷ್ಠಿಯಲ್ಲಿ ನನ್ನ ಬಗ್ಗೆ ಮಾತನಾಡಿದ್ದಾರೆ. ಅವರು ಮಾತನಾಡುವಾಗ ಬಳಸಿದಂತ ಪದಗಳು, ಸ್ಟೇಟ್ಮೆಂಟ್ಗಳು ತುಂಬಾ ನೋವು ಉಂಟುಮಾಡಿವೆ, ತುಂಬಾನೇ ಬೇಸರ ಆಗಿದೆ ಎಂದು ಹೇಳಿದ್ದಾರೆ.
ನಾನು ಸ್ವೀಕರಿಸುವಂತ ವಿಚಾರ ಅಲ್ಲವೇ ಅಲ್ಲ. ಸಂಜು ವೆಡ್ಸ್ ಗೀತಾ- 2 ಸಿನಿಮಾ ತಂಡದ ಜೊತೆ ಒಂದೂವರೆ ವರ್ಷ ಸಿನಿಮಾ ಮಾಡಿರುತ್ತೇನೆ. ಜನವರಿ 17 ರಂದು ಮೊದಲ ಬಾರಿಗೆ ಈ ಸಿನಿಮಾ ರಿಲೀಸ್ ಆಗುತ್ತದೆ. ಈ ಸಮಯದಲ್ಲಿ ಎಲ್ಲ ವೇದಿಕೆಗಳಲ್ಲಿ ನನ್ನ ಬಗ್ಗೆ ತುಂಬಾ ಒಳ್ಳೆಯ ಮಾತುಗಳನ್ನಾಡುತ್ತಾರೆ. ಮೊದಲ ಬಾರಿ ಸಿನಿಮಾ ರಿಲೀಸ್ ಆಗುವಾಗ ನನ್ನನ್ನು ಎಲ್ಲ ರೀತಿಯಿಂದಲೂ ಹೊಗಳಿದ್ದರು ಎಂದು ಹೇಳಿದ್ದಾರೆ.
ಅದೇ ತಂಡ ಇವತ್ತು ರೀ ರಿಲೀಸ್ ಸಮಯದಲ್ಲಿ ನನ್ನ ಬಗ್ಗೆ ತುಂಬಾ ಕೆಟ್ಟದಾಗಿ ಮಾತನಾಡುತ್ತಿದ್ದಾರೆ. ಇದೇ ಮಾತನ್ನು ಮೊದಲ ರಿಲೀಸ್ ಸಂದರ್ಭದಲ್ಲೇ ಮಾತನಾಡಬೇಕಿತ್ತು. ಯಾಕೆ ಆಗ ಕೆಟ್ಟ ಮಾತುಗಳನ್ನು ಆಡಲಿಲ್ಲ. ಆವಾಗ ಅಷ್ಟೊಂದು ಹೊಗಳಿ, ಈಗ ಯಾಕೆ ಕೆಟ್ಟದಾಗಿ ಮಾತನಾಡ್ತಿದ್ದಾರೆ. ಸುಳ್ಳು, ನಾಟಕ ಮಾಡಿ ನನ್ನ ಸಿನಿಮಾ ಕೆರಿಯರ್ ಹಾಳು ಮಾಡಲು ಪ್ರಯತ್ನಿಸಿದ್ದಾರೆ ಎಂದು ನಾಯಕಿ ನಟಿ ರಚಿತಾ ರಾಂ ಆರೋಪಿಸಿದ್ದಾರೆ.