ಆರೋಗ್ಯ ಸುದ್ದಿ

ನಮ್ಮ ಮಕ್ಕಳಿಗೆ ಮೊಟ್ಟೆ ಬೇಡ: ಕೊಡೋದೇ ಆದ್ರೆ ಸ್ಕೂಲ್ ಬಿಡಿಸ್ತೀವಿ: ಮೊಟ್ಟೆ ವಿತರಣೆಗೆ ಕೆಲ ಪೋಷಕರ ತಗಾದೆ

Share It

ಬೆಂಗಳೂರು: ಶಾಲಾ ಮಕ್ಕಳಿಗೆ ಪೌಷ್ಟಿಕಾಂಶ ಕೊರತೆಯಾಗಬಾರದು ಎಂಬ ಕಾರಣಕ್ಕೆ ಸರಕಾರ ಮೊಟ್ಟೆ ವಿತರಣೆ ಮಾಡುತ್ತಿದ್ದು, ಮಂಡ್ಯದ ಶಾಲೆಯೊಂದರಲ್ಲಿ ಮೊಟ್ಟೆ ಕೊಟ್ಟರೆ ಮಕ್ಕಳನ್ನೇ ಶಾಲೆ ಬಿಡಿಸುವುದಾಗಿ ಪೋಷಕರು ಬೆದರಿಕೆ ಹಾಕುತ್ತಿದ್ದಾರೆ.

ಮಂಡ್ಯ ಜಿಲ್ಲೆಯ ಆಲಕೆರೆ ಗ್ರಾಮದಲ್ಲಿ ಶಾಲಾ ಮಕ್ಕಳಿಗೆ ಮೊಟ್ಟೆ ವಿತರಣೆ ಬೇಡ ಎಂದು 80 ಕ್ಕೂ ಹೆಚ್ಚು ಮಕ್ಕಳ ಪೋಷಕರು ತಗಾದೆ ತೆಗೆದಿದ್ದಾರೆ. ಉಳಿದ ಮಕ್ಕಳು ಮೊಟ್ಟೆ ಬೇಕು ಎಂದು ಪಟ್ಟು ಹಿಡಿದಿರುವುದು ವಿವಾದಕ್ಕೆ ಕಾರಣವಾಗಿದೆ. ಈ ಸಮಸ್ಯೆ ಬಗೆಹರಿಸುವುದು ಇದೀಗ ಶಿಕ್ಷಣ ಇಲಾಖೆಗೆ ತಲೆನೋವಾಗಿದೆ.

ಶಾಲೆಯ ಪಕ್ಕದಲ್ಲಿಯೇ ವೀರಭದ್ರೇಶ್ವರ ದೇವಸ್ಥಾನವಿದ್ದು, ಸುತ್ತಮುತ್ತ ಮಾಂಸಹಾರ ನಿಷೇಧ ಮಾಡಲಾಗಿದೆ. ಹೀಗಾಗಿ, ಶಾಲೆಯಲ್ಲಿ ನಮ್ಮ ಮಕ್ಕಳು ಮೊಟ್ಟೆ ತಿನ್ನುವುದನ್ನು ಒಪ್ಪುವುದಿಲ್ಲ ಎಂದು ಒಂದು ಗುಂಪು ಪಟ್ಟಹಿಡಿದರೆ, ಮತ್ತೊಂದು ಗುಂಪು ಶಾಲೆಯ ಮಕ್ಕಳಿಗೆ ಪೌಷ್ಟಿಕಾಂಶ ಕೊರತೆಯಾಗಬಹುದು ಎಂಬ ಕಾರಣಕ್ಕೆ ಸರಕಾರ ಮೊಟ್ಟೆ ಕೊಡುತ್ತಿದ್ದು, ಪಕ್ಕದಲ್ಲಿ ದೇವಸ್ಥಾನವಿದೆ ಎಂಬ ಕಾರಣಕ್ಕೆ ಮೊಟ್ಟೆ ಕೊಡಲು ನಿರಾಕರಿಸಿದರೆ ಹೇಗೆ ಎಂದು ಮತ್ತೊಂದು ಗುಂಪು ಪ್ರಶ್ನೆ ಮಾಡಿದೆ.

ಘಟನೆ ಸಂಬಂಧ ಎರಡು ಗುಂಪಿನ ಕತೆಗೆ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಮಾತನಾಡಿದ್ದು, ಸರಕಾರದ ಆಶಯ ಹಾಗೂ ನಿಯಮ ಉಲ್ಲಂಘನೆಯಾಗದಂತೆ ಕ್ರಮ ತೆಗೆದುಕೊಳ್ಳಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದ್ದಾರೆ. ಗ್ರಾಮಸ್ಥರ ಮನವೊಲಿಸುವ ಪ್ರಯತ್ನವನ್ನು ನಡೆಸಿದ್ದಾರೆ ಎನ್ನಲಾಗಿದೆ.


Share It

You cannot copy content of this page