ಬೆಂಗಳೂರು: ಅತ್ಯಾಚಾರದ ಆರೋಪದಲ್ಲಿ ಕಿತ್ತಾಡಿಕೊಂಡಿದ್ದ ಮಡೆನೂರು ಮನು ಮತ್ತು ಮಿಂಚು ಜೋಡಿ ಇದೀಗ ಒಂದಾಗಿದ್ದು, ಪ್ರಕರಣವನ್ನು ರಾಜೀ ಮಾಡಿಕೊಂಡಿದೆ.
ಹೈಕೋರ್ಟ್ ನ ಧಾರವಾಡ ಪೀಠದಲ್ಲಿ ಪರಸ್ಪರ ರಾಜೀ ಸಂಧಾನಕ್ಕೆ ಒಪ್ಪಿಗೆ ಸೂಚಿಸುವ ಮೂಲಕ ಇಬ್ಬರು ನಟನಟಿಯರು ಪ್ರಕರಣವನ್ನು ಇಲ್ಲಿಗೆ ಕೈಬಿಡಲು ತೀರ್ಮಾನಿಸಿದರು ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಪ್ರಕರಣವನ್ನು ಇತ್ಯರ್ಥಪಡಿಸಿತು.
ಮಡೆನೂರು ಮನು ಸಹನಟಿಯ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಸ್ವತಃ ಮಿಂಚು ಈ ಆರೋಪ ಮಾಡಿದ್ದು, ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಹೀಗಾಗಿ, ಮಡೆನೂರು ಮನು ಅವರನ್ನು ಪೊಲೀಸರು ಬಂಧಿಸಿ, ಜೈಲಿಗೆ ಕಳುಹಿಸಿದ್ದರು.
ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಮಡೆನೂರು ಮನು ಇದೀಗ ಪ್ರಕರಣವನ್ನು ಇತ್ಯರ್ಥ ಮಾಡಿಕೊಂಡಿದ್ದಾರೆ. ಈ ನಡುವೆ ಮನು ಸ್ಯಾಂಡಲ್ ವುಡ್ ನ ಹಿರಿಯ ನಟರ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ ಎಂಬ ಆಡಿಯೋ ವೈರಲ್ ಆಗಿದ್ದು, ದೊಡ್ಡ ವಿವಾದಕ್ಕೆ ಕಾರಣವಾಗಿತ್ತು.
ಮನು ಸ್ಯಾಂಡಲ್ ವುಡ್ ಸ್ಟಾರ್ ಗಳಾದ ಶಿವರಾಜ್ ಕುಮಾರ್, ದರ್ಶನ್ ಮತ್ತು ಧೃವ ಸರ್ಜಾ ಬಗ್ಗೆ ಕೆಟ್ಟದಾಗಿ ಮಾತನಾಡಿರುವ ವಿಡಿಯೋ ವೂರಲ್ ಆಗಿತ್ತು. ಈ ಕುರಿತು ಸ್ವತಃ ಮನು ಈ ಎಲ್ಲ ನಟರ ಕ್ಷಮೆ ಕೋರಿದ್ದರು. ಅವರು ಅಭಿನಯಿಸಿದ್ದ ಸಿನಿಮಾ ಕುಲದಲ್ಲಿ ಕೋಳ್ಯಾವುದೋ ಬಿಡುಗಡೆ ಸಂದರ್ಭದಲ್ಲಿ ಈ ವಿವಾದವಾಗಿದ್ದು, ಸಿನಿಮಾಗೆ ಹಿನ್ನಡೆಯಾಗಿತ್ತು.