ರಾಜಕೀಯ ಸುದ್ದಿ

ಚುನಾವಣೆಯಲ್ಲಿ ಗೆಲುವು ನಮ್ಮದೇ, ಲಿಂಗಾಯಿತರೇ ಬಿಡಿಸಿಸಿ ಬ್ಯಾಂಕಿನ ಅಧ್ಯಕ್ಷ : ಬೆಮುಲ್‌ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ

Share It

ಬೆಳಗಾವಿ: ಬಿಡಿಸಿಸಿ ಬ್ಯಾಂಕ್‌ ಪ್ರಗತಿಗೆ ಲಿಂಗಾಯತ ಸಮುದಾಯದ ಕೊಡುಗೆ ಬಹಳಷ್ಟಿದೆ. ಹೀಗಾಗಿ ಲಿಂಗಾಯಿತರೇ ಬಿಡಿಸಿಸಿ ಬ್ಯಾಂಕಿನ ಅಧ್ಯಕ್ಷ ಆಗಲಿದ್ದಾರೆ ಎಂದು ಬೆಮುಲ್‌ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ನಗರದ ಡಿಸಿಸಿ ಬ್ಯಾಂಕ್ ಚುನಾವಣೆ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಡಿಸಿಸಿ ಬ್ಯಾಂಕ್‌ ಬೆಳೆಯಲು ಮುರುಗೋಡ ಅಜ್ಜನವರ ಆಶೀವಾರ್ದ ಇದೆ. ಇಲ್ಲಿವರೆಗೂ ಯಾರೇ ನಿರ್ದೇಶಕರಾಗಿದ್ದರೂ ಲಿಂಗಾಯತ ಸಮುದಾಯದ ಮುಖಂಡರು ಅಧ್ಯಕ್ಷರಾಗಿದ್ದಾರೆ ಮೊದಲಿನಿಂದಲೂ ಲಿಂಗಾಯತರೇ ಬ್ಯಾಂಕಿನ್‌ ಏಳಿಗೆಗೆ ಶ್ರಮಿಸಿದ್ದಾರೆ, ಹೀಗಾಗಿ ಅವರು ಮುಂದುವರೆಲಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಜಾರಕಿಹೊಳಿ ಕುಟುಂಬದ ಇಬ್ಬರು ಸಹೋದರರು ನಿರ್ದೇಶಕ ಸ್ಥಾನಕ್ಕೆ ನಾಮಪತ್ರ ಸಲ್ಲಿಕ್ಕೆ ಮಾಡಿದ್ದಾರೆ. ಗೋಕಾಕ್ ತಾಲೂಕಿನಿಂದ ಅಮರನಾಥ ಜಾರಕಿಹೊಳಿ ಹಾಗೂ ಬೆಳಗಾವಿ ತಾಲೂಕಿನಿಂದ ರಾಹುಲ್ ಜಾರಕಿಹೊಳಿ ಅವರನ್ನು ಕಣಕ್ಕೆ ಇಳಿಸಲಾಗಿದೆ. ರಾಜಕೀಯದಲ್ಲಿ ಮೊದಲೇ ಹೆಸರು ಘೋಷಿಸಿ ಚುಣಾವಣೆ ಮಾಡಬೇಕು ಎನ್ನುವ ನಿಯಮ ಇಲ್ಲ, ಕೊನೆಯ ಕ್ಷಣದಲ್ಲಿ ಲೇಕ್ಕಾಚಾರ ಬೇರೆ.. ಬೇರೆ.. ಆಗಬಹುದು, ಅದೇ ರೀತಿ ಇಬ್ಬರು ಜಾರಕಿಹೊಳಿ ಸಹೋದರರ ಹೆಸರು ಪೈನಲ್‌ ಆದರಿಂದ ಜನರ ಆಶೀರ್ವಾದೊಂದಿಗೆ ಚುನಾವಣೆ ಎದುರಿಸುತ್ತಿದ್ದಾರೆ ಇದಕ್ಕೆಲ್ಲ ನಿಮ್ಮ ಸಹಕಾರ ಬೇಕು ಎಂದು ಮನವಿ ಮಾಡಿಕೊಂಡರು.

6 ಜನರು ಆಕಾಂಕ್ಷಿಗಳಿದ್ದರೂ ಸಹ ಹೊಂದಾಣಿಕೆ ಮಾಡಿಕೊಂಡು 13 ಜನರಿಂದ ನಿರ್ದೇಶಕ ಸ್ಥಾನಕ್ಕೆ ನಾಮ ಪತ್ರಸಲ್ಲಿಕೆ ಆಗಿದೆ. ಮೂಡಲಗಿ ತಾಲೂಕು ನಿರ್ದೇಶಕ ಸ್ಥಾನಕ್ಕೆ ನೀಲಕಂಠ ಕಪ್ಪಲಗುದ್ದಿ , ಗೋಕಾಕ್ ತಾಲೂಕಿನಿಂದ ಅಮರನಾಥ ಜಾರಕಿಹೊಳಿ, ರಾಮದುರ್ಗದಿಂದ ಶ್ರೀಕಾಂತ ದವನ್ನವರ, ಹುಕ್ಕೇರಿ ರಾಜೇಂದ್ರ ಪಾಟೀಲ, ಬೆಳಗಾವಿ ತಾಲೂಕಿನಿಂದ ರಾಹುಲ್ ಜಾರಕಿಹೊಳಿ ಇತರ ಕ್ಷೇತ್ರಕ್ಕೆ ಚನ್ನರಾಜ್ ಹಟ್ಟಿಹೊಳಿ ಅವರನ್ನು ಕಣಕ್ಕಿಳಿಸಲಾಗಿದೆ. ಚುನಾವಣೆ ತಯಾರಿ ನಡೆದಿದೆ. ನಮಗೆ ಸಂಪೂರ್ಣ ವಿಶ್ವಾಸ ಇದೆ. ದೇವರ, ಜನರ ಆಶೀರ್ವಾದಿಂದ ಚುನಾವಣೆ ಗೆದ್ದು, ಬಿಡಿಸಿಸಿ ಬ್ಯಾಂಕಿನ್‌ ಅಧಿಕಾರಿ ಚುಕ್ಕಾಣಿ ಹಿಡಿಲಿದ್ದೆವೆ, ಬಿಡಿಸಿಸಿ ಬ್ಯಾಂಕಿನ್‌ ಪ್ರಗತಿಗೆ ಶ್ರಮಿಸುತ್ತೆವೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ವಿಶ್ವಾಸ ವ್ಯಕ್ತಪಡಿಸಿದರು.

ಯಾವ ಕ್ಷೇತ್ರದಿಂದ ಅವಿರೋಧವಾಗುವ ಲಕ್ಷಣ ಇವೆ ಅಲ್ಲಿ ಬೇರೆಯವರನ್ನು ಚುನಾವಣೆಯ ಕಣಕ್ಕೆ ಇಳಿಸಲಾಗುತ್ತಿದೆ. ನಮಗೆ ಜನರ ಮೇಲೆ ವಿಶ್ವಾಸ ಇದೆ, ರೈತರ ಆರ್ಶೀವಾದದಿಂದ ನಮ್ಮ ಪೆನಲ್ ಅಧಿಕಾರಕ್ಕೆ ಬರಲಿದೆ. ಈಗಾಗಲೇ ಉತ್ತಮ ಪಾಟೀಲ್ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸದಂತೆ ತಿಳಿಸಲಾಗಿದೆ ಅವರನ್ನು ಕೂಡ ವಿಶ್ವಾಸಕ್ಕೆ ತೆಗದುಕೊಳ್ಳಲಾವುದು . ಅವಿರೋಧ ಆಯ್ಕೆಗೆ ಪ್ರಯತ್ನ ನಡೆದಿವೆ, ಹೆಚ್ಚು ಕಡಿಮೆಯಾದರೂ ಚುನಾವಣೆ ನಡೆಯಬಹುದು ಎಂದು ಹೇಳಿದರು.

ಸೂರ್ಯ ಚಂದ್ರರ ಬಗ್ಗೆ ಲಕ್ಷ್ಮಣ ಸವದಿ ಯಾವ ಅರ್ಥದಲ್ಲಿ ಹೇಳಿದ್ದಾರೆ ಗೊತ್ತಿಲ್ಲ. ಆ ಮಾತನನ್ನು ಅಷ್ಟೋಂದು ಪರಿಗಣಿಸುವ ಅಗತ್ಯವಿಲ್ಲ ಎಂದು ತಳ್ಳಿಹಾಕಿದರು.

ಈಗಾಗಲೇ ಚನ್ನರಾಜ್ ಹಟ್ಟಿಹೊಳಿ ಸಕ್ಕರೆ ಕಾರ್ಖಾನೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಅವರೂ ಕೂಡ ಮತ್ತೆ ಸಹಕಾರಿ ರಂಗದ ಮೂಲಕ ರೈತರ ಸೇವೆಗೆ ಮುಂದಾಗಿದ್ದಾರೆ. ಅದಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದರು.

ಬೆಳಗಾವಿ ತಾಲೂಕು ನಿರ್ದೇಶಕ ಸ್ಥಾನಕ್ಕೆ ರಾಹುಲ್ ಜಾರಕಿಹೊಳಿ ನಾಮ ಪತ್ರ ಸಲ್ಲಿಸಿದ ಬಳಿಕ ಜನರ ಕಡೆಗೆ ಕೈ ಬೀಸಿ, ಆಶೀರ್ವಾದ ಮಾಡುವಂತೆ ಮನವಿ ಮಾಡಿಕೊಂಡರು.

ಈ ವೇಳೆ ಬೂಡಾ ಅಧ್ಯಕ್ಷ ಲಕ್ಷ್ಮಣರಾವ್‌ ಚಿಂಗಳೆ, ಸಚಿವರ ಆಪ್ತ ಸಹಾಯಕರಾದ ಮಲಗೌಡ ಪಾಟೀಲ ಹಾಗೂ ಇತರರು ಇದ್ದರು.


Share It

You cannot copy content of this page